ಮುನಾವರ ಫಾರೂಕಿ ಇವನನ್ನು ಬೆಂಬಲಿಸುವವರು ನನ್ನನ್ನು ಬೆಂಬಲಿಸುವುದಿಲ್ಲ ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ಈ ವಿಷಯವಾಗಿ ಭಾರತದ ತಥಾಕಥಿತ ಜಾತ್ಯತೀತ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಮಾರ್ಕ್ಸ್‌ವಾದಿ ಕಮ್ಯನಿಸ್ಟ್ ಪಕ್ಷ ಮುಂತಾದ ರಾಜಕೀಯ ಪಕ್ಷಗಳು ಏಕೆ ಮಾತನಾಡುವುದಿಲ್ಲ ? ಮುನಾವರ್ ಫಾರೂಕಿ ಇವನಿಗೆ ಒಂದು ನ್ಯಾಯ ಮತ್ತು ತಸ್ಲೀಮಾ ನಸ್ರೀನ್ ಇವರಿಗೆ ಇನ್ನೊಂದು ನ್ಯಾಯ ಹೀಗೇಕೆ ?

ನವ ದೆಹಲಿ – ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಇವರ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಈ ವಿಷಯವಾಗಿ ಅವಮಾನ ಮಾಡುವಂತ ಸಂಭಾಷಣೆ ಮತ್ತು ಹಾಸ್ಯಗಳು ಇರುವುದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನ ನಡೆಸಿ ದೇಶಾದ್ಯಂತ ಆತನ ಕಾರ್ಯಕ್ರಮಗಳನ್ನು ರದ್ದುಪಡಿಸಿದರು. ಆದ್ದರಿಂದ ಫಾರೂಕಿ ಅವನು ‘ನಾನು ಹಾಸ್ಯ ಕಲಾವಿದ ಎಂದು ನನ್ನ ಪ್ರವಾಸ ಮುಗಿಸುತ್ತಿದ್ದೇನೆ’, ಎಂದು ಹೇಳಿದ. ಅನಂತರ ಆತನ ಬೆಂಬಲಿಗರು ಭಾರತದಲ್ಲಿನ ಪ್ರಗತಿಪರರು, ಜಾತ್ಯತೀತ ನಾಯಕರು, ಸಿನಿಮಾ ಕಲಾವಿದರು ಮುಂತಾದವರು ಬೆಂಬಲಕ್ಕೆ ಬಂದರು. ಇದರ ಬಗ್ಗೆ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಇವರು ಟ್ವೀಟ್ ಮಾಡಿದ್ದಾರೆ. ಅವರು, ‘ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಮುನಾವರ್ ಫಾರೂಕಿ ಇವನ ವಾಕ್‌ ಸ್ವಾತಂತ್ರ್ಯದ ರಕ್ಷಣೆ ಮಾಡುವಂತಹ ಲೇಖನ ಬರೆದೆ; ಆದರೆ ಮುನಾವರ್ ಫಾರೂಕಿ ಇವರ ವಾಕ್‌ ಸ್ವಾತಂತ್ರ್ಯವನ್ನು ಬೆಂಬಲಿಸುವ ಹೆಚ್ಚಿನ ಜನರು ನನ್ನ ವಾಕ್‌ ಸ್ವಾತಂತ್ರ್ಯವನ್ನು ಬೆಂಬಲಿಸುವುದಿಲ್ಲ.’ ತಸ್ಲೀಮಾ ನಸ್ರೀನ್ ಅವರು ತಮ್ಮ ‘ಲಜ್ಜಾ’ ಈ ಕಾದಂಬರಿ ಮುಖಾಂತರ ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಬರೆದಿದ್ದಾರೆ. ಈ ಕಾದಂಬರಿಯಿಂದ ಮತಾಂಧರು ತಸ್ಲೀಮಾ ನಸ್ರೀನ್ ಅವರನ್ನು ಹತ್ಯೆ ಮಾಡುವ ಫತ್ವಾ ಹೊರಡಿಸಿದ್ದರಿಂದ ಅವರು ದೇಶ ಬಿಟ್ಟು ವಿದೇಶದಲ್ಲಿ ಆಶ್ರಯ ಪಡೆಯಬೇಕಾಯಿತು. ಕಳೆದ ೨೦ ವರ್ಷಗಳಿಗಿಂತಲೂ ಹೆಚ್ಚು ಸಮಯ ತಸ್ಲೀಮಾ ನಸ್ರೀನ್ ಇವರಿಗೆ ಪ್ರಗತಿಪರರು, ಜಾತ್ಯತೀತರಿಂದ ಸಹಾಯ ಅಥವಾ ಬೆಂಬಲ ಸಿಗಲಿಲ್ಲ. ಈ ವಿಷಯವಾಗಿ ಅವರು ಈ ಟ್ವೀಟ್‌ನಲ್ಲಿ ಬರೆದಿದ್ದಾರೆ.