ಚಳಿಗಾಲದ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆ ಮಂಡಿಸಲಿರುವ ಕರ್ನಾಟಕ ಸರಕಾರ !

ಡಿಸೆಂಬರ್ ೨೦ ರಿಂದ ಪ್ರಾರಂಭವಾಗುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಾಗುವುದು, ಎಂದು ರಾಜ್ಯದ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಕಳೆದ 31 ವರ್ಷಗಳಲ್ಲಿ ಕೇವಲ 1 ಸಾವಿರದ 724 ಜನರ ಹತ್ಯೆಯಾಗಿದೆ ! – ಮಾಹಿತಿ ಅಧಿಕಾರದ ಅನ್ವಯ ಶ್ರೀನಗರದ ಪೊಲೀಸರು ನೀಡಿದ ಮಾಹಿತಿ

ಈ ಮಾಹಿತಿಯ ಮೇಲೆ ಭಾರತದಲ್ಲಿನ ಒಬ್ಬ ಹಿಂದೂವಾದರೂ ವಿಶ್ವಾಸವಿಡಬಹುದೇ ? ಇಂತಹ ಮಾಹಿತಿಯನ್ನು ನೀಡಿ ಶ್ರೀನಗರದ ಪೊಲೀಸರು ಭಯೋತ್ಪಾದಕರ ಅತ್ಯಾಚಾರಗಳನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆಯೇ ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ !

ಡಾ. ಝಾಕಿರ್ ನಾಯಕ್ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಮೇಲೆ ವಿಧಿಸಲಾದ ನಿಷೇಧದ ಕಾರಣ ಯೋಗ್ಯವೋ ಅಯೋಗ್ಯವೋ ಎಂಬುದನ್ನು ನಿರ್ಧರಿಸಲು ಪ್ರಾಧಿಕರಣ ಸ್ಥಾಪನೆ

ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕರಣವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕರಣವು ಜಿಹಾದಿ ಭಯೋತ್ಪಾದಕರಿಗೆ ಆದರ್ಶವಾಗಿರುವ ಡಾ. ಝಾಕಿರ್ ನಾಯಿಕ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಮೇಲೆ ನಿಷೇಧ ಹೇರಿರುವುದರ ಹಿಂದಿನ ಕಾರಣ ಯೋಗ್ಯವೋ ಅಯೋಗ್ಯವೋ, ಎಂಬುದನ್ನು ಪತ್ತೆ ಹಚ್ಚಲಿದೆ.

ಕೂನ್ನೂರಿನಲ್ಲಿ (ತಮಿಳುನಾಡು) ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ

ಗ್ರೂಪ್ ಕ್ಯಾಪ್ಟನ್ ವರುಣ ಸಿಂಹ ಮೇಲೆ ಬೆಂಗಳೂರಿನ ವಾಯುಪಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಅವರ ದೇಹ ಶೇ. ೪೫ ರಷ್ಟು ಸುಟ್ಟಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ಅವರು ಡಿಸೆಂಬರ್ ೧೫ ರಂದು ನಿಧನರಾದರು.

ಮದರ ತೆರೆಸಾರವರು ಸ್ಥಾಪಿಸಿರುವ ‘ಮಿಶನರೀಸ್ ಆಫ್ ಚಾರಿಟಿ ಸಂಸ್ಥೆಯ ವಿರುದ್ಧ ಮತಾಂತರದ ಅಪರಾಧ ದಾಖಲು !

ಮದರ ತೆರೆಸಾ ಇವರು ಸ್ಥಾಪಿಸಿರುವ ‘ಮಿಶನರೀಸ್ ಆಫ್ ಚಾರಿಟಿ ಈ ಕ್ರೈಸ್ತ ಸಂಸ್ಥೆಯ ವಿರುದ್ಧ ಮತಾಂತರದ ಆರೋಪ ಹೊರಿಸಿ ಅಪರಾಧವನ್ನು ದಾಖಲಿಸಲಾಗಿದೆ.

ಗುಜರಾತಿನಲ್ಲಿ ಉದ್ಯಾನವನದಲ್ಲಿ ಮಹಿಳೆಯರಿಂದ ನಮಾಜ ಪಠಣ !

ಒಂದು ಉದ್ಯಾನವನದಲ್ಲಿ ಬುರಖಾ ತೊಟ್ಟಿರುವ ಮುಸಲ್ಮಾನ ಮಹಿಳೆಯರು ನಮಾಜ ಪಠಣ ಮಾಡುತ್ತಿರುವಾಗ, ಹಾಗೂ ಇನ್ನೊಂದು ವಿಡಿಯೋದಲ್ಲಿ ಮುಸಲ್ಮಾನ ಪುರುಷರು ಮಕ್ಕಳ ಜಾರುಬಂಡಿಯ ಮೇಲ್ಭಾಗದಲ್ಲಿ ನಿಂತು ‘ಅಜಾನ್’ (ನಮಾಜ್ ಪಠಣ ಮಾಡಲು ಕರೆಯುವುದು) ನೀಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಗೋವುಗಳ ರಕ್ಷಣೆಗಾಗಿ ಖಡ್ಗಗಳು ಮತ್ತು ಇತರ ಆಯುಧಗಳನ್ನು ಖರೀದಿಸಿ! – ವಿಎಚ್‌ಪಿ ನಾಯಕಿ ಸಾಧ್ವಿ ಸರಸ್ವತಿ

ಸಂಚಾರವಾಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ಜನರು ಗೋವುಗಳ ರಕ್ಷಣೆಗಾಗಿ ಖಡ್ಗ ಮತ್ತಿತರ ಆಯುಧಗಳನ್ನು ಖರೀದಿಸಬೇಕು. ಲಕ್ಷಾಂತರ ರೂಪಾಯಿ ಮೌಲ್ಯದ ಸಂಚಾರವಾಣಿ ಖರೀದಿಸಲು ಜನರು ಶಕ್ತರಾಗಿದ್ದರೆ, ಅವರು ನಮ್ಮ ಹಸುಗಳನ್ನು ರಕ್ಷಿಸಲು ಖಂಡಿತವಾಗಿಯೂ ಆಯುಧಗಳನ್ನು ಖರೀದಿಸಿ ಮನೆಯಲ್ಲಿ ಇರಿಸಬಹುದು.

ಗೋಹತ್ಯೆ ನಿಷೇಧ ಕಾನೂನು ಮತ್ತು ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ !

ಗೋಹತ್ಯೆ ತಡೆಗೆ ಕಾನೂನನ್ನು ಜಾರಿಗೊಳಿಸುವುದರ ಜೊತೆಗೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಭಾಜಪ ಸಂಸದ ಕಿರೋಡಿ ಲಾಲ್ ಮೀಣಾ ಇವರು ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.

ಇಂದು ಚಿತ್ರಕೂಟ (ಉತ್ತರಪ್ರದೇಶ)ದಲ್ಲಿ ‘ಹಿಂದೂ ಏಕತಾ ಮಹಾಕುಂಭ’ದ ಆಯೋಜನೆ

ಡಿಸೆಂಬರ ೧೫ ರಂದು ‘ಹಿಂದೂ ಏಕತಾ ಮಹಾಕುಂಭ’ದ ಆಯೋಜನೆ ಮಾಡಲಾಗಿದೆ. ಇದರಲ್ಲಿ ೫ ಲಕ್ಷ ಭಕ್ತರು ಸಹಭಾಗಿಯಾಗುವ ಸಾಧ್ಯತೆಯಿದೆ.

ದೆಹಲಿಯ ‘ಅಕ್ಬರ್ ರಸ್ತೆ’ಗೆ ಜನರಲ್ ಬಿಪಿನ್ ರಾವತ್ ಇವರ ಹೆಸರು ಇಡಿ ! – ಭಾಜಪದಿಂದ ದೆಹಲಿ ಪುರಸಭೆಯಲ್ಲಿ ಆಗ್ರಹ

‘ಅಕ್ಬರ್ ರಸ್ತೆ’ಗೆ ದಿವಂಗತ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ – ಮೂರು ಸೇನೆಗಳ ಮುಖ್ಯಸ್ಥ) ಜನರಲ್ ಬಿಪಿನ್ ರಾವತ್ ಇವರ ಹೆಸರನ್ನು ಇಡುವಂತೆ ಒತ್ತಾಯಿಸಿ ದೆಹಲಿಯ ಭಾಜಪದಿಂದ ನವ ದೆಹಲಿ ಪುರಸಭೆಗೆ ಪತ್ರ ಬರೆದಿದೆ.