|
ಸೂರತ (ಗುಜರಾತ) – ಇಲ್ಲಿನ ರಿಂಗರೋಡ ಭಾಗದಲ್ಲಿರುವ ಒಂದು ಉಪಹಾರಗೃಹದಲ್ಲಿ ‘ಪಾಕಿಸ್ತಾನೀ ಫೂಡ ಫೆಸ್ಟಿವ್ಹಲ’ನ ಆಯೋಜಿಸಲಾದ ಬಗ್ಗೆ ಬಜರಂಗ ದಳದ ಕೆಲವು ಕಾರ್ಯಕರ್ತರು ಆ ಉಪಹಾರಗೃಹದ ಮೇಲೆ ಆಕ್ರಮಣ ನಡೆಸಿ ಧ್ವಂಸಗೊಳಿಸಿದರು. ಅದರ ಜೊತೆಗೆ ಅಲ್ಲಿ ಹಾಕಲಾದ ಒಂದು ಬಟ್ಟೆಯ ಫಲಕವನ್ನು ತೆಗೆದು ಹಾಕಿ ಅದಕ್ಕೆ ಬೆಂಕಿ ಹಚ್ಚಿದರು. ಈ ಉಪಹಾರಗೃಹದಲ್ಲಿ ೧೨ ಡಿಸಂಬರನಿಂದ ‘ಟೇಸ್ಟ ಆಫ ಇಂಡಿಯಾ’ ಎಂಬ ಹೆಸರಿನ ಒಂದು ಮಹೋತ್ಸವವು ಪ್ರಾರಂಭವಾಯಿತು. ಡಿಸಂಬರ ೨೨ರವರೆಗೆ ನಡೆಯಲಿದ್ದ ಆ ಮಹೋತ್ಸವದಲ್ಲಿ ‘ಪಾಕಿಸ್ತಾನೀ ಫೂಡ ಫೆಸ್ಟಿವ್ಹಲ’ ಅನ್ನು ಸಹ ಆಯೋಜಿಸಲಾಗಿತ್ತು. ಸಂಬಂಧಪಟ್ಟ ಉಪಹಾರಗೃಹದವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾಗಿ ಬಜರಂಗ ದಳದ ಓರ್ವ ಅಧಿಕಾರಿಯು ಮಾಹಿತಿ ನೀಡಿದರು.
#BajrangDal sets fire to ‘Pakistani food fest’ banner in #Surat amid chants of ‘Jai Shri Ram’.https://t.co/x6cS9ORizh
— TIMES NOW (@TimesNow) December 14, 2021
೧. ಬಜರಂಗ ದಳದ ದಕ್ಷಿಣ ಗುಜರಾತ ವಿಭಾಗದ ಅಧ್ಯಕ್ಷರಾದ ದೇವೀಪ್ರಸಾದ ದುಬೆಯವರು ಉಪಹಾರಗೃಹದಲ್ಲಿ ಈ ರೀತಿಯ ಉತ್ಸವವನ್ನು ಆಯೋಜಿಸಲು ಬಿಡುವುದಿಲ್ಲ ಎಂದು ಹೇಳಿದರು
೨. ‘ಟೇಸ್ಟ ಆಫ ಇಂಡಿಯಾ’ ಅಭಿಯಾನವನ್ನು ನಡೆಸಲು ‘ಶುಗರ ಆಂಡ ಸ್ಪಾಯ್ಸ ರೆಸ್ಟಾರೆಂಟ’ನ ಸಂಚಾಲಕರಾದ ಸಂದೀಪ ಡಾವರರವರು, ಅನೇಕ ಜನರ ಭಾವನೆಗಳಿಗೆ ನೋವಾಗಿರುವುದರಿಂದ ಸಂಬಂಧಪಟ್ಟ ಕಾರ್ಯಕ್ರಮದಿಂದ ‘ಪಾಕಿಸ್ತಾನೀ’ ಎಂಬ ಶಬ್ಧವನ್ನು ಅದರಿಂದ ತೆಗೆದು ಹಾಕಲಿ ಎಂದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಲ್ಲಿ ಅಪರಾಧ ನೋಂದಾಯಿಸಲಾಗಿಲ್ಲ.