ತೆಲಂಗಾಣಾ ಮತ್ತು ಆಂಧ್ರಪ್ರದೇಶ ರಾಜ್ಯದಲ್ಲಿ ಶೇ. 83.3 ರಷ್ಟು ಮಹಿಳೆಯರಿಗೆ ಗಂಡನಿಂದ ಆಗುವ ದೌರ್ಜನ್ಯ ಯೋಗ್ಯ ಅನಿಸುತ್ತಿದೆ !

ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ನಿಷ್ಕರ್ಷ

ನವ ದೆಹಲಿ – ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲಿ ತೆಲಂಗಾಣಾ ಮತ್ತು ಆಂಧ್ರಪ್ರದೇಶ ಈ ರಾಜ್ಯಗಳಲ್ಲಿ ಶೇ. 83.3 ರಷ್ಟು ವಿವಾಹಿತ ಮಹಿಳೆಯರಿಗೆ ಗಂಡನಿಂದಾಗುವ ದೌರ್ಜನ್ಯ ಯೋಗ್ಯ ಅನಿಸುತ್ತದೆ. ಹಿಮಾಚಲ ಪ್ರದೇಶದ ಶೇ. 14.8 ರಷ್ಟು ಮಹಿಳೆಯರಿಗೆ ಈ ದೌರ್ಜನ್ಯ ಯೋಗ್ಯವಾಗಿದೆ ಎಂದು ಅನಿಸುತ್ತದೆ. ಕರ್ನಾಟಕದಲ್ಲಿ ಶೇ. 81.9 ರಷ್ಟು ಪುರುಷರು ಕೂಡಾ ಗಂಡನಿಂದ ಹೆಂಡತಿಯ ಮೇಲಿನ ದೌರ್ಜನ್ಯ ಯೋಗ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲಿ ದೇಶದ 18 ರಾಜ್ಯಗಳಲ್ಲಿ ಕೌಟುಂಬಿಕ ದೌರ್ಜನ್ಯದ ಮೇಲೆ ಮಹಿಳೆಯರ ಮತ್ತು ಪುರುಷರ ಅಭಿಪ್ರಾಯ ಕೇಳಲಾಗಿತ್ತು. ಇದರಲ್ಲಿ ಮಹಿಳೆಯರು ಮತ್ತು ಪುರುಷರು ಇವರಿಗೆ ‘ಗಂಡನಿಂದ ಹೆಂಡತಿಯ ಮೇಲಾಗುವ ದೌರ್ಜನ್ಯ ಯೋಗ್ಯವೋ ಅಥವಾ ಅಯೋಗ್ಯವೋ ?’ ಎಂದು ಪ್ರಶ್ನಿಸಲಾಗಿತ್ತು ? ಅದರಲ್ಲಿ ಹೇಳದೆ ಮನೆಯಿಂದ ಹೊರಗೆ ಹೋಗುವುದು, ಮನೆ ಮತ್ತು ಮಕ್ಕಳ ಕಡೆಗೆ ದುರ್ಲಕ್ಷ್ಯ ಮಾಡುವುದು, ವಾದ-ವಿವಾದ ಮಾಡುವುದು, ಶಾರೀರಿಕ ಸಂಬಂಧಕ್ಕೆ ನಿರಾಕರಿಸುವುದು, ರುಚಿಕರ ಅಡಿಗೆ ಮಾಡದಿರುವುದು, ವಿವಾಹೇತರ ಸಂಬಂಧ ಇಡುವುದು ಮುಂತಾದ ಪ್ರಶ್ನೆಗಳು ಇದ್ದವು.