ಪ್ರಧಾನಮಂತ್ರಿ ಮೋದಿಯವರ ಟ್ವಿಟರ್ ಖಾತೆ ಕೆಲವು ಸಮಯಗಳ ಕಾಲ ‘ಹ್ಯಾಕ್ !

‘ಹ್ಯಾಕ್ ಮಾಡುವವರಿಂದ ‘ಬಿಟ್‌ಕಾಯಿನ್ ಈ ಅವಾಸ್ತವಿಕ ಚಲನ್ ಕುರಿತು ಟ್ವೀಟ್

ಪ್ರಧಾನ ಮಂತ್ರಿಗಳ ಖಾತೆ ‘ಹ್ಯಾಕ್ ಆಗಬಹುದಾಗಿದ್ದರೆ, ಸಾಮಾನ್ಯ ನಾಗರೀಕರ ಖಾತೆಯ ಬಗ್ಗೆ ಏನು ?

ನವ ದೆಹಲಿ – ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಡಿಸೆಂಬರ ೧೧ ರ ತಡರಾತ್ರಿ ಕೆಲವು ಕಾಲಾವಧಿಗಾಗಿ ‘ಹ್ಯಾಕ್ ಮಾಡಲಾಗಿತ್ತು. ಕೆಲವೇ ಸಮಯದ ಬಳಿಕ ಪುನ: ಸುರಕ್ಷಿತಗೊಳಿಸಲಾಗಿದೆ. ಖಾತೆ ‘ಹ್ಯಾಕ್ ಮಾಡಿ ಅಲ್ಲಿ ‘ಬಿಟ್‌ಕ್ವಾಯಿನ್ (ಅವಾಸ್ತವವಾದ ಚಲನ) ಕಾನೂನಾತ್ಮಕಗೊಳಿಸಲಾಗಿರುವ ಬಗ್ಗೆ ಒಂದು ಟ್ವೀಟ್ ಮಾಡಲಾಗಿತ್ತು. ಅದರಲ್ಲಿ ‘ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧವಾಗಿ ಸ್ವೀಕರಿಸಿದೆ ಎಂದು ಬರೆಯಲಾಗಿತ್ತು. ಸರಕಾರವು ಅಧಿಕೃತವಾಗಿ ೫೦೦ ಬಿಟ್‌ಕ್ವಾಯಿನ್ಸ್ ಖರೀದಿಸಿದೆ ಮತ್ತು ಅದನ್ನು ದೇಶದ ಎಲ್ಲ ನಾಗರಿಕರಿಗೆ ವಿತರಿಸುತ್ತಿದೆ, ಎಂದು ಹೇಳಲಾಗಿತ್ತು. ಈ ಟ್ವೀಟ್‌ನೊಂದಿಗೆ ಒಂದು ಲಿಂಕ್ ಕೂಡ ಪ್ರಸಾರ ಮಾಡಲಾಗಿತ್ತು. ಈ ಕುರಿತು ಪ್ರಧಾನಮಂತ್ರಿಗಳ ಕಾರ್ಯಾಲಯವು ‘ಪ್ರಧಾನಮಂತ್ರಿಗಳ ಟ್ವಿಟರ್ ಖಾತೆಯೊಂದಿಗೆ ಹ್ಯಾಕ್ ಆಗಿರುವ ಅವಧಿಯಲ್ಲಿ ಮಾಡಿರುವ ಟ್ವೀಟ್ ಅನ್ನು ನಿರ್ಲಕ್ಷಿಸಬೇಕು, ಎಂದು ತಿಳಿಸಿದೆ.

ಈ ವಿಷಯದಲ್ಲಿ ‘ಟ್ವಿಟರ್ ಇಂಡಿಯಾ ಪ್ರಸಾರ ಮಾಡಿರುವ ಮನವಿಯಲ್ಲಿ, ಪ್ರಧಾನ ಮಂತ್ರಿಗಳ ಖಾತೆ ‘ಹ್ಯಾಕ್ ಆಗಿರುವ ಮಾಹಿತಿ ಸಿಗುತ್ತಲೇ ನಾವು ಕೂಡಲೇ ಸಕ್ರಿಯರಾದೆವು. ನಮ್ಮ ತಪಾಸಣೆಯಲ್ಲಿ ‘ಇಲ್ಲಿಯವರೆಗೆ ಇನ್ನಿತರ ಯಾವುದೇ ಖಾತೆಗಳ ಮೇಲೆ ಪರಿಣಾಮವಾಗಿರುವ ಯಾವುದೇ ಸಂಕೇತಗಳು ಸಿಕ್ಕಿಲ್ಲ, ಎಂದು ಕಂಡು ಬಂದಿದೆ ಎಂದು ತಿಳಿಸಿದೆ. ನಾವೂ ಕೂಡ ಪ್ರಧಾನ ಮಂತ್ರಿಗಳ ಕಾರ್ಯಾಲಯದೊಂದಿಗೆ ಸಂವಾದ ಸಾಧಿಸಲು ೨೪ ಗಂಟೆಯೂ ಉಪಲಬ್ಧರಿದ್ದೇವೆ. ನಮಗೆ ಈ ‘ಹ್ಯಾಕಿಂಗ ಕುರಿತು ಗಮನಕ್ಕೆ ಬರುತ್ತಲೇ ನಮ್ಮ ಟೀಂ ಅವರ ಖಾತೆ ಸುರಕ್ಷಿತಗೊಳಿಸಲು ತಕ್ಷಣವೇ ಆವಶ್ಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿತು.