ವಕ್ಫ್ ಬೋರ್ಡ್ ಮಸೂದೆಗೆ ‘ಗುಲ್ಶನ್ ಫೌಂಡೇಶನ್‌’ನ ಬೆಂಬಲ ಆದರೆ ತೃಣಮೂಲ ಕಾಂಗ್ರೆಸ್‌ನ ವಿರೋಧ !

ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ವಾಗ್ವಾದ

ಮುಂಬಯಿ – ‘ವಕ್ಫ್ ಬೋರ್ಡ್’ಗೆ ಸಂಬಂಧಿಸಿದ ಮಸೂದೆಯ ಸಂದರ್ಭದಲ್ಲಿ ಜಂಟಿ ಸಂಸದೀಯ ಸಮಿತಿಯ ಸಭೆ ಸೆಪ್ಟೆಂಬರ್ 26 ರಂದು ನಡೆಯಿತು. ಈ ಸಭೆಯಲ್ಲಿ ‘ಗುಲ್ಶನ್ ಫೌಂಡೇಶನ್’ ಪ್ರತಿನಿಧಿ ಸಭೆಯಲ್ಲಿ ವಕ್ಫ್ ಮಸೂದೆಯನ್ನು ಬೆಂಬಲಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಆಗ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಅದನ್ನು ವಿರೋಧಿಸಿದರು. ತದನಂತರ ಶಿವಸೇನಾ ಸಂಸದ ನರೇಶ್ ಮ್ಹಸ್ಕೆ ಅವರು ಪ್ರತಿಭಟನೆ ನಡೆಸಿ ಕಲ್ಯಾಣ್ ಬ್ಯಾನರ್ಜಿ ಅವರನ್ನು ತಡೆದರು. ಈ ಸಂದರ್ಭದಲ್ಲಿ ಬಹಳ ವಾಗ್ವಾದ ನಡೆಯಿತು. ತದ ನಂತರ ವಿರೋಧಪಕ್ಷವು ಆ ಇಬ್ಬರನ್ನೂ ಸಭೆಯಿಂದ ಹೊರಹಾಕುವ ನಿರ್ಧಾರವನ್ನು ತೆಗೆದುಕೊಂಡಿತು; ಆದರೆ ನಂತರ ಸಭೆ ನಿಲ್ಲಿಸಿ ಮತ್ತೆ ಆರಂಭಿಸಲಾಯಿತು.

ಮೋದಿ ಸರಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ಅದರಲ್ಲಿ 40 ಹೊಸ ನಿಯಮಗಳಿಗೆ ಅವಕಾಶ ಕಲ್ಪಿಸಿದೆ. ಈ ಕಾರಣದಿಂದಾಗಿ, ಯಾವುದೇ ಆಸ್ತಿಯನ್ನು ವಕ್ಫ್ ಮಂಡಳಿಯ ಆಸ್ತಿಯಾಗಿ ಪರಿವರ್ತಿಸುವುದಕ್ಕೆ ಅಂಕುಶ ಬೀಳಲಿದೆ. ಈ ಮಸೂದೆಗೆ ಅನುಮೋದನೆ ದೊರೆತರೆ ವಕ್ಫ್ ಮಂಡಳಿಯ ಆಸ್ತಿ ನಿರ್ವಹಣೆ ಮತ್ತು ವರ್ಗಾವಣೆಗೆ ಸಂಬಂಧಿಸಿದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ‘ವಕ್ಫ್’ ಎಂಬುದು ಅರೇಬಿಕ್ ಪದವಾಗಿದ್ದು, ಇದರ ಅರ್ಥ ‘ನಿಲ್ಲಿಸುವುದು’ ಅಥವಾ ‘ಸಮರ್ಪಿಸುವುದು’ ಎಂದಾಗಿದೆ.