ಡಾ. ಝಾಕಿರ್ ನಾಯಕ್ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಮೇಲೆ ವಿಧಿಸಲಾದ ನಿಷೇಧದ ಕಾರಣ ಯೋಗ್ಯವೋ ಅಯೋಗ್ಯವೋ ಎಂಬುದನ್ನು ನಿರ್ಧರಿಸಲು ಪ್ರಾಧಿಕರಣ ಸ್ಥಾಪನೆ

ನವ ದೆಹಲಿ – ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕರಣವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕರಣವು ಜಿಹಾದಿ ಭಯೋತ್ಪಾದಕರಿಗೆ ಆದರ್ಶವಾಗಿರುವ ಡಾ. ಝಾಕಿರ್ ನಾಯಿಕ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಮೇಲೆ ನಿಷೇಧ ಹೇರಿರುವುದರ ಹಿಂದಿನ ಕಾರಣ ಯೋಗ್ಯವೋ ಅಯೋಗ್ಯವೋ, ಎಂಬುದನ್ನು ಪತ್ತೆ ಹಚ್ಚಲಿದೆ. ಕೇಂದ್ರ ಗೃಹ ಸಚಿವಾಲಯವು ನವೆಂಬರ್ ೧೫ ರಂದು ಸಂಸ್ಥೆಯ ಮೇಲಿನ ನಿಷೇಧವನ್ನು ಐದು ವರ್ಷಗಳವರೆಗೆ ವಿಸ್ತರಿಸಿದ ನಂತರ ಈ ಪ್ರಾಧಿಕರಣವನ್ನು ಸ್ಥಾಪಿಸಲಾಯಿತು. ನವೆಂಬರ್ ೨೦೧೬ ರಲ್ಲಿ ಮೊದಲಬಾರಿ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಕಾಯ್ದೆಯಡಿಯಲ್ಲಿ ನಿಷೇಧ ಹೇರಲಾಗಿತ್ತು.