ಚಳಿಗಾಲದ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆ ಮಂಡಿಸಲಿರುವ ಕರ್ನಾಟಕ ಸರಕಾರ !

ರಾಜ್ಯದ ಇಂಧನ ಸಚಿವ ವಿ. ಸುನೀಲ ಕುಮಾರ

ಬೆಳಗಾವಿ – ಡಿಸೆಂಬರ್ ೨೦ ರಿಂದ ಪ್ರಾರಂಭವಾಗುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಾಗುವುದು, ಎಂದು ರಾಜ್ಯದ ಇಂಧನ ಸಚಿವ ವಿ. ಸುನೀಲ ಕುಮಾರ ಹೇಳಿದರು.

ಸುನೀಲ ಕುಮಾರ ಮಾತನಾಡುತ್ತಾ, “ಭಾಜಪ ಸರಕಾರ ಗೋಹತ್ಯೆ ನಿಷೇಧ ಹಾಗೂ ಮತಾಂತರ ತಡೆ ಕಾನೂನನ್ನು ಜಾರಿಗೊಳಿಸಲಿದೆ ಎಂದು ಮೊದಲಿನಿಂದಲೂ ಹೇಳುತ್ತಿದ್ದೆ. ಇದಕ್ಕೆ ನಾವೂ ಬದ್ಧರಾಗಿದ್ದೇವೆ. ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ದಿನಗಳಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನನ್ನು ಜಾರಿಗೆ ತರಲಿದ್ದೇವೆ”, ಎಂದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕೆಲವು ಸಂಘಟನೆಗಳು, ‘ನಾವು ಮತಾಂತರದಲ್ಲಿ ಸಹಭಾಗಿ ಇಲ್ಲ.’ ಹೀಗಿದ್ದರೆ ‘ಅವರು ಮತಾಂತರ ನಿಷೇಧ ಕಾನೂನಿಗೆ ಏಕೆ ವಿರೋಧಿಸುತ್ತಾರೆ ?’, ಎಂದು ಪ್ರಶ್ನಿಸಿದರು. ಕರ್ನಾಟಕದ ಆರ್ಚ್ ಬಿಷಪ್ ಮಚಾಡೋ ಮತಾಂತರ ನಿಷೇಧ ಕಾನೂನು ಜಾರಿಗೆ ತರುವುದನ್ನು ವಿರೋಧಿಸಿದ್ದಾರೆ. (ಕ್ರೈಸ್ತ ಮಿಷನರಿಗಳು ಮುಗ್ಧ ಮತ್ತು ಬಡ ಆದಿವಾಸಿ ಹಿಂದೂಗಳನ್ನು ಆಮಿಷವೊಡ್ಡಿ ಮತಾಂತರಿಸುತ್ತಾರೆ. ಈ ಕಾನೂನಿನಿಂದ ಅವರಿಗೆ ಬಿಸಿ ಮುಟ್ಟಲಿದೆ ಆದ್ದರಿಂದ ಮಚಾಡೋಗೆ ಹೊಟ್ಟೆಯುರಿ ಬಂದಿರುವುದು ಸ್ಪಷ್ಟವಾಗಿದೆ ! – ಸಂಪಾದಕರು)