ದೇಶವನ್ನು ನಡೆಸಲು ಪಾಕಿಸ್ತಾನದ ಬಳಿ ಹಣವಿಲ್ಲ ! – ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ನಿಂದ ಸ್ವೀಕೃತಿ

* ದೇಶವನ್ನು ನಡೆಸಲು ಪಾಕಿಸ್ತಾನದ ಬಳಿ ಹಣವಿಲ್ಲ; ಆದರೆ ಜಿಹಾದಿ ಭಯೋತ್ಪಾದಕರನ್ನು ಪೋಷಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡಲು, ಸೈನ್ಯದ ಮೇಲೆ ಯಥೇಚ್ಛವಾಗಿ ಖರ್ಚು ಮಾಡಲು ಹಣವಿದೆ, ಈ ಬಗ್ಗೆ ಇಮ್ರಾನ್ ಖಾನ್ ಏಕೆ ಮಾತನಾಡುವುದಿಲ್ಲ ?- ಸಂಪಾದಕರು 

* ಈಗ ಪಾಕಿಸ್ತಾನವು ಭಿಕ್ಷೆ ಬೇಡಿದರೂ ಯಾರೂ ಹಣ ಕೊಡುವುದಿಲ್ಲ. ಭವಿಷ್ಯದಲ್ಲಿ ಆರ್ಥಿಕ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿ ತುಂಡಾದರೂ ಅಚ್ಚರಿಪಡಬೇಕಿಲ್ಲ !- ಸಂಪಾದಕರು 

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ದೇಶವನ್ನು ನಡೆಸಲು ತಮ್ಮ ಸರಕಾರದ ಬಳಿ ಹಣವಿಲ್ಲ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. `ಪಾಕಿಸ್ತಾನ ಫೆಡರಲ್ ಬೋರ್ಡ್ ಆಫ್ ರೆವಿನ್ಯೂ’ನ ಮೊದಲ ‘ಟ್ರ್ಯಾಕ್ ಅಂಡ ಟ್ರೇಸ್ ಸಿಸ್ಟಮ್’ ಅನ್ನು ಉದ್ಘಾಟಿಸಿ ಮಾತನಾಡಿದ ಇಮ್ರಾನ್ ಖಾನ್, “ದೇಶವನ್ನು ನಡೆಸಲು ಸಾಕಷ್ಟು ಹಣವಿಲ್ಲದಿರುವುದು ಇದೇ ಎಲ್ಲಕ್ಕಿಂತ ದೊಡ್ಡ ಸವಾಲಾಗಿದೆ. ವಿದೇಶದಿಂದ ಸಾಲ ಪಡೆಯುತ್ತಿರುವುದರಿಂದ ಪಾಕಿಸ್ತಾನದ ಮೇಲೆ ಸಾಲದ ಹೊರೆ ಹೆಚ್ಚುತ್ತಿದೆ”, ಹೇಳಿದ್ದಾರೆ. 10 ವರ್ಷಗಳ ಹಿಂದೆ ಪಾಕಿಸ್ತಾನದ ಮೇಲೆ ಇದ್ದ 6 ಟ್ರಿಲಿಯನ್ (447 ಲಕ್ಷ ಕೋಟಿ ಭಾರತೀಯ ಹಣಕ್ಕಿಂತ ಹೆಚ್ಚು) ಡಾಲರ್‍ನ ಸಾಲ ಇಂದು 30 (2 ಸಾವಿರದ 235 ಲಕ್ಷ ಕೋಟಿ ಭಾರತೀಯ ಹಣಕ್ಕಿಂತ ಹೆಚ್ಚು) ಟ್ರಿಲಿಯನ್ ಡಾಲರ್ ತನಕ ತಲುಪಿದೆ ಎಂದು ಅವರು ಮಾಹಿತಿ ನೀಡಿದರು. `ಟ್ರ್ಯಾಕ್ ಅಂಡ್ ಟ್ರೇಸ್ ಸಿಸ್ಟಂ’ ಮೂಲಕ ತೆರಿಗೆ ವಂಚಕರನ್ನು ಪತ್ತೆ ಹಚ್ಚಿ ಅವರಿಂದ ತೆರಿಗೆ ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ.

ಇಮ್ರಾನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಸದ್ಯ ಪಾಕಿಸ್ತಾನದ ಬೊಕ್ಕಸ ಖಾಲಿಯಾಗಿದೆ. ಆದಾಯ ಕಡಿಮೆ, ಖರ್ಚು ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ತೆರಿಗೆ ವ್ಯವಸ್ಥೆ ಸುಗಮವಾಗಿ ಜಾರಿಯಾಗಿಲ್ಲ. ಜನರು ತೆರಿಗೆ ವಂಚನೆ ಮಾಡಿದರು. ಇದು ಒಳ್ಳೆಯದಲ್ಲ; ಆದರೆ ತೆರಿಗೆ ವಸೂಲಿ ಮಾಡುವುದು ನಾಗರಿಕರ ಅನುಕೂಲಕ್ಕಾಗಿ ಎಂಬುದು ಜನರಿಗೆ ಇನ್ನೂ ತಿಳಿದಿಲ್ಲ. ತೆರಿಗೆ ಸಂಗ್ರಹದ ಕೊರತೆ ಮತ್ತು ಹೆಚ್ಚುತ್ತಿರುವ ವಿದೇಶಿ ಸಾಲದಿಂದ ದೇಶವನ್ನು ನಡೆಸಲು ಪಾಕಿಸ್ತಾನಕ್ಕೆ ಹಣದ ಕೊರತೆ ಎದುರಾಗಿದೆ. ಈ ಪ್ರಶ್ನೆಯು ದೇಶದ ಆರ್ಥಿಕ ಪ್ರಶ್ನೆ ಹಾಗೂ ಭದ್ರತೆಯ ಪ್ರಶ್ನೆಗೆ ಸಂಬಂಧಿಸಿದೆ ಎಂದು ಹೇಳಿದರು.