‘ಭಾರತೀಯ ಅಧಿಕಾರಿಗಳ ಹೇಳಿಕೆಯಿಂದ ಗಡಿಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಬಹುದು !'(ಅಂತೆ) – ಚೀನಾದ ಕೂಗಾಟ

‘ಭಾರತಕ್ಕೆ ಎಲ್ಲಕ್ಕಿಂತ ಹೆಚ್ಚು ಅಪಾಯ ಚೀನಾದಿಂದ’ ಎಂಬ ಸಿಡಿಎಸ್ ಜನರಲ್ ರಾವತ್ ಇವರ ಹೇಳಿಕೆಗೆ ಚೀನಾದ ಪ್ರತಿಕ್ರಿಯೆ

ಸಿಡಿಎಸ್ ಜನರಲ್ ಬಿಪಿನ್ ರಾವತ್ ಇವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ; ಆದರೆ ಚೀನಾಗೆ ಮೆಣಸಿನಕಾಯಿ ತಿಂದಂತೆ ಕೂಗಾಟ ಮಾಡುತ್ತಿದೆ. ಇದರ ಬದಲು ಚೀನಾವು ಗಡಿಯಲ್ಲಿ ನಡೆಸುತ್ತಿರುವ ಕಿತಾಪತಿ ನಿಲ್ಲಿಸಿ ಮತ್ತು ಅಕ್ಸಾಯಿ ಚೀನಾವನ್ನು ಭಾರತಕ್ಕೆ ಹಿಂತಿರುಗಿಸಬೇಕು !- ಸಂಪಾದಕರು

ಬೀಜಿಂಗ್ (ಚೀನಾ) – ಭಾರತದ ಅಧಿಕಾರಿಗಳು ವಿನಾಕಾರಣ ಚೀನಾದ ಸೈನಿಕರ ಅಪಾಯದ ಸಾಧ್ಯತೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಇದು ಬೇಜವಾಬ್ದಾರಿತನದ ಹೇಳಿಕೆಯಾಗಿದೆ. ಭಾರತ ಮತ್ತು ಚೀನಾ ಗಡಿಯ ವಿಷಯದಲ್ಲಿ ಚೀನಾದ ನಿಲುವು ಸ್ಪಷ್ಟವಾಗಿದೆ ಹಾಗೂ ಗಡಿಯಲ್ಲಿ ಶಾಂತಿಯನ್ನು ಕಾಪಾಡಲು ಚೀನಾ ಕಟಿಬದ್ಧವಾಗಿದೆ; ಆದರೆ ಇಂತಹ ಹೇಳಿಕೆಯಿಂದ ಒತ್ತಡ ಹೆಚ್ಚುವ ಸಾಧ್ಯತೆ ಇದೆ, ಎಂದು ಚೀನಾದಿಂದ ಭಾರತದ `ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಇವರ ಹೇಳಿಕೆಗೆ ಪ್ರತಿಕ್ರಿಯಿಸಿದೆ. ಬಿಪಿನ್ ರಾವತ್ ಇವರು, ಭಾರತಕ್ಕೆ ಎಲ್ಲಕ್ಕಿಂತ ಹೆಚ್ಚಿನ ಅಪಾಯ ಚೀನಾದಿಂದ ಇದೆ. ಭಾರತ ಮತ್ತು ಚೀನಾ ನಡುವಿನ ಗಡಿವಿವಾದ ಬಗೆಹರಿಸಲು ವಿಶ್ವಾಸದ ಕೊರತೆಯಿದೆ ಮತ್ತು ಆದ್ದರಿಂದ ಸಂದೇಹ ಹೆಚ್ಚುತ್ತಿದೆ’ ಎಂದು ಹೇಳಿದರು.

ಚೀನಾದ ಹಿರಿಯ ಕರ್ನಲ್ ವು ಕಿಯಾನ್ ಇವರು ಮಾತನಾಡುತ್ತಾ, ‘ರಾವತ್ ಇವರ ಹೇಳಿಕೆಗೆ ನಾವು ವಿರೋಧಿಸುತ್ತೇವೆ. ಗಡಿವಿವಾದದ ಬಗ್ಗೆ ಭಾರತಕ್ಕೆ ತನ್ನ ಅಭಿಪ್ರಾಯವನ್ನು ನೀಡಲು ನಾವು ಅವಕಾಶ ನೀಡಿದ್ದೆವು. ಗಡಿಯ ಬಗ್ಗೆ ಚೀನಾದ ಸ್ಪಷ್ಟ ನಿಲುವಿದೆ. ಚೀನಾ ದೇಶದ ಸುರಕ್ಷೆ ಮತ್ತು ಸಾರ್ವಭೌಮತ್ವ ಇದರಲ್ಲಿ ಎಂದು ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ಆದರೂ ನಾವು ಗಡಿಯಲ್ಲಿ ಒತ್ತಡ ಕಡಿಮೆಯಾಗಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.