ಕಾನೂನು ಪ್ರಕ್ರಿಯೆ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ ಎಂಬ ಭಾವನೆಯಲ್ಲಿ ಬಾಬರಿಯನ್ನು ಉರುಳಿಸಲಾಯಿತು ! – ರಾ.ಸ್ವ. ಸಂಘದ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ

ರಾ.ಸ್ವ. ಸಂಘದ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ

ನವ ದೆಹಲಿ – ‘ಶ್ರೀರಾಮಜನ್ಮಭೂಮಿಯಲ್ಲಿ ಮತ್ತೆ ಶ್ರೀರಾಮ ಮಂದಿರ ಕಟ್ಟುವ ಸಂದರ್ಭದಲ್ಲಿ ಕಾನೂನು ಪ್ರಕ್ರಿಯೆ ಹೆಸರಿನಲ್ಲಿ ಹಿಂದೂಗಳಿಗೆ ವಂಚಿಸಲಾಗುತ್ತಿದೆ’, ಇಂತಹ ಭಾವನೆ ಹಿಂದೂಗಳ ಮನಸ್ಸಿನಲ್ಲಿ ನಿರ್ಮಾಣವಾಗಿದ್ದರಿಂದ ಬಾಬರಿಯನ್ನು ಉರುಳಿಸಲಾಯಿತು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಇವರು ಇಲ್ಲಿ ಹೇಳಿದರು. ‘ಸಬ ಕೇ ರಾಮ’ ಈ ಪುಸ್ತಕದ ಪ್ರಕಾಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅರುಣ ಕುಮಾರ ತಮ್ಮ ಮಾತನ್ನು ಮುಂದುವರೆಸುತ್ತಾ, ಶ್ರೀರಾಮಮಂದಿರದ ಆಂದೋಲನದಿಂದ ಹಿಂದೂಗಳನ್ನು ಜಾಗೃತಗೊಳಿಸಲಾಯಿತು. ಇದರಿಂದ ‘ಹಿಂದೂಗಳು ಹೇಡಿಗಳಾಗಿದ್ದಾರೆ ಮತ್ತು ಜಾತಿ, ಭಾಷೆ, ಸಮಾಜ ಮುಂತಾದ ವಾದಗಳಿಂದ ಅವರು ಎಂದಿಗೂ ಸಂಘಟಿತರಾಗುವುದಿಲ್ಲ’, ಈ ಭ್ರಮೆಯನ್ನು ಕಿತ್ತುಹಾಕಲಾಯಿತು. ಈ ಆಂದೋಲನದಿಂದ ‘ಹಿಂದೂಗಳ ಪೀಳಿಗೆಯಲ್ಲಿ ಪಾಶ್ಚಾತ್ಯ ಶಿಕ್ಷಣ ಮತ್ತು ಮೌಲ್ಯ ಇದರಿಂದಾಗಿ ಹಿಂದೂ ಧರ್ಮದ ಬಗ್ಗೆ ಶ್ರದ್ಧೆ ಕಡಿಮೆಯಾಗಿದೆ’, ಎಂಬ ಅಪನಂಬಿಕೆಯ ದೂರವಾಯಿತು.