ಶ್ರೀನಗರದಲ್ಲಿ ನಡೆದ ಪೋಲೀಸರ ಬಸ್ ಮೇಲಿನ ಭಯೋತ್ಪಾದನೆಯ ದಾಳಿಯಲ್ಲಿ ೨ ಪೊಲೀಸರು ಹುತಾತ್ಮ : ೧೨ ಜನರಿಗೆ ಗಾಯ

ಜೇವನ ಭಾಗದಲ್ಲಿ ಡಿಸೆಂಬರ ೧೩ ರಂದು ಸಂಜೆ ಪೊಲೀಸರ ಬಸ್‌ನ ಮೇಲೆ ನಡೆದಿರುವ ಉಗ್ರರ ಆಕ್ರಮಣದಲ್ಲಿ ೩ ಪೊಲೀಸರು ಹುತಾತ್ಮರಾಗಿದ್ದಾರೆ. ಈ ಬಸ್‌ನಲ್ಲಿ ಒಟ್ಟು ೧೪ ಪೊಲೀಸರು ಹಾಗೂ ಒಬ್ಬ ವಾಹನ ಚಾಲಕ ಇದ್ದರು. ಬಸ್‌ನಲ್ಲಿದ್ದ ಪೊಲೀಸರ ಬಳಿ ಶಸ್ತ್ರಾಸ್ತ್ರಗಳು ಇರಲಿಲ್ಲ.

ಮುನಾವರ ಫಾರೂಕಿ ಇವನನ್ನು ಬೆಂಬಲಿಸುವವರು ನನ್ನನ್ನು ಬೆಂಬಲಿಸುವುದಿಲ್ಲ ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಇವರ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಈ ವಿಷಯವಾಗಿ ಅವಮಾನ ಮಾಡುವಂತ ಸಂಭಾಷಣೆ ಮತ್ತು ಹಾಸ್ಯಗಳು ಇರುವುದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನ ನಡೆಸಿ ದೇಶಾದ್ಯಂತ ಆತನ ಕಾರ್ಯಕ್ರಮಗಳನ್ನು ರದ್ದುಪಡಿಸಿದರು.

ಸೂರತ (ಗುಜರಾತ)ನಲ್ಲಿ ‘ಪಾಕಿಸ್ತಾನೀ ಫೂಡ ಫೆಸ್ಟಿವ್ಹಲ’ ಆಯೋಜಿಸಿದ ಉಪಹಾರಗೃಹದ ಮೇಲೆ ಬಜರಂಗ ದಳದ ಕಾರ್ಯಕರ್ತರಿಂದ ಆಕ್ರಮಣ

ರಿಂಗರೋಡ ಭಾಗದಲ್ಲಿರುವ ಒಂದು ಉಪಹಾರಗೃಹದಲ್ಲಿ ‘ಪಾಕಿಸ್ತಾನೀ ಫೂಡ ಫೆಸ್ಟಿವ್ಹಲ’ನ ಆಯೋಜಿಸಲಾದ ಬಗ್ಗೆ ಬಜರಂಗ ದಳದ ಕೆಲವು ಕಾರ್ಯಕರ್ತರು ಆ ಉಪಹಾರಗೃಹದ ಮೇಲೆ ಆಕ್ರಮಣ ನಡೆಸಿ ಧ್ವಂಸಗೊಳಿಸಿದರು.

ಕಾಶಿಗೆ ಔರಂಗಜೇಬ್ ಬಂದರೆ, ಛತ್ರಪತಿ ಶಿವಾಜಿ ಮಹಾರಾಜರು ಏಳುವರು ! – ಪ್ರಧಾನಿ ನರೇಂದ್ರ ಮೋದಿ

ಸಾಲಾರ ಮಸೂದ್ ಬಂದರೆ, ರಾಜ ಸುಹೆಲದೇವರಂತಹ ವೀರ ಯೋಧರು ತಮ್ಮ ಏಕತೆಯ ಶಕ್ತಿಯನ್ನು ತೋರಿಸುತ್ತಾರೆ. ಬ್ರಿಟಿಷರ ಕಾಲದಲ್ಲಿಯೂ ಕಾಶಿಯ ಜನರು ವಾರೆನ್ ಹೇಸ್ಟಿಂಗ್ಸ್ ಇವರ ಸ್ಥಿತಿ ಹೇಗೆ ಮಾಡಿದರು, ಎಂದು ಕಾಶಿಯ ಜನರಿಗೆ ತಿಳಿದಿದೆ, ಎಂದು ಕಾಶಿ ವಿಶ್ವನಾಥ ಧಾಮ ಉದ್ಘಾಟನೆ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯು ಐತಿಹಾಸಿಕ ತಪ್ಪಾಗಿದೆ ! – ರಕ್ಷಣಾಮಂತ್ರಿ ರಾಜನಾಥ ಸಿಂಗ್

1971 ರ ಯುದ್ಧವು ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯನ್ನು ಐತಿಹಾಸಿಕ ತಪ್ಪು, ಎಂಬುದನ್ನು ಹೇಳುತ್ತದೆ. ಪಾಕಿಸ್ತಾನವು ಒಂದು ಧರ್ಮದ ಹೆಸರಿನಲ್ಲಿ ಜನಿಸಿದೆ; ಆದರೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಎಂದು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು ಹೇಳಿಕೆ ನೀಡಿದ್ದಾರೆ.

ಗಯಾ (ಬಿಹಾರ) ಇಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಜಪಮಾಲೆಯನ್ನು ಕಸದ ಬುಟ್ಟಿಗೆ ಎಸೆದ ಹಿಂದೂದ್ವೇಷಿ ಶಿಕ್ಷಕಿ !

ಸದರೀ ಹಿಂದೂದ್ವೇಷಿ ಶಿಕ್ಷಕಿ ಇತರ ಪಂಥದ ಧರ್ಮಗ್ರಂಥ ಕಸದ ಬುಟ್ಟಿಗೆ ಎಸೆಯುವ ಧೈರ್ಯ ತೋರುತ್ತಿದ್ದರೇ ? ಇಂತಹವರನ್ನು ಸರಕಾರವು ಕಾರಾಗೃಹಕ್ಕೆ ಅಟ್ಟಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ನೋಯಡಾ (ಉತ್ತರಪ್ರದೇಶ)ದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ನಮಾಜಪಠಣಕ್ಕೆ ನೂರಾರು ಸಂಖ್ಯೆಯಲ್ಲಿ ಬಂದವರನ್ನು ಓಡಿಸಿದ ಪೊಲೀಸರು !

ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹೇಗೆ ತಾನೆ ಬರುತ್ತಾರೆ ? ಅವರಿಗೆ ಪೊಲೀಸರ ಭಯವಿಲ್ಲವೇ ?

ಕಾನೂನು ಪ್ರಕ್ರಿಯೆ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ ಎಂಬ ಭಾವನೆಯಲ್ಲಿ ಬಾಬರಿಯನ್ನು ಉರುಳಿಸಲಾಯಿತು ! – ರಾ.ಸ್ವ. ಸಂಘದ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ

‘ಶ್ರೀರಾಮಜನ್ಮಭೂಮಿಯಲ್ಲಿ ಮತ್ತೆ ಶ್ರೀರಾಮ ಮಂದಿರ ಕಟ್ಟುವ ಸಂದರ್ಭದಲ್ಲಿ ಕಾನೂನು ಪ್ರಕ್ರಿಯೆ ಹೆಸರಿನಲ್ಲಿ ಹಿಂದೂಗಳಿಗೆ ವಂಚಿಸಲಾಗುತ್ತಿದೆ’, ಇಂತಹ ಭಾವನೆ ಹಿಂದೂಗಳ ಮನಸ್ಸಿನಲ್ಲಿ ನಿರ್ಮಾಣವಾಗಿದ್ದರಿಂದ ಬಾಬರಿಯನ್ನು ಉರುಳಿಸಲಾಯಿತು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಇವರು ಇಲ್ಲಿ ಹೇಳಿದರು.

ಪ್ರಧಾನಮಂತ್ರಿ ಮೋದಿಯವರ ಟ್ವಿಟರ್ ಖಾತೆ ಕೆಲವು ಸಮಯಗಳ ಕಾಲ ‘ಹ್ಯಾಕ್ !

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಡಿಸೆಂಬರ ೧೧ ರ ತಡರಾತ್ರಿ ಕೆಲವು ಕಾಲಾವಧಿಗಾಗಿ ‘ಹ್ಯಾಕ್ ಮಾಡಲಾಗಿತ್ತು. ಕೆಲವೇ ಸಮಯದ ಬಳಿಕ ಪುನ: ಸುರಕ್ಷಿತಗೊಳಿಸಲಾಗಿದೆ.

‘ಕೇಸರಿ ಭಯೋತ್ಪಾದನೆಯ ಹೆಸರಿನಡಿಯಲ್ಲಿ ನನ್ನನ್ನು ಸಿಲುಕಿಸಲು ಆಗಿನ ಕಾಂಗ್ರೆಸ್ ಸರಕಾರವು ೪೦೦ ಕೋಟಿ ಮೊತ್ತವನ್ನು ಖರ್ಚು ಮಾಡಿತ್ತು ! – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಇಂದ್ರೇಶ ಕುಮಾರ

ಕಾಂಗ್ರೆಸ್ ನೇತೃತ್ವದ ಸಂಯುಕ್ತ ಸರಕಾರವು ತನ್ನ ಆಡಳಿತಾವಧಿಯಲ್ಲಿ ‘ಕೇಸರಿ ಭಯೋತ್ಪಾದನೆಯ ಹೆಸರಿನಡಿಯಲ್ಲಿ ನನ್ನನ್ನು ಸಿಲುಕಿಸಲು ಬಹಳ ಪ್ರಯತ್ನಿಸಿದರು. ಇದಕ್ಕಾಗಿ ೪೦೦ ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿದ್ದರು.