ಜಮ್ಮು-ಕಾಶ್ಮೀರದಲ್ಲಿ ಕಳೆದ 31 ವರ್ಷಗಳಲ್ಲಿ ಕೇವಲ 1 ಸಾವಿರದ 724 ಜನರ ಹತ್ಯೆಯಾಗಿದೆ ! – ಮಾಹಿತಿ ಅಧಿಕಾರದ ಅನ್ವಯ ಶ್ರೀನಗರದ ಪೊಲೀಸರು ನೀಡಿದ ಮಾಹಿತಿ

ಇದರಲ್ಲಿ ಕೇವಲ 89 ಕಾಶ್ಮೀರಿ ಹಿಂದೂಗಳಿದ್ದಾರೆ

1 ಲಕ್ಷ 35 ಸಾವಿರ ಕಾಶ್ಮೀರಿ ಹಿಂದೂಗಳ ಪಲಾಯನ

ಈ ಮಾಹಿತಿಯ ಮೇಲೆ ಭಾರತದಲ್ಲಿನ ಒಬ್ಬ ಹಿಂದೂವಾದರೂ ವಿಶ್ವಾಸವಿಡಬಹುದೇ ? ಇಂತಹ ಮಾಹಿತಿಯನ್ನು ನೀಡಿ ಶ್ರೀನಗರದ ಪೊಲೀಸರು ಭಯೋತ್ಪಾದಕರ ಅತ್ಯಾಚಾರಗಳನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆಯೇ ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ !- ಸಂಪಾದಕರು

ಶ್ರೀನಗರ (ಜಮ್ಮು ಕಾಶ್ಮೀರ) – ಕಳೆದ 31 ವರ್ಷಗಳಲ್ಲಿ ಕಾಶ್ಮೀರದಲ್ಲಿ ಜಿಹಾದಿ ಭಯೊತ್ಪಾದಕರು 1 ಸಾವಿರದ 824 ಜನರನ್ನು ಕೊಂದು ಹಾಕಿದ್ದಾರೆ. ಅವರಲ್ಲಿ ಕೇವಲ 89 ಜನರು ಕಾಶ್ಮೀರಿ ಹಿಂದೂಗಳಾಗಿದ್ದರೆ, ಉಳಿದವರು ಮುಸಲ್ಮಾನರಾಗಿದ್ದರು ಎಂಬ ಮಾಹಿತಿಯನ್ನು ಶ್ರೀನಗರ ಜಿಲ್ಲಾ ಪೊಲೀಸ್ ಮುಖ್ಯಾಲಯವು ಕಳೆದ ತಿಂಗಳಿನಲ್ಲಿ ಹರಿಯಾಣದ ಓರ್ವ ವ್ಯಕ್ತಿಯ ಮಾಹಿತಿ ಅಧಿಕಾರದ ಅನ್ವಯ ಮಾಡಲಾದ ಅರ್ಜಿಗೆ ನೀಡಿದೆ.

ಎರಡನೇ ಅರ್ಜಿಯ ಮೇಲೆ ಮಾಹಿತಿ ನೀಡುವಾಗ ‘ರಾಜ್ಯದಲ್ಲಿ 1 ಲಕ್ಷ 54 ಸಾವಿರ ಜನರಲ್ಲಿ ಶೇ. 88 ರಷ್ಟು ಜನರು (1 ಲಕ್ಷ 35 ಸಾವಿರ ಜನರು) 1990ರ ನಂತರ ಹೆಚ್ಚಾದ ಹಿಂಸಾಚಾರ ಮತ್ತು ಒತ್ತಡದ ಹಿನ್ನೆಲೆಯಲ್ಲಿ ಕಣಿವೆಯಿಂದ ಪಲಾಯನ ಮಾಡಿದ್ದರು, ಇವರು ಕಾಶ್ಮೀರಿ ಪಂಡಿತರಾಗಿದ್ದರು. ಉಳಿದ 18 ಸಾವಿರದ 735 ಜನರು ಮುಸಲ್ಮಾನರಾಗಿದ್ದರು’ ಎಂದು ಹೇಳಲಾಗಿದೆ.

1. ಮಾಹಿತಿ ಅಧಿಕಾರದ ಅನ್ವಯ ಅರ್ಜಿ ಹಾಕಿರುವ ವ್ಯಕ್ತಿಯು ‘ಕಾಶ್ಮೀರಿ ಹಿಂದೂಗಳ ಪುನರ್ವಸತಿ ಅಥವಾ ಪುನರ್ವಸತಿಯಾಗಿರುವ ಸಂಖ್ಯೆಯನ್ನು ಪೊಲೀಸ್ ಮುಖ್ಯಾಲಯದಿಂದ ನೀಡಲಾಗಿರುವ ಮಾಹಿತಿಯಿಂದ ಅಳಿಸಲಾಗಿದೆ’ ಎಂದು ಆರೋಪಿಸಿದ್ದಾನೆ.

2. ಇನ್ನೊಂದು ಕಡೆಯಲ್ಲಿ ಜನವರಿ 2017 ರಿಂದ ನವೆಂಬರ್ 30, 2021 ರ ನಡುವೆ ಜಮ್ಮು-ಕಾಶ್ಮೀರದಲ್ಲಿ ಪ್ರತಿವರ್ಷ 37 ರಿಂದ 40 ನಾಗರಿಕರ ಹತ್ಯೆಯಾಗಿದೆ ಎಂಬ ಮಾಹಿತಿಯನ್ನು ಕೇಂದ್ರೀಯ ಗೃಹ ಮಂತ್ರಿಗಳಾದ ನಿತ್ಯಾನಂದ ರಾಯರವರು ಡಿಸೆಂಬರ್ 15ರಂದು ರಾಜ್ಯಸಭೆಯಲ್ಲಿ ನೀಡಿದ್ದಾರೆ.