ರಾಷ್ಟ್ರ ಪ್ರೇಮಿಗಳಿಗೆ ಈ ತಪ್ಪನ್ನು ಈಗ ಭಾರತವು ಸುಧಾರಿಸಬೇಕು ಎಂದು ಅನಿಸುತ್ತದೆ ! – ಸಂಪಾದಕರು
ನವದೆಹಲಿ – 1971 ರ ಯುದ್ಧವು ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯನ್ನು ಐತಿಹಾಸಿಕ ತಪ್ಪು, ಎಂಬುದನ್ನು ಹೇಳುತ್ತದೆ. ಪಾಕಿಸ್ತಾನವು ಒಂದು ಧರ್ಮದ ಹೆಸರಿನಲ್ಲಿ ಜನಿಸಿದೆ; ಆದರೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಎಂದು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು ಹೇಳಿಕೆ ನೀಡಿದ್ದಾರೆ. ಅವರು ಸಶಸ್ತ್ರ ದಳಗಳ ಕೊಡುಗೆಯನ್ನು ಸ್ಮರಿಸುವ ‘ಸ್ವರ್ಣಿಮ ವಿಜಯ ಪರ್ವ’ ದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
India’s partition on the basis of religion was a “historic mistake”, Defence Minister Rajnath Singh said.
(@manjeetnegilive) https://t.co/VCDnuOmnLV— IndiaToday (@IndiaToday) December 12, 2021
ರಾಜನಾಥ ಸಿಂಹರವರು ಮುಂದುವರೆದು ಹೀಗೆ ಹೇಳಿದರು
1. ಭಾರತೀಯ ಸೈನ್ಯವು 1971 ರಲ್ಲಿ ಪಾಕಿಸ್ತಾನದ ಭಾರತವಿರೋಧಿ ಕಾರ್ಯಾಚರಣೆಗಳನ್ನು ಕಿತ್ತೆಸೆದಿತ್ತು ಮತ್ತು ಭಯೋತ್ಪಾದಕರನ್ನು ನಾಶಮಾಡಲು ಕಾರ್ಯ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಭಾರತವು ಪಾಕಿಸ್ತಾನದ ಉಪಟಳವನ್ನು ತಡೆಯಲು ಕಾರ್ಯನಿರತವಾಗಿದೆ. ಅಂದು ನಡೆದ ಪ್ರತ್ಯಕ್ಷ ಯುದ್ಧದಲ್ಲಿ ನಾವು ವಿಜಯಿಯಾಗಿದ್ದೆವು ಮತ್ತು ಪರೋಕ್ಷ ಯುದ್ಧದಲ್ಲಿಯೂ ವಿಜಯವು ನಮ್ಮದೇ ಆಗಲಿದೆ.
2. ಒಂದು ದೇಶವನ್ನು ಯುದ್ಧದಲ್ಲಿ ಸೋಲಿಸಿದ ನಂತರ ಇನ್ನೊಂದು ದೇಶ ಅದರ ಮೇಲೆ ವರ್ಚಸ್ಸನ್ನು ಬೀರದೆ ರಾಜಕೀಯ ಪ್ರತಿನಿಧಿಗಳಿಗೆ ಅಧಿಕಾರವನ್ನು ವಹಿಸುತ್ತದೆ. ಭಾರತವು ಹೀಗೆಯೇ ಮಾಡಿದೆ; ಏಕೆಂದರೆ ಅದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಇದನ್ನು ಇತಿಹಾಸದಲ್ಲಿ ಖಂಡಿತವಾಗಿಯೂ ನೋಡಬಹುದು. (1971 ರಲ್ಲಿ ನಿರ್ಮಾಣವಾದ ಬಾಂಗ್ಲಾದೇಶವು ಬೇರೆ ದೇಶವಾಗಿರಲಿಲ್ಲ, ಅದು ಕೆಲವು ವರ್ಷಗಳ ಹಿಂದೆ ಬೇರ್ಪಡಿಸಲಾದ ಭಾರತದ ಭಾಗವೇ ಆಗಿತ್ತು. ಅದು ಬೇರೆಯಾದ ನಂತರವೂ ಸ್ವತಂತ್ರವಾಗಿರಲಿಲ್ಲ, ಆದುದರಿಂದ ಭಾರತವು ಅದನ್ನು ಪುನಃ ಭಾರತದಲ್ಲಿ ಸಹಭಾಗಿಯಾಗಿಸಿಕೊಳ್ಳಬೇಕಿತ್ತು, ಇದು ಸುರಕ್ಷಾ ದೃಷ್ಟಿಯಿಂದ ಯೋಗ್ಯವಾಗಿತ್ತು ! – ಸಂಪಾದಕರು)