ಶಿಕ್ಷಕಿಯ ಮೇಲೆ ಕ್ರಮ ಕೈಗೊಳ್ಳದೇ ಇದ್ದರೆ ಆಂದೋಲನ ಮಾಡುವ ಇಸ್ಕಾನ್‌ನಿಂದ ಎಚ್ಚರಿಕೆ
ಸದರೀ ಹಿಂದೂದ್ವೇಷಿ ಶಿಕ್ಷಕಿ ಇತರ ಪಂಥದ ಧರ್ಮಗ್ರಂಥ ಕಸದ ಬುಟ್ಟಿಗೆ ಎಸೆಯುವ ಧೈರ್ಯ ತೋರುತ್ತಿದ್ದರೇ ? ಇಂತಹವರನ್ನು ಸರಕಾರವು ಕಾರಾಗೃಹಕ್ಕೆ ಅಟ್ಟಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು ಯಾರು ಬೇಕಾದರೂ ಹೇಗೆ ಬೇಕಾದರೂ ಹಿಂದೂ ಧರ್ಮ, ಧರ್ಮಗ್ರಂಥ, ದೇವರು, ಸಂತ ಮುಂತಾದವರನ್ನು ಮನಸ್ಸಿಗೆ ಬಂದAತೆ ಅವಮಾನಿಸುತ್ತಾರೆ ಮತ್ತು ೧೦೦ ಕೋಟಿ ಹಿಂದೂಗಳು ವಿರೋಧ ಮಾಡದೆ ಸುಮ್ಮನೆ ಸಹಿಸಿಕೊಳ್ಳುತ್ತಾರೆ ! ಇದು ಹಿಂದುಗಳಿಗೆ ಲಜ್ಜಾಸ್ಪದ ! ಯಾರೂ ಹಿಂದೂ ಧರ್ಮದ ಕಡೆಗೆ ವಕ್ರ ದೃಷ್ಟಿಯಿಂದ ನೋಡಬಾರದು, ಎಂದು ಹಿಂದುಗಳು ತಮ್ಮ ಅಸ್ತಿತ್ವ ಯಾವಾಗ ನಿರ್ಮಾಣ ಮಾಡುವರು ?- ಸಂಪಾದಕರು |
ಗಯಾ (ಬಿಹಾರ) – ವಿದ್ಯಾರ್ಥಿಗಳ ಚೀಲಗಳನ್ನು ಪರಿಶೀಲನೆ ಮಾಡುವಾಗ ಒಬ್ಬ ಶಿಕ್ಷಕಿ ನನ್ನ ಚೀಲದಲ್ಲಿನ ಶ್ರೀಮದ್ಭಗವದ್ಗೀತೆ ಮತ್ತು ಜಪಮಾಲೆಯನ್ನು ಕಸದ ಬುಟ್ಟಿಗೆ ಎಸೆದರು, ಎಂದು ಅಲ್ಲಿಯ ಬಾಗೇಶ್ವರಿ ಮಾರ್ಗದಲ್ಲಿರುವ `ಕೇಂದ್ರೀಯ ವಿದ್ಯಾಲಯ ೧’ ರಲ್ಲಿನ ವಿದ್ಯಾರ್ಥಿಯು ಆರೋಪಿಸಿದ್ದಾನೆ. ಒಂದು ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಈ ಹುಡುಗನ ಜೊತೆಗೆ ಚರ್ಚೆ ನಡೆಸಿ ಅದರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದರು. ಅದರ ನಂತರ ಪಾಟಲಿಪುತ್ರ (ಪಾಟ್ನಾ) ವಿಭಾಗಿಯ ಕಾರ್ಯಾಲಯಕ್ಕೆ ಸೂಚನೆ ನೀಡಲಾಗಿದ್ದು ಅಲ್ಲಿ ಒಂದು ಸಾಕ್ಷಿ ತನಿಖೆಗಾಗಿ ಕಳುಹಿಸಲಾಗಿದೆ.
तिलक लगा कर और अपने बैग में गीता लेकर स्कूल जाने वाले छात्र को सदफ नामक महिला शिक्षक ने डांटा व गीता का अपमान कर डस्टबिन में डाल दिया.
घटना ‘केंद्रीय विद्यालय गया’ की बताई जा रही है.@dpradhanbjp जांच कर कार्रवाई की अपेक्षा है. pic.twitter.com/pbQbxm5Acs
— Sudarshan News (@SudarshanNewsTV) December 11, 2021
೧. ಸಂಬಂಧಿತ ವಿಡಿಯೋದಲ್ಲಿ ಆ ವಿದ್ಯಾರ್ಥಿಯು, ನಾನು ನನ್ನ ಚೀಲದಲ್ಲಿ ಯಾವಾಗಲೂ ಭಗವದ್ಗೀತೆ ಮತ್ತು ಜಪಮಾಲೆ ಇಡುತ್ತೇನೆ. ೨ ದಿನಗಳ ಹಿಂದೆ ನನ್ನ ಶಿಕ್ಷಕಿಯು ಎಲ್ಲ ಮಕ್ಕಳ ಚೀಲವನ್ನು ನೋಡಿದರು, ಆಗ ಅವರಿಗೆ ನನ್ನ ಚೀಲದಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಜಪಮಾಲೆ ಸಿಕ್ಕಿದೆ. ಅದನ್ನು ಕಂಡು ಶಿಕ್ಷಕಿ ಕೋಪಗೊಂಡು ಅವರು ಶ್ರೀಮದ್ಭಗವದ್ಗೀತೆ ಮತ್ತು ಜಪಮಾಲೆಯನ್ನು ಕಸದ ಬುಟ್ಟಿಗೆ ಎಸೆದರು. ಹುಡುಗನ ಅಭಿಪ್ರಾಯದಲ್ಲಿ ಶಿಕ್ಷಕಿ ಬೇರೆ ಪಂಥದವರಾಗಿದ್ದಾರೆ.
೨. ಈ ವಿಡಿಯೋ ಬೆಳಕಿಗೆ ಬಂದನಂತರ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಆಮನಾ ಖಾತುನ ಇವರು, ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
೩. ಘಟನೆಯ ಬಗ್ಗೆ ಇಸ್ಕಾನ್ ದೇವಸ್ಥಾನದ ಅಧ್ಯಕ್ಷ ಜಗದೀಶ ಶ್ಯಾಮದಾಸ್ ಇವರು, “ಕೇಂದ್ರೀಯ ವಿದ್ಯಾಲಯದ ಕ್ರಮಾಂಕ ೧ ರಲ್ಲಿ ಕಳೆದ ಅನೇಕ ದಿನಗಳಿಂದ ಜುಟ್ಟು ಮತ್ತು ಹಣೆಯ ಮೇಲೆ ಕುಂಕುಮ ಇಡುವುದರ ಬಗ್ಗೆ ಮಕ್ಕಳಿಗೆ ಮಾನಸಿಕ ತೊಂದರೆ ನೀಡಲಾಗುತ್ತಿತ್ತು. ಇತ್ತೀಚೆಗೆ ಸನಾತನ ಧರ್ಮದ ಮಹಾನ ಗ್ರಂಥವನ್ನು ಈ ವಿದ್ಯಾಲಯದಲ್ಲಿ ಕಸದ ಬುಟ್ಟಿಗೆ ಎಸೆಯಲಾಗಿದೆ. ಯಾವ ವಿದ್ಯಾರ್ಥಿಯ ಜೊತೆಗೆ ಈ ಘಟನೆ ನಡೆದಿದೆ ಆತನು ಇಸ್ಕಾನ್‌ನ ಸೇವಕನಾಗಿದ್ದಾನೆ.” ಎಂದು ಹೇಳಿದರು.
ದೂರ ಸ್ವೀಕರಿಸಲು ಪೊಲೀಸರಿಂದ ನಕಾರ !ಈ ರೀತಿ ಏನಾದರೂ ಬೇರೆ ಪಂಥಗಳ ಸಂದರ್ಭದಲ್ಲಿ ನಡೆದಿದ್ದರೆ, ಪೊಲೀಸರು ಇದೇ ರೀತಿ ವರ್ತಿಸುತ್ತಿದ್ದರೇ ? ಇಂತಹ ಬೇಜವಾಬ್ದಾರಿತನದಿಂದ ಪರ್ತಿಸುವ ಪೊಲೀಸರಿಗೆ ಸರಕಾರವು ಜೀವಾವಧಿ ಶಿಕ್ಷೆ ನೀಡಬೇಕು, ಎಂದು ಹಿಂದೂಗಳ ಬೇಡಿಕೆಯಾಗಿದೆ!-ಸಂಪಾದಕರು ಪ್ರಸ್ತುತ ವಿದ್ಯಾರ್ಥಿಯ ತಂದೆ, ಈ ರೀತಿ ಹಿಂದುಗಳ ಧರ್ಮಗ್ರಂಥವನ್ನು ಘೋರವಾಗಿ ಅಪಮಾನಿಸಿದವರ ವಿರುದ್ಧ ದೂರನ್ನು ನೀಡಲು ನಾನು ಜಿಲ್ಲಾ ಪೊಲೀಸ್ ಠಾಣೆಗೆ ಹೋಗಿದ್ದೆ; ಆದರೆ ಪೊಲೀಸರು ದೂರನ್ನು ಸ್ವೀಕರಿಸಲು ನಿರಾಕರಿಸಿದರು. ತದನಂತರ ನಾನು ಹಿರಿಯ ಪೊಲೀಸ್ ಅಧಿಕಾರಿಗಳ ಹತ್ತಿರ ಮಾತನಾಡಿ ದೂರು ದಾಖಲಿಸಲು ಪ್ರಯತ್ನಿಸಿದೆ. ಆದರೆ ಅಲ್ಲಿಯೂ ದೂರು ಸ್ವೀಕರಿಸಲಿಲ್ಲ ಎಂದು ಹೇಳಿದರು. |
ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳದೆ ಇದ್ದರೆ ಆಂದೋಲನ ನಡೆಸುವೆವು ! – ಇಸ್ಕಾನ್
ಶ್ರೀಮದ್ಭಗವದ್ಗೀತೆ ಮತ್ತು ಜಪಮಾಲೆಯನ್ನು ಕಸದ ಬುಟ್ಟಿಗೆ ಎಸೆಯುವ ಶಿಕ್ಷಕಿಗೆ ಕಠಿಣ ಶಿಕ್ಷೆ ನೀಡಬೇಕು ಇಲ್ಲವಾದರೆ ಹಿಂದುತ್ವನಿಷ್ಠ ಸಂಘಟನೆಗಳ ಜೊತೆಗೆ ರಸ್ತೆಗೆ ಇಳಿದು ಆಂದೋಲನ ಮಾಡಲಾಗುವುದು ಎಂದು ನಗರದ ರೆಡ್‌ಕ್ರಾಸ್ ಇಲ್ಲಿಯ ಇಸ್ಕಾನ್ ದೇವಸ್ಥಾನದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪಕ ಜಗದೀಶ ಶಾಮದಾಸ ಮಹಾರಾಜ ಇವರು ಎಚ್ಚರಿಕೆ ನೀಡಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಸ್ತುತ ವಿದ್ಯಾರ್ಥಿ ಮಾನಸ ಚೌಹಾನ ಈತನು ರಾಹುಲ ಸಿಂಹ ಇವರ ಮಗ ಆಗಿದ್ದಾನೆ. ರಾಹುಲ್ ಸಿಂಹ ಇವರು ಬಹಳ ಹಿಂದಿನಿಂದಲೂ ಇಸ್ಕಾನ್ ಜೊತೆಗೆ ಇದ್ದಾರೆ ಮತ್ತು ಶ್ರೀಕೃಷ್ಣನ ಭಕ್ತರಾಗಿದ್ದಾರೆ. ಅವರು ತಮ್ಮ ಮಗನ ಮೇಲೆಯೂ ಸನಾತನ ಧರ್ಮದ ಸಂಸ್ಕಾರ ನೀಡಿದ್ದಾರೆ ಎಂದು ಹೇಳಿದರು.