ಕೊರೋನಾದ ಹೊಸದು ಹೆಚ್ಚು ಅಪಾಯಕಾರಿ ‘ಓಮಿಕ್ರಾನ್’ ತಳಿಯಿಂದಾಗಿ ಮತ್ತೆ ಭೀತಿಯ ವಾತಾವರಣ !

ನವ ದೆಹಲಿ : ಕೊರೊನಾ ರೋಗಾಣುವಿನ ಮತ್ತೊಂದು ಮಾರಣಾಂತಿಕ ತಳಿಯು ಬೆಳಕಿಗೆ ಬಂದಿದ್ದರಿಂದ ವಿಶ್ವ ಆರೋಗ್ಯ ಸಂಘಟನೆಯು ಕಳವಳ ವ್ಯಕ್ತಪಡಿಸಿದೆ. ಈ ತಳಿಯ ಕರೋನಾವನ್ನು ಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ ಮತ್ತು ಅದನ್ನು ‘ಓಮಿಕ್ರಾನ್’ ಎಂದು ಕರೆಯಲಾಗಿದೆ. ಭಾರತವು 12 ದೇಶಗಳ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸುವುದನ್ನು ಕಡ್ಡಾಯಗೊಳಿಸಿದೆ ಹಾಗೂ ಅಮೇರಿಕಾವು ದಕ್ಷಿಣ ಆಫ್ರಿಕಾ ಖಂಡದಿಂದ ಬರುವ ಎಂಟು ದೇಶಗಳ ಪ್ರಯಾಣಿಕರಿಗೆ ನಿಷೇಧ ಹೇರಲು ಸಿದ್ಧತೆ ಮಾಡುತ್ತಿದೆ.

1. `ಓಮಿಕ್ರಾನ್’ ಈ ತಳಿಯು ಮೊದಲು ನವೆಂಬರ್ 11 ರಂದು ದಕ್ಷಿಣ ಆಫ್ರಿಕಾದ ಬೋತ್ಸವಾನಾದಲ್ಲಿ ಪತ್ತೆಯಾಗಿತ್ತು. ನಂತರ ಇದು ಹಾಂಗ್‍ಕಾಂಗ್, ಇಸ್ರೇಲ್, ಬೆಲ್ಜಿಯಂ ಮತ್ತು ಇತರ ದೇಶಗಳಲ್ಲಿ ಕಂಡುಬಂದಿದೆ. ಇದುವರೆಗಿನ ಕೊರೋನಾದ ಇತರ ತಳಿಯ ತುಲನೆಯಲ್ಲಿ ಓಮಿಕ್ರಾನ್‍ನ ಹರಡುವ ಪ್ರಮಾಣವು ತುಂಬಾ ಹೆಚ್ಚಾಗಿದೆ.

2. `ಓಮಿಕ್ರಾನ್ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಕರೆದಿದ್ದರು. ಅದೇ ರೀತಿ ದೇಶದ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಇಲ್ಲಿಯೂ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ನಡೆಸಿ ಪ್ರಸ್ತುತ ಕೊರೊನಾ ಪರಿಸ್ಥಿತಿಯ ಅವಲೋಕನ ನಡೆಸಿದರು.

3. ಮುಂಬಯಿನಲ್ಲಿ ಆಫ್ರಿಕಾ ಖಂಡದಿಂದ ಬರುವ ಪ್ರಯಾಣಿಕರನ್ನು ಪ್ರತ್ಯೇಕಿಸಲಾಗುತ್ತದೆ. ಗುಜರಾತ್ ಸರಕಾರವು ಯುರೋಪ್ ಮತ್ತು ಇತರ ಕೆಲವು ದೇಶಗಳ ಪ್ರಯಾಣಿಕರು ರಾಜ್ಯಕ್ಕೆ ಪ್ರವೇಶಿಸಲು ಕೊರೊನಾದ `ಆರ್‍ಟಿ-ಪಿಸಿಆರ್’ ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಿದೆ.

4. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜರಿವಾಲ್ ಇವರು `ಯಾವ ದೇಶದಲ್ಲಿ ಓಮಿಕ್ರಾನ್ ರೋಗಿಗಳು ಪತ್ತೆಯಾಗಿದ್ದಾರೆ, ಆ ದೇಶದಿಂದ ಬರುವ ವಿಮಾನಗಳನ್ನು ನಿಷೇಧಿಸಬೇಕೆಂದು’, ಒತ್ತಾಯಿಸಿದ್ದಾರೆ.