ನೋಯಡಾ (ಉತ್ತರಪ್ರದೇಶ)ದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ನಮಾಜಪಠಣಕ್ಕೆ ನೂರಾರು ಸಂಖ್ಯೆಯಲ್ಲಿ ಬಂದವರನ್ನು ಓಡಿಸಿದ ಪೊಲೀಸರು !

ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹೇಗೆ ತಾನೆ ಬರುತ್ತಾರೆ ? ಅವರಿಗೆ ಪೊಲೀಸರ ಭಯವಿಲ್ಲವೇ ?- ಸಂಪಾದಕರು 

ನೊಯಡಾ (ಉತ್ತರಪ್ರದೇಶ) – ದೆಹಲಿ ಹಾಗೂ ಎನ್.ಸಿ.ಆರ್. (ರಾಷ್ಟ್ರೀಯ ರಾಜಧಾನೀ ಪರಿಸರ)ದಲ್ಲಿ ಈಗ ಮಸೀದಿಗಳ ಬದಲು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸುವ ಘಟನೆಗಳು ಹೆಚ್ಚಾಗುತ್ತಿದೆ. ಹರಿಯಾಣಾದ ಗುರುಗ್ರಾಮದಲ್ಲಿ ಕೆಲವು ತಿಂಗಳುಗಳಿಂದ ಸಾರ್ವಜನಿಕ ನಮಾಜಪಠಣಕ್ಕೆ ವಿರೋಧವಾಗುತ್ತಿದೆ. ಈಗ ಉತ್ತರಪ್ರದೇಶದಲ್ಲಿನ ನೊಯಡಾದಲ್ಲಿ ಸಾರ್ವಕನಿಕ ಸ್ಥಳಗಳಲ್ಲಿ ನಮಾಜ ಪಠಿಸುವ ಪ್ರಕರಣಗಳು ಕಂಡು ಬಂದಿವೆ. ನೊಯಡಾ ಸೆಕ್ಟರ – ೫೪ನಲ್ಲಿ ಖರಗೋಶ ಪಾರ್ಕನಲ್ಲಿ ಶುಕ್ರವಾರ ಡಿಸಂಬರ ೧೦ರಂದು ಬಂದ ಮುಸಲ್ಮಾನರನ್ನು ಪೊಲೀಸರು ಓಡಿಸಿದರು. ಆ ಮುಸಲ್ಮಾನರು ಅಲ್ಲಿರುವ ಒಂದು ಕಾರ್ಖಾನೆಯ ಕೆಲಸಗಾರರಾಗಿದ್ದಾರೆ.

ಪೊಲೀಸರು ಜಿಲ್ಲೆಯಲ್ಲಿ ಅನುಚ್ಛೇದ ೧೪೪ (ಸಂಚಾರ ನಿಷೇಧಾಜ್ಞೆ) ಅನ್ವಯವಾಗಿದೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಸಾಮೂಹಿಕವಾಗಿ ಯಾವುದೇ ಕೃತಿ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದರು.