ದೇಶದಲ್ಲೇ ಬಿಹಾರ ಅತ್ಯಂತ ಬಡ ರಾಜ್ಯ !

ನೀತಿ ಆಯೋಗದಿಂದ ಬಡತನ ಸೂಚ್ಯಾಂಕ ಘೋಷಣೆ

ಸ್ವಾತಂತ್ರ್ಯದ 74 ವರ್ಷಗಳ ನಂತರವೂ, ಬಿಹಾರದಂತಹ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಬಡವರಾಗಿದ್ದಾರೆ, ಇದು ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !- ಸಂಪಾದಕರು 

ನವ ದೆಹಲಿ : ನೀತಿ ಆಯೋಗದಿಂದ ಬಡತನ ಸೂಚ್ಯಾಂಕ ವರದಿಯಂತೆ, ಬಿಹಾರದಲ್ಲಿ ಶೇ. 51.91 ರಷ್ಟು ಜನರು ಬಡವರಿದ್ದಾರೆ. ಇದೇ ಜಾರ್ಖಂಡ್‍ನಲ್ಲಿ ಶೇ. 42.16 ಮತ್ತು ಉತ್ತರಪ್ರದೇಶದಲ್ಲಿ ಶೇ. 37.79. ಮಧ್ಯಪ್ರದೇಶದಲ್ಲಿ ಶೇ. 36.65 ಮತ್ತು ಮಿಜೋರಾಂನಲ್ಲಿ ಶೇ. 32.67 ರಷ್ಟು ಇದೆ. ಮಹಾರಾಷ್ಟ್ರವು ಬಡತನದಲ್ಲಿ 17 ನೇ ಸ್ಥಾನದಲ್ಲಿದ್ದು ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 14.85 ರಷ್ಟು ಜನರು ಬಡವರಾಗಿದ್ದಾರೆ. ಇದರ ನಂತರ ತೆಲಂಗಾಣಾ ಶೇ. 13.74, ಕರ್ನಾಟಕ ಶೇ. 13.16, ಆಂಧ್ರಪ್ರದೇಶ ಶೇ. 12.31 ಮತ್ತು ಹರಿಯಾಣಾದಲ್ಲಿ ಶೇ. 12.28 ರಷ್ಟು ಜನರು ಬಡವರಾಗಿದ್ದಾರೆ. ತಮಿಳುನಾಡಿನಲ್ಲಿ ಶೇ. 4.89, ಸಿಕ್ಕಿಮ್‍ನಲ್ಲಿ ಶೇ. 3.82 ಮತ್ತು ಗೋವಾದಲ್ಲಿ ಶೇ. 3.76 ಬಡವರಿದ್ದಾರೆ. ಕೇರಳ ರಾಜ್ಯವು ಬಡತನದಲ್ಲಿ ಕೊನೆಯ ಸ್ಥಾನದಲ್ಲಿದೆ ಮತ್ತು ಅಲ್ಲಿಯ ಜನಸಂಖ್ಯೆಯ ಶೇ. 0.71 ರಷ್ಟು ಮಾತ್ರ ಬಡವರಿದ್ದಾರೆ.