ಆಗ್ರಾದಲ್ಲಿನ ‘ಮೊಗಲ್ ರೋಡ್’ಗೆ `ಮಹಾರಾಜಾ ಅಗ್ರಸೇನ ಮಾರ್ಗ’ ಎಂದು ನಾಮಕರಣ

ಆಗ್ರಾ ನಗರದಲ್ಲಿನ `ಮೊಗಲ್ ರೋಡ್’ನ ಹೆಸರು ಬದಲಾಯಿಸಿ `ಮಹಾರಾಜಾ ಅಗ್ರಸೇನ ಮಾರ್ಗ’ ಎಂದು ಇಡಲಾಗಿದೆ. ಜೊತೆಗೆ `ಸುಲ್ತಾನ್‍ಗಂಜ ಕೀ ಪುಲಿಯಾ’ ಈ ಪ್ರದೇಶದ ಹೆಸರನ್ನು ಬದಲಾಯಿಸಿ `ವಿಕಲ ಚೌಕ್’ ಎಂದು ಇಡಲಾಗಿದೆ.

ಕೊರೋನಾದ ಹೊಸದು ಹೆಚ್ಚು ಅಪಾಯಕಾರಿ ‘ಓಮಿಕ್ರಾನ್’ ತಳಿಯಿಂದಾಗಿ ಮತ್ತೆ ಭೀತಿಯ ವಾತಾವರಣ !

`ಓಮಿಕ್ರಾನ್’ ಈ ತಳಿಯು ಮೊದಲು ನವೆಂಬರ್ 11 ರಂದು ದಕ್ಷಿಣ ಆಫ್ರಿಕಾದ ಬೋತ್ಸವಾನಾದಲ್ಲಿ ಪತ್ತೆಯಾಗಿತ್ತು. ನಂತರ ಇದು ಹಾಂಗ್‍ಕಾಂಗ್, ಇಸ್ರೇಲ್, ಬೆಲ್ಜಿಯಂ ಮತ್ತು ಇತರ ದೇಶಗಳಲ್ಲಿ ಕಂಡುಬಂದಿದೆ.

ತೆಲಂಗಾಣಾ ಮತ್ತು ಆಂಧ್ರಪ್ರದೇಶ ರಾಜ್ಯದಲ್ಲಿ ಶೇ. 83.3 ರಷ್ಟು ಮಹಿಳೆಯರಿಗೆ ಗಂಡನಿಂದ ಆಗುವ ದೌರ್ಜನ್ಯ ಯೋಗ್ಯ ಅನಿಸುತ್ತಿದೆ !

ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲಿ ದೇಶದ 18 ರಾಜ್ಯಗಳಲ್ಲಿ ಕೌಟುಂಬಿಕ ದೌರ್ಜನ್ಯದ ಮೇಲೆ ಮಹಿಳೆಯರ ಮತ್ತು ಪುರುಷರ ಅಭಿಪ್ರಾಯ ಕೇಳಲಾಗಿತ್ತು. ಇದರಲ್ಲಿ ಮಹಿಳೆಯರು ಮತ್ತು ಪುರುಷರು ಇವರಿಗೆ `ಗಂಡನಿಂದ ಹೆಂಡತಿಯ ಮೇಲಾಗುವ ದೌರ್ಜನ್ಯ ಯೋಗ್ಯವೋ ಅಥವಾ ಅಯೋಗ್ಯವೋ ?’ ಎಂದು ಪ್ರಶ್ನಿಸಲಾಗಿತ್ತು

ಭಗವಾನ್ ಶ್ರೀಕೃಷ್ಣನ ಭಕ್ತಿ ಮಾಡಲು ಮಹಿಳಾ ಪೊಲೀಸ್ ಅಧಿಕಾರಿ ಭಾರತಿ ಅರೋರ ಇವರಿಂದ ಸ್ವಯಂನಿವೃತ್ತಿ !

ಇಂದು `ಪೊಲೀಸರೆಂದರೆ ಭ್ರಷ್ಟ ವ್ಯಕ್ತಿಗಳು’ ಎಂಬ ಚಿತ್ರಣ ಮೂಡಿರುವಾಗ ಸ್ವೇಚ್ಛಾ ನಿವೃತ್ತಿ ಪಡೆಯುವ ಬದಲು ಭಗವಾನ ಶ್ರೀಕೃಷ್ಣನ ನಾಮಜಪಸಹಿತ ಪೊಲೀಸ್ ಇಲಾಖೆಯಲ್ಲಿ ಪೊಲೀಸರನ್ನು ಭ್ರಷ್ಟಾಚಾರದಿಂದ ಮುಕ್ತ, ಸಕ್ಷಮ ಮತ್ತು ಸಾಧಕರನ್ನಾಗಿ ಮಾಡುತ್ತಿದ್ದರೆ, ಅದು ಸಮಷ್ಟಿ ಸಾಧನೆಯಾಗಿ ಶ್ರೀಕೃಷ್ಣನ ಪ್ರಾಪ್ತಿ ಶೀಘ್ರವೇ ಆಗುತ್ತಿತ್ತು.

ದೇಶದಲ್ಲೇ ಬಿಹಾರ ಅತ್ಯಂತ ಬಡ ರಾಜ್ಯ !

ಸ್ವಾತಂತ್ರ್ಯದ 74 ವರ್ಷಗಳ ನಂತರವೂ, ಬಿಹಾರದಂತಹ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಬಡವರಾಗಿದ್ದಾರೆ, ಇದು ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !

ಮತಾಂತರದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪ್ರವೇಶಿಸಿದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ಎಂಬ ನಿರ್ಣಯವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಮೀಸಲಾತಿಗೆ ಸಂಬಂಧಿಸಿದ ಪ್ರಕರಣದ ಸಂದರ್ಭದಲ್ಲಿ ನೀಡಿದೆ.

ಜಿಹಾದಿ ಉಗ್ರರು ಮದರಸಾಗಳಲ್ಲಿ ಸಿದ್ಧರಾಗುವುದರಿಂದ, ನನಗೆ ಅವಕಾಶ ಸಿಕ್ಕಿದರೆ, ಎಲ್ಲಾ ಮದರಸಾಗಳನ್ನು ಮುಚ್ಚಿ ಬಿಡುತ್ತೇನೆ ! – ಉತ್ತರಪ್ರದೇಶದ ರಾಜ್ಯ ಮಂತ್ರಿ ಠಾಕೂರ್ ರಘುರಾಜ ಸಿಂಹ

ಉತ್ತರಪ್ರದೇಶದ ಸರಕಾರದಿಂದ ಮದರಸಾಗಳಿಗೆ ನೀಡುವ ಅನುದಾನವನ್ನು ಮೊದಲು ನಿಲ್ಲಿಸಬೇಕು. ಅದಕ್ಕಾಗಿ ರಘುರಾಜ ಸಿಂಹ ಇವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕೋರೋನಾದ ರೋಗಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ಲಾಟ್‍ಫಾರ್ಮ ಟಿಕೆಟ್ ಬೆಲೆ 50 ರೂಪಾಯಿಂದ ಮತ್ತೆ 10 ರೂಪಾಯಿಗೆ ಇಳಿಕೆ !

ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ರೈಲ್ವೆ ಇಲಾಖೆಯು ಪ್ಲಾಟ್‍ಫಾರ್ಮ ಟಿಕೆಟಿನ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಕೊರೋನಾ ಸಮಯದಲ್ಲಿ ರೈಲ್ವೆಯಿಂದ ಪ್ಲಾಟ್‍ಫಾರ್ಮ ಟಿಕೆಟ್‍ನ ಬೆಲೆಯನ್ನು ಹೆಚ್ಚಿಸಲಾಗಿತ್ತು

‘ಭಾರತೀಯ ಅಧಿಕಾರಿಗಳ ಹೇಳಿಕೆಯಿಂದ ಗಡಿಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಬಹುದು !'(ಅಂತೆ) – ಚೀನಾದ ಕೂಗಾಟ

ಸಿಡಿಎಸ್ ಜನರಲ್ ಬಿಪಿನ್ ರಾವತ್ ಇವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ; ಆದರೆ ಚೀನಾಗೆ ಮೆಣಸಿನಕಾಯಿ ತಿಂದಂತೆ ಕೂಗಾಟ ಮಾಡುತ್ತಿದೆ. ಇದರ ಬದಲು ಚೀನಾವು ಗಡಿಯಲ್ಲಿ ನಡೆಸುತ್ತಿರುವ ಕಿತಾಪತಿ ನಿಲ್ಲಿಸಿ ಮತ್ತು ಅಕ್ಸಾಯಿ ಚೀನಾವನ್ನು ಭಾರತಕ್ಕೆ ಹಿಂತಿರುಗಿಸಬೇಕು !

ಶ್ರಿಕೃಷ್ಣಜನ್ಮಭೂಮಿಯ ಈದ್ಗಾ ಮಸೀದಿಯಲ್ಲಿ ನಡೆಯುವ ನಮಾಜುಪಠಣವನ್ನು ನಿಲ್ಲಿಸಿ !

ಕಳೆದ ಕೆಲವು ದಿನಗಳಿಂದ ಇಲ್ಲಿ ದಿನದಲ್ಲಿ 5 ಸಾರಿ ನಮಾಜುಪಠಣ ಮಾಡಲಾಗುತ್ತಿದೆ. ಹೀಗೆ ಮಾಡಿ ಇಲ್ಲಿಯ ಸೌಹಾರ್ದ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಆದಕಾರಣ ಇಲ್ಲಿ ನಡೆಯುವ ನಮಾಜುಪಠಣ ನಿಲ್ಲಿಸಬೇಕೆಂದು `ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾಧಿಕಾರಿಗೆ ಮನವಿ ನೀಡಿದರು