ನವದೆಹಲಿ – ಕಾಂಗ್ರೆಸ್ ನೇತೃತ್ವದ ಸಂಯುಕ್ತ ಸರಕಾರವು ತನ್ನ ಆಡಳಿತಾವಧಿಯಲ್ಲಿ ‘ಕೇಸರಿ ಭಯೋತ್ಪಾದನೆಯ ಹೆಸರಿನಡಿಯಲ್ಲಿ ನನ್ನನ್ನು ಸಿಲುಕಿಸಲು ಬಹಳ ಪ್ರಯತ್ನಿಸಿದರು. ಇದಕ್ಕಾಗಿ ೪೦೦ ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿದ್ದರು. ಸಂಪೂರ್ಣ ವ್ಯವಸ್ಥೆಯನ್ನೇ ಈ ಕಾರ್ಯಕ್ಕೆ ನಿಯೋಜಿಸಲಾಗಿತ್ತು; ಆದರೆ ಆರೋಪಿಗಳ ಪಟ್ಟಿಯಲ್ಲಿ ನನ್ನ ಹೆಸರನ್ನು ಹಾಕುವಲ್ಲಿ ಅವರು ಯಶಸ್ವಿಯಾಗಲಿಲ್ಲ. ನನ್ನ ಹೆಸರು ಸಾಕ್ಷಿದಾರರ ಸೂಚಿಯಲ್ಲಿಯೂ ಸೇರಿಸಿರಲಿಲ್ಲ; ಆದರೆ ಈ ಪ್ರಕರಣದಲ್ಲಿ ನಾನು ಸಹಭಾಗಿಯಾಗಿರುವ ದೊಡ್ಡ ವದಂತಿ ಹರಡಿಸಲಾಗಿತ್ತು. ಕೊನೆಗೂ ಜನತೆಯೇ ಈ ಸಂಯುಕ್ತ ಸರಕಾರಕ್ಕೆ ಹೊರಗಿನ ಮಾರ್ಗವನ್ನು ತೋರಿಸಿದರು ಮತ್ತು ಭಾಜಪವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದರು ಎಂದು ರಾ. ಸ್ವ. ಸಂಘದ ಮುಖಂಡರಾದ ಇಂದ್ರೇಶ ಕುಮಾರ ಹೇಳಿದರು.
ಇಂದ್ರೇಶ ಕುಮಾರ ಈ ಹಿಂದೆಯೂ ಜಮ್ಮೂ-ಕಾಶ್ಮೀರ ವಿಷಯದ ಬಗ್ಗೆ ಮಾತನಾಡುತ್ತಿರುವಾಗ, ಒಂದು ವೇಳೆ ಪಾಕಿಸ್ತಾನ ಕಾಶ್ಮೀರವಿಲ್ಲದೇ ಅದು ಅಪೂರ್ಣವಾಗಿದೆಯೆಂದು ಹೇಳುತ್ತಿದ್ದರೆ, ‘ಲಾಹೋರ ಮತ್ತು ಕರಾಚಿಯಿಲ್ಲದೇ ಭಾರತವೂ ಅಪೂರ್ಣವಾಗಿದೆ, ಎಂದು ಈಗ ಹೇಳಬೇಕಾಗುವುದು, ಎಂದು ಹೇಳಿದ್ದರು.