ಕೊನೆಗೂ ‘ಏರ್ ಇಂಡಿಯಾ’ದ ಮಾಲಕತ್ವ ಟಾಟಾ ಸಮೂಹಕ್ಕೆ ! – ಅಧಿಕೃತವಾಗಿ ಘೋಷಿಸಿದ ಕೇಂದ್ರ ಸರಕಾರ

1953 ರಲ್ಲಿ ಭಾರತ ಸರಕಾರವು ಟಾಟಾ ಸಂಸ್ಥೆಯ ಬಳಿಯೇ ಇದ್ದ ಏರ್ ಇಂಡಿಯಾ ಸಂಸ್ಥೆಯನ್ನು ತನ್ನ ಅಧಿಕಾರ ಕ್ಷೇತ್ರಕ್ಕೆ ತೆಗೆದುಕೊಂಡಿತ್ತು.

ಹಿಮಾಚಲ ಪ್ರದೇಶದಲ್ಲಿರುವ ದೇವಸ್ಥಾನಗಳ ಹಣ ಕೇವಲ ಹಿಂದೂಗಳಿಗಾಗಿ ವಿನಿಯೋಗ ! – ರಾಜ್ಯದ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ

ಹಿಮಾಚಲ ಪ್ರದೇಶ ಸರಕಾರವು ಕೈಗೊಂಡ ಈ ನಿರ್ಣಯವನ್ನು ಭಾಜಪ ಅಧಿಕಾರ ಇರುವ ಎಲ್ಲ ಸರ್ಕಾರಗಳು ತೆಗೆದುಕೊಳ್ಳಬೇಕು, ಹಾಗೆಯೇ ಕೇಂದ್ರ ಸರಕಾರವೂ ಇದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳ ಅನ್ನಿಸುತ್ತದೆ !

ನಷ್ಟದಲ್ಲಿರುವ ‘ಏರ್ ಇಂಡಿಯಾ’ ಕಂಪನಿಯನ್ನು ಈಗ ‘ಟಾಟಾ ಸನ್ಸ್’ ಖರೀದಿಸಲಿದೆ !

ಸರಕಾರಿ ಕಂಪನಿಗಳನ್ನು ಲಾಭದಲ್ಲಿ ನಡೆಸಲಿಕ್ಕಾಗದಿರಲು ಇದುವರೆಗೆ ದೇಶದಲ್ಲಿ ರಾಜ್ಯವಾಳಿದ ಎಲ್ಲ ಪಕ್ಷದ ರಾಜಕಾರಣಿಗಳು ಜವಾಬ್ದಾರರಾಗಿದ್ದಾರೆ, ಇದು ಭಾರತಕ್ಕೆ ಲಜ್ಜಾಸ್ಪದವಾಗಿದೆ !

ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ಬಳಿಕ ಉತ್ತರಾಖಂಡದಲ್ಲಿನ ಟಿಹರೀ ಅಣೆಕಟ್ಟಿನ ಸಮೀಪದ ಅಕ್ರಮ ಮಸೀದಿಯನ್ನು ನೆಲಸಮಗೊಳಿಸಿದ ಆಡಳಿತ !

20 ವರ್ಷಗಳಿಂದ ಅಣೆಕಟ್ಟಿನ ಬಳಿ ಅಕ್ರಮ ಮಸೀದಿಯಿರುವುದು, ಇಲ್ಲಿಯವರೆಗಿನ ಸರ್ವಪಕ್ಷೀಯ ಆಡಳಿತಗಾರರಿಗೆ ನಾಚಿಕೆಗೇಡು !

ಮೈಸೂರು (ಕರ್ನಾಟಕ) ಇಲ್ಲಿನ ಮಹಾದೇವಿಯ ದೇವಾಲಯವನ್ನು ಕೆಡವಿದ ಬಗ್ಗೆ ವಿಹಂಪ ಹಾಗೂ ಬಜರಂಗದ ದಳದವರಿಂದ ಸರಕಾರದ ವಿರುದ್ಧ ಆಂದೋಲನ!

ಆಡಳಿತವು ರಾಜ್ಯದಲ್ಲಿನ ಹಿಂದೂಗಳ ದೇವಾಲಯಗಳನ್ನು ಅನಧಿಕೃತವಾಗಿದೆ ಎಂದು ಹೇಳಿ ಕೆಡಹುತ್ತಿದೆ. ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಇವು ಅದನ್ನು ವಿರೋಧಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹಳೆಯ ಮಹಾದೇವಿ ದೇವಾಲಯವನ್ನು ಧ್ವಂಸ ಮಾಡಿರುವುದನ್ನು ನಿಷೇಧಿಸಿ ವಿಹಂಪ ಹಾಗೂ ಬಜರಂಗ ದಳದಿಂದ ರಾಜ್ಯದಲ್ಲಿನ ಭಾಜಪ ಸರಕಾರದ ವಿರುದ್ಧ ಆಂದೋಲನ ನಡೆಸಲಾಯಿತು.

ಮಥುರೆಯ ಶ್ರೀಕೃಷ್ಣ ಜನ್ಮಸ್ಥಾಳದ ಸುತ್ತಲಿನ 10 ಚದರ ಕಿಲೋಮೀಟರ ಪರಿಧಿಯ ಜಾಗಕ್ಕೆ ‘ತೀರ್ಥಕ್ಷೇತ್ರ’ ಎಂದು ಘೋಷಣೆ !

ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ

ಬಾದಾಮಿಯಲ್ಲಿ ಪುರಾತನ ದೇವಸ್ಥಾನಗಳನ್ನು ಕೆಡವಿ ವಸತಿನಿಲಯ ನಿರ್ಮಿಸುವ ಆಡಳಿತದ ನಿರ್ಧಾರಕ್ಕೆ ಹಿಂದುತ್ವನಿಷ್ಠರಿಂದ ವಿರೋಧ !

ಬಿಜೆಪಿಯ ರಾಜ್ಯದಲ್ಲಿ ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಉತ್ತರಪ್ರದೇಶದಲ್ಲಿನ ‘ಸುಲ್ತಾನಪುರ’ ಜಿಲ್ಲೆಯ ಹೆಸರನ್ನು ಬದಲಿಸಿ ‘ಕುಶ ಭವನಪುರ’ ಮಾಡುವಂತೆ ಪ್ರಸ್ತಾಪ

13 ನೆಯ ಶತಮಾನದಲ್ಲಿ ಈ ಜಿಲ್ಲೆಯ ಹೆಸರು ‘ಕುಶ ಪವನಪುರ’ ಆಗಿತ್ತು. ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದ ನಂತರ ಇದರ ಹೆಸರನ್ನು ‘ಸುಲ್ತಾನಪುರ’ ಎಂದು ಮಾಡಲಾಯಿತು.

ಮನೆಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ೨೫ ರೂಪಾಯಿ ಹೆಚ್ಚಳ !

ಸಬ್ಸಿಡಿ ಇಲ್ಲದಿರುವ ಮನೆಬಳಕೆಯ ಎಲ್.ಪಿ.ಜಿ. ಸಿಲಿಂಡರ್‌ನ ಬೆಲೆಯನ್ನು ೨೫ ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯ ನಂತರ ದೆಹಲಿ ಮತ್ತು ಮುಂಬಯಿ ನಗರಗಳಲ್ಲಿ ಮನೆ ಬಳಕೆಯ ೧೪.೨ ಕೆಜಿಯ ಎಲ್.ಪಿ.ಜಿ ಸಿಲಿಂಡರಿನ ಬೆಲೆ ೮೫೯.೫ ರೂಪಾಯಿ ಆಗಿದೆ.

ನ್ಯಾಯಬದ್ಧವಾಗಿ ಬೇಹುಗಾರಿಕೆಯಾಗಿದ್ದರೆ, ಅದಕ್ಕೆ ಅನುಮತಿ ನೀಡುವ ವಿಭಾಗವು ಪ್ರಮಾಣಪತ್ರ ದಾಖಲಿಸಬೇಕು ! – ಸರ್ವೋಚ್ಚ ನ್ಯಾಯಾಲಯ

ನಾವು ನಿಮಗೆ (ಕೇಂದ್ರ ಸರಕಾರಕ್ಕೆ) ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಕೇಳುತ್ತಿಲ್ಲ. ಯಾವುದು ನೀವು ಹೇಳಲಾಗುವುದಿಲ್ಲ, ಅದನ್ನು ಹೇಳಲು ನಾವು ಕೇಂದ್ರ ಸರಕಾರಕ್ಕೆ ಒತ್ತಾಯಿಸುವುದಿಲ್ಲ. ನಾವು ಕೇವಲ ಜನರ ಗೌಪ್ಯತೆಯ ಉಲ್ಲಂಘನೆ ಮತ್ತು ಬೇಹುಗಾರಿಕೆಯ ನ್ಯಾಯಬದ್ಧತೆಯ ದೃಷ್ಟಿಯಿಂದ ನೋಟಿಸ್ ನೀಡಲು ಇಚ್ಚಿಸುತ್ತೇವೆ.