ಮಾಸ್ಕೋ (ರಷ್ಯಾ) – ನಮ್ಮ ದೇಶದ ಪರಮಾಣು ನಿಯಮಗಳಿಗೆ ಅನೇಕ ಹೊಸ ವಿಷಯಗಳನ್ನು ಸೇರಿಸಲಾಗುವುದು. ಇದರಲ್ಲಿ ರಶಿಯಾ ವಿರುದ್ಧ ಕ್ಷಿಪಣಿಯಾಸ್ತ್ರ ಅಥವಾ ಡ್ರೋನ್ ದಾಳಿಗಳ ವಿರುದ್ಧ ಅಣ್ವಸ್ತ್ರಗಳ ಬಳಕೆಯೂ ಒಳಗೊಂಡಿದೆ. ರಾಶಿಯಾದ ಸಾರ್ವಭೌಮತೆಗೆ ಗಂಭೀರ ಅಪಾಯ ನಿರ್ಮಾಣ ಮಾಡುವ ಕ್ಷಿಪಣಿಯಾಸ್ತ್ರ ಅಥವಾ ಡ್ರೋನ್ ಮೂಲಕ ದಾಳಿ ನಡೆದರೆ ನಾವು ಅಣ್ವಸ್ತ್ರಗಳನ್ನು ಉಪಯೋಗಿಸಬಹುದು ಎಂದು ರಶಿಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಪುಟಿನ್ ಅವರು ಮಾಸ್ಕೋದಲ್ಲಿ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದ್ದರು, ಆ ಸಭೆಯಲ್ಲಿ ಈ ಮಾತನ್ನು ಹೇಳಿದ್ದಾರೆ ಈ ಹಿಂದೆಯೂ ಕೂಡ ಪುಟಿನ್ ಸಾರ್ವಜನಿಕವಾಗಿ ಇಂತಹುದೇ ಹೇಳಿಕೆಯನ್ನು ನೀಡಿದ್ದರು.
1. ಅಣ್ವಸ್ತ್ರವಿರದ ದೇಶವು ಒಂದು ವೇಳೆ ಅಣ್ವಸ್ತ್ರ ಹೊಂದಿರುವ ದೇಶಗಳ ಬೆಂಬಲದೊಂದಿಗೆ ರಶಿಯಾ ಮೇಲೆ ದಾಳಿ ನಡೆಸಿದರೆ, ಅದನ್ನು ಆ ಎರಡೂ ದೇಶಗಳು ಸೇರಿ ಮಾಡಿರುವ ದಾಳಿಯೆಂದು ಪರಿಗಣಿಸಲಾಗುವುದು. ರಶಿಯಾ ಬಳಿ ಇರುವ ಅಣ್ವಸ್ತ್ರದಿಂದ ದೇಶ ಮತ್ತು ನಾಗರಿಕರ ಭದ್ರತೆ ಸುರಕ್ಷಿತವಾಗಿದೆ.
2. ಬ್ರಿಟನ್ ಉಕ್ರೇನ್‌ಗೆ ‘ಸ್ಟಾರ್ಮ್ ಶ್ಯಾಡೋ’ ಮತ್ತು ಅಮೇರಿಕಾ ‘ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಮ್’ ಕ್ಷಿಪಣಿಯಾಸ್ತ್ರಗಳನ್ನು ಪೂರೈಸಿದೆ. ಈ ದೂರದ ಗುರಿ ಸಾಧಿಸುವ ಕ್ಷಿಪಣಿಗಳು ಮಾರಣಾಂತಿಕ ಕ್ಷಿಪಣಿಗಳಾಗಿವೆ, ಇವು ಸುಮಾರು 300 ಕಿಮೀ ದೂರದ ಗುರಿಗಳನ್ನು ನಿಖರವಾಗಿ ಹೊಡೆಯಬಲ್ಲದು. ಉಕ್ರೇನ್ ಈ ಕ್ಷಿಪಣಿಯಾಸ್ತ್ರಗಳನ್ನು ಕೇವಲ ರಶಿಯಾ ಗಡಿಯಲ್ಲಿಯೇ ಬಳಸಬಹುದಾಗಿದೆ. ಆದರೆ ರಶಿಯಾದೊಳಗೆ ದಾಳಿ ನಡೆಸಲು ಸಾಧ್ಯವಾಗುವಂತೆ ಷರತ್ತನ್ನು ಬದಲಿಸಲು ಉಕ್ರೇನ್ ಪ್ರಯತ್ನಿಸುತ್ತಿದೆ ಎಂದು ಪುಟಿನ್ ಹೇಳಿದರು.