USA Sri Swaminarayan Temple Vandalised : ಅಮೇರಿಕಾ : ಶ್ರೀ ಸ್ವಾಮಿ ನಾರಾಯಣ ಮಂದಿರ ವಿಧ್ವಂಸ

‘ಹಿಂದುಗಳೇ ವಾಪಸ್ ಹೋಗಿ’ ಎಂದು ಗೋಡೆ ಮೇಲೆ ಬರಹ

ನ್ಯೂಯಾರ್ಕ್ (ಅಮೆರಿಕ) – ಕ್ಯಾಲಿಫೋರ್ನಿಯಾದಲ್ಲಿನ ಸೆಕ್ರಮೆಂಟೋ ನಲ್ಲಿನ ಶ್ರೀ ಸ್ವಾಮಿ ನಾರಾಯಣ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ‘ಹಿಂದುಗಳೇ ವಾಪಸ್ ಹೋಗಿ’ ಎಂದು ಹಿಂದೂ ವಿರೋಧಿ ಘೋಷಣೆಗಳನ್ನು ಕೂಡ ದೇವಸ್ಥಾನದ ಗೋಡೆಗಳ ಮೇಲೆ ಬರೆಯಲಾಗಿದೆ. ದೇವಸ್ಥಾನದ ನೀರಿನ ಪೈಪುಗಳನ್ನು ಕೂಡ ಮುರಿಯಲಾಗಿದೆ. ದಾಳಿ ಮಾಡಿರುವವರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಪೊಲೀಸರು ಇದರ ತನಿಖೆ ನಡೆಸುತ್ತಿದ್ದಾರೆ. ೧೦ ದಿನಗಳ ಹಿಂದೆ ನ್ಯೂಯಾರ್ಕ್ ನ ಮೇಲ್ವಿಲ್ ಇಂಡಿಯಾದಲ್ಲಿನ ಸ್ವಾಮಿ ನಾರಾಯಣ ದೇವಸ್ಥಾನದ ವಿಡಂಬನೆ ಕೂಡ ಮಾಡಲಾಗಿತ್ತು.

೧. ದೇವಸ್ಥಾನದ ಆಡಳಿತ ಮಂಡಳಿಯು ಈ ಬಗ್ಗೆ ಸುತ್ತೋಲೆ ಪ್ರಸಾರ ಮಾಡಿ, ಇಂತಹ ಘಟನೆಯನ್ನು ನಾವು ಶಾಶ್ವತವಾಗಿ ಖಂಡಿಸುತ್ತೇವೆ. ಇಂತಹ ಘಟನೆಯಿಂದ ನಮಗೆ ಬಹಳ ದುಃಖವಾಗಿದೆ. ಅಂತಃಕರಣದಲ್ಲಿ ದ್ವೇಷ ಇರುವ ಪ್ರತಿಯೊಬ್ಬರಿಗಾಗಿ ನಮ್ಮ ಪ್ರಾರ್ಥನೆ ಹೆಚ್ಚು ದೃಢಗೊಂಡಿವೆ ಎಂದು ಹೇಳಿದೆ.

೨. ಸ್ಯಾಕ್ರಮೆಂಟ ಕೌಂಟಿ ಪ್ರದೇಶದ ಸಂಸದ ಅಮೀ ಬೇರ್ ಅವರು ಈ ದಾಳಿಗಳ ಕುರಿತು ಮಾತನಾಡಿ, ಸ್ಯಾಕ್ರಮೆಂಟ ಕೌಂಟಿಯಲ್ಲಿ ಧಾರ್ಮಿಕ ಕಟ್ಟರತೆ ಮತ್ತು ದ್ವೇಷಕ್ಕೆ ಜಾಗವಿಲ್ಲ. ನಾವು ಸಮಾಜದಲ್ಲಿನ ಈ ಬಹಿರಂಗ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ನಾವೆಲ್ಲರೂ ಅಸಹಿಷ್ನತೆಯ ವಿರುದ್ಧ ನಿಲ್ಲಬೇಕು ಮತ್ತು ನಮ್ಮ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಸುರಕ್ಷಿತ ಅನುಭವವಾಗಬೇಕು ಮತ್ತು ಅವರಿಗೆ ಗೌರವ ನೀಡಬೇಕು ಇದರ ಖಾತ್ರಿ ಪಡಿಸಬೇಕು ಎಂದು ಹೇಳಿದರು.

೩. ಹಿಂದೂ ಅಮೆರಿಕನ್ ಫೌಂಡೇಶನ್ ಸಿನೇಟ್ ನ್ಯಾಯಿಕ ಸಮಿತಿಗೆ ಪತ್ರ ಬರೆದು ಕ್ಯಾಲಿಫೋರ್ನಿಯದಲ್ಲಿನ ಇಂತಹ ಹಿಂದೂ ವಿರೋಧಿ ಘಟನೆಯ ವಿಸ್ತೃತ ಮಾಹಿತಿ ನೀಡಿದೆ.

ಸಂಪಾದಕೀಯ ನಿಲುವು

ಅಮೇರಿಕಾ, ಕೆನಡಾ ಮುಂತಾದ ದೇಶಗಳಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸುತ್ತಿದ್ದಾರೆ. ಹಿಂದುಗಳು ಸಹಿಷ್ಣುಗಳಾಗಿರುವುದರಿಂದ ಅವರು ಎಲ್ಲೇ ಹೋದರು ಇಂತಹ ಘಟನೆಗಳಿಗೆ ಪ್ರತ್ಯುತ್ತರ ನೀಡುವುದಿಲ್ಲ. ಈ ಎರಡು ದೇಶಗಳಲ್ಲಿ ಖಲಿಸ್ತಾನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿರುವುದು ಕಾಣುತ್ತಿಲ್ಲ. ಭಾರತ ಸರಕಾರವು ಸೂಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಒತ್ತಡ ಹೇರುವುದು ಯಾವಾಗ ?