ಭಗವಾನ್ ಶ್ರೀಕೃಷ್ಣನ ಭಕ್ತಿ ಮಾಡಲು ಮಹಿಳಾ ಪೊಲೀಸ್ ಅಧಿಕಾರಿ ಭಾರತಿ ಅರೋರ ಇವರಿಂದ ಸ್ವಯಂನಿವೃತ್ತಿ !

ಇಂದು ‘ಪೊಲೀಸರೆಂದರೆ ಭ್ರಷ್ಟ ವ್ಯಕ್ತಿಗಳು’ ಎಂಬ ಚಿತ್ರಣ ಮೂಡಿರುವಾಗ ಸ್ವೇಚ್ಛಾ ನಿವೃತ್ತಿ ಪಡೆಯುವ ಬದಲು ಭಗವಾನ ಶ್ರೀಕೃಷ್ಣನ ನಾಮಜಪಸಹಿತ ಪೊಲೀಸ್ ಇಲಾಖೆಯಲ್ಲಿ ಪೊಲೀಸರನ್ನು ಭ್ರಷ್ಟಾಚಾರದಿಂದ ಮುಕ್ತ, ಸಕ್ಷಮ ಮತ್ತು ಸಾಧಕರನ್ನಾಗಿ ಮಾಡುತ್ತಿದ್ದರೆ, ಅದು ಸಮಷ್ಟಿ ಸಾಧನೆಯಾಗಿ ಶ್ರೀಕೃಷ್ಣನ ಪ್ರಾಪ್ತಿ ಶೀಘ್ರವೇ ಆಗುತ್ತಿತ್ತು.-ಸಂಪಾದಕರು

ಭಾರತಿ ಅರೋರಾ

ಅಂಬಾಲಾ (ಹರಿಯಾಣಾ) – ಭಾರತೀಯ ಪೋಲೀಸ್ ಸೇವೆಯಲ್ಲಿನ ಅಧಿಕಾರಿ ಭಾರತಿ ಅರೋರಾ ಇವರನ್ನು ಹರಿಯಾಣಾ ಸರಕಾರವು ಸ್ವೇಚ್ಛಾ ನಿವೃತ್ತಿ ಪಡೆಯಲು ಅನುಮತಿ ನೀಡಿದೆ. ಅವರು ಮುಂದಿನ ಜೀವನ ಭಗವಾನ ಶ್ರೀಕೃಷ್ಣನ ಭಕ್ತಿಯಲ್ಲಿ ಕಳೆಯಲು ಸ್ವೇಚ್ಛಾ ನಿವೃತ್ತಿ ಪಡೆದಿದ್ದಾರೆ. ಅವರು ಅದಕ್ಕಾಗಿ ಸರಕಾರಕ್ಕೆ ನೀಡಿರುವ ಅರ್ಜಿಯಲ್ಲಿಯೂ ಹೀಗೆಯೇ ಉಲ್ಲೇಖಿಸಿದ್ದಾರೆ. ಭಾರತಿ ಅರೋರಾ ಇವರ ಪತಿ ಫರೀದಾಬಾದ್‍ನ ಪೊಲೀಸ್ ಆಯುಕ್ತರಾಗಿದ್ದಾರೆ.