ಚೆನ್ನೈ (ತಮಿಳುನಾಡು) – ತಮಿಳುನಾಡಿನ ಪ್ರಸಿದ್ಧ ಪಳನಿ ದೇವಸ್ಥಾನದಲ್ಲಿ ಪಂಚಾಮೃತದಲ್ಲಿ ನಪುಂಸಕತ್ವಕ್ಕೆ ಕಾರಣವಾಗುವ ಔಷಧಿಗಳನ್ನು ಬೆರೆಸಲಾಗುತ್ತಿದೆಯೆಂದು ತಮಿಳು ಚಲನಚಿತ್ರ ನಿರ್ದೇಶಕ ಮೋಹನ್ ಜಿ. ಇವರು ಆರೋಪವನ್ನು ಮಾಡಿದ್ದಾರೆ. ಈ ಆರೋಪದ ನಂತರ, ಮೋಹನರನ್ನು ಬಂಧಿಸಲಾಯಿತು.
ಒಂದು ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮೋಹನ ಇವರು ಮಾತನಾಡಿ, ಪುರುಷರಲ್ಲಿ ನಪುಂಸಕತ್ವವನ್ನು ಉಂಟುಮಾಡುವ ಔಷಧಿಗಳನ್ನು ಪಂಚಾಮೃತದಲ್ಲಿ ಬೆರೆಸಲಾಗುತ್ತದೆ ಎಂದು ನಾನು ಕೇಳಿದ್ದೆನು. ಈ ವಿಷಯ ಎಲ್ಲೆಡೆ ಹರಡುವ ಮೊದಲೇ ಪಂಚಾಮೃತವನ್ನು ಮುಚ್ಚಿಟ್ಟು ನಷ್ಟಗೊಳಿಸಲಾಗಿದೆ. ಪುರಾವೆಗಳಿಲ್ಲದೇ ಮಾತನಾಡಬಾರದು; ಆದರೆ ದೇವಸ್ಥಾನದಿಂದ ಸೂಕ್ತ ಸ್ಪಷ್ಟೀಕರಣ ನೀಡಲಾಗಿಲ್ಲ. ಅಲ್ಲಿ ಕೆಲಸ ಮಾಡುವ ಜನರು ನನಗೆ ಗರ್ಭನಿರೋಧಕ ಮಾತ್ರೆಗಳನ್ನು ಪಂಚಾಮೃತದಲ್ಲಿ ಬೆರೆಸಲಾಗುತ್ತಿರುವ ವಿಷಯವನ್ನು ಹೇಳಿದರು. ಇದು ಎಲ್ಲ ಹಿಂದೂಗಳ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ಹೇಳಿದರು.
ಈ ಸಂದರ್ಶನದ ವಿಡಿಯೋ ಪ್ರಸಾರವಾಗುತ್ತಲೇ ತಿರುಚ್ಚಿ ಪೊಲೀಸರ ಸೈಬರ್ ಕ್ರೈಮ್ ಶಾಖೆಯು ಮೋಹನ್ ಅವರನ್ನು ಬಂಧಿಸಿತು. ಪಳನಿ ಮಂದಿರದ ಪಂಚಾಮೃತದ ವಿಷಯದಲ್ಲಿ ಸುಳ್ಳು ಸುದ್ದಿಯನ್ನು ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆ ಸಚಿವ ಸೇಕರ್ ಬಾಬು ಎಚ್ಚರಿಕೆ ನೀಡಿದ್ದಾರೆ.