ಕೋರೋನಾದ ರೋಗಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ಲಾಟ್‍ಫಾರ್ಮ ಟಿಕೆಟ್ ಬೆಲೆ 50 ರೂಪಾಯಿಂದ ಮತ್ತೆ 10 ರೂಪಾಯಿಗೆ ಇಳಿಕೆ !

ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ರೈಲ್ವೆ ಇಲಾಖೆಯು ಪ್ಲಾಟ್‍ಫಾರ್ಮ ಟಿಕೆಟಿನ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಕೊರೋನಾ ಸಮಯದಲ್ಲಿ ರೈಲ್ವೆಯಿಂದ ಪ್ಲಾಟ್‍ಫಾರ್ಮ ಟಿಕೆಟ್‍ನ ಬೆಲೆಯನ್ನು ಹೆಚ್ಚಿಸಲಾಗಿತ್ತು

‘ಭಾರತೀಯ ಅಧಿಕಾರಿಗಳ ಹೇಳಿಕೆಯಿಂದ ಗಡಿಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಬಹುದು !'(ಅಂತೆ) – ಚೀನಾದ ಕೂಗಾಟ

ಸಿಡಿಎಸ್ ಜನರಲ್ ಬಿಪಿನ್ ರಾವತ್ ಇವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ; ಆದರೆ ಚೀನಾಗೆ ಮೆಣಸಿನಕಾಯಿ ತಿಂದಂತೆ ಕೂಗಾಟ ಮಾಡುತ್ತಿದೆ. ಇದರ ಬದಲು ಚೀನಾವು ಗಡಿಯಲ್ಲಿ ನಡೆಸುತ್ತಿರುವ ಕಿತಾಪತಿ ನಿಲ್ಲಿಸಿ ಮತ್ತು ಅಕ್ಸಾಯಿ ಚೀನಾವನ್ನು ಭಾರತಕ್ಕೆ ಹಿಂತಿರುಗಿಸಬೇಕು !

ಶ್ರಿಕೃಷ್ಣಜನ್ಮಭೂಮಿಯ ಈದ್ಗಾ ಮಸೀದಿಯಲ್ಲಿ ನಡೆಯುವ ನಮಾಜುಪಠಣವನ್ನು ನಿಲ್ಲಿಸಿ !

ಕಳೆದ ಕೆಲವು ದಿನಗಳಿಂದ ಇಲ್ಲಿ ದಿನದಲ್ಲಿ 5 ಸಾರಿ ನಮಾಜುಪಠಣ ಮಾಡಲಾಗುತ್ತಿದೆ. ಹೀಗೆ ಮಾಡಿ ಇಲ್ಲಿಯ ಸೌಹಾರ್ದ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಆದಕಾರಣ ಇಲ್ಲಿ ನಡೆಯುವ ನಮಾಜುಪಠಣ ನಿಲ್ಲಿಸಬೇಕೆಂದು `ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾಧಿಕಾರಿಗೆ ಮನವಿ ನೀಡಿದರು

ಉತ್ತರಪ್ರದೇಶದಲ್ಲಿ ಮಹಾಪುರುಷರ ಜಯಂತಿ ಮತ್ತು ಮಹಾಶಿವರಾತ್ರಿಯಂದು ಕಸಾಯಿಖಾನೆಗಳನ್ನು ತೆರೆಯಲು ಮತ್ತು ಮಾಂಸ ಮಾರಾಟಕ್ಕೆ ನಿಷೇಧ

ಅಹಿಂಸೆಯ ಸಂದೇಶವನ್ನು ಸಾರಿದ ಮಹಾಪುರುಷರ ಜಯಂತಿಯನ್ನು `ಅಹಿಂಸಾ ದಿನ’ ಎಂದು ಆಚರಿಸುವಂತೆಯೂ ಸೂಚಿಸಲಾಗಿದೆ.

ಅಮೆಜಾನ್ ಮೇಲೆ ಕಠಿಣ ಕ್ರಮ ಕೈಗೊಳ್ಳಿ ! – ‘ಕ್ಯಾಟ್’ನ ಬೇಡಿಕೆ

ಇದನ್ನೇಕೆ ಆಗ್ರಹಿಸಬೇಕಾಗುತ್ತದೆ ? ಪೊಲೀಸರು ಅಥವಾ ಆಡಳಿತದಿಂದ ಏಕೆ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಗಾಂಜಾ ಮತ್ತು ಬಾಂಬ್ ತಯಾರಿಸುವ ವಸ್ತುಗಳು ಮಾರಾಟ ಮಾಡಲು ಅವರಿಗೆ ಅನುಮತಿ ಇದೆಯೇ ?

ದೇಶದ ಜನಸಂಖ್ಯೆಯಲ್ಲಿ ಇದೇ ಪ್ರಥಮ ಬಾರಿಗೆ 1 ಸಾವಿರ ಪುರುಷರ ಅನುಪಾತದಲ್ಲಿ 1 ಸಾವಿರದ 20 ಮಹಿಳೆಯರು !

ಈ ಮಾಹಿತಿಯನ್ನು ‘ನ್ಯಾಶನಲ್ ಫ್ಯಾಮಿಲಿ ಹೆಲ್ತ ಸರ್ವೆ-5’ ಇದರ ಅಂಕಿಅಂಶಗಳಲ್ಲಿ ನೀಡಲಾಗಿದೆ. ಈ ಹಿಂದೆ 2015-16 ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ 1 ಸಾವಿರ ಪುರುಷರ ಅನುಪಾತವು 991 ಮಹಿಳೆಯರಿದ್ದರು.

ದೇಶವನ್ನು ನಡೆಸಲು ಪಾಕಿಸ್ತಾನದ ಬಳಿ ಹಣವಿಲ್ಲ ! – ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ನಿಂದ ಸ್ವೀಕೃತಿ

ದೇಶವನ್ನು ನಡೆಸಲು ಪಾಕಿಸ್ತಾನದ ಬಳಿ ಹಣವಿಲ್ಲ; ಆದರೆ ಜಿಹಾದಿ ಭಯೋತ್ಪಾದಕರನ್ನು ಪೋಷಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡಲು, ಸೈನ್ಯದ ಮೇಲೆ ಯಥೇಚ್ಛವಾಗಿ ಖರ್ಚು ಮಾಡಲು ಹಣವಿದೆ, ಈ ಬಗ್ಗೆ ಇಮ್ರಾನ್ ಖಾನ್ ಏಕೆ ಮಾತನಾಡುವುದಿಲ್ಲ ?

ಕೇರಳ ಉಚ್ಚ ನ್ಯಾಯಾಲಯದಿಂದ `ಲಲಿತ ಕಲಾ ಅಕಾಡೆಮಿ’ಗೆ ನೋಟಿಸ್

ಕೇರಳದ ‘ಲಲಿತ ಕಲಾ ಅಕಾಡೆಮಿ’ಯಿಂದ ದೇಶ, ಹಿಂದೂ ಧರ್ಮ ಮತ್ತು ಗೋವಿನ ಅಪಮಾನ ಮಾಡುವ ವ್ಯಂಗ್ಯಚಿತ್ರಕ್ಕೆ ಪ್ರಶಸ್ತಿ ನೀಡಿರುವ ಪ್ರಕರಣ

ಬಲ್ಲಭಗಡ್ (ಹರಿಯಾಣಾ) ಇಲ್ಲಿಯ ಸರಕಾರಿ ಭೂಮಿಯಲ್ಲಿನ ಅಕ್ರಮ ಮಜಾರನ್ನು ಧ್ವಂಸಗೈದ ಹಿಂದುತ್ವನಿಷ್ಠರು !

ಆಡಳಿತಕ್ಕೆ ಮನವಿ ನೀಡಿದರೂ ಕ್ರಮ ಕೈಗೊಳ್ಳದಿದ್ದರೆ ಇಂತಹ ಆಡಳಿತದಿಂದ ಏನು ಪ್ರಯೋಜನ ? ಸರಕಾರಿ ಜಾಗದಲ್ಲಿ ಅಕ್ರಮ ಮಜಾರ ನಿರ್ಮಾಣವಾಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೇ ?

ಮವು (ಉತ್ತರಪ್ರದೇಶ)ದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಇವರ ಪುತ್ಥಳಿ ಭಗ್ನ

ಸರಾಯ ಲಖಂಸಿ ಪ್ರದೇಶದ ಖಾನ್‍ಪುರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಇವರ ಪುತ್ಥಳಿಯು ಭಗ್ನಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಅನಂತರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ನವೆಂಬರ್ 23 ರಂದು ಈ ಘಟನೆ ನಡೆದಿದೆ.