ಗುಜರಾತಿನಲ್ಲಿ ಉದ್ಯಾನವನದಲ್ಲಿ ಮಹಿಳೆಯರಿಂದ ನಮಾಜ ಪಠಣ !

ಮುಸಲ್ಮಾನ ಪುರುಷರಿಂದ ನೀಡಲಾಯಿತು ಉದ್ಯಾನವನದಲ್ಲಿ ಅಜಾನ್

ಸಾರ್ವಜನಿಕ ಸ್ಥಳಗಳಲ್ಲಿ ಹಿಂದೂಗಳು ಧಾರ್ಮಿಕ ಕೃತಿ ನಡೆಸಿದರೆ, ಪೊಲೀಸರು ಹಿಂದೂಗಳ ಮೇಲೆ ಅನುಮತಿ ಪಡೆಯಲಿಲ್ಲ ಎಂದು ಕ್ರಮ ಕೈಗೊಳ್ಳುತ್ತಾರೆ; ಆದರೆ ಅಲ್ಪಸಂಖ್ಯಾತರು ಹೀಗೆ ಮಾಡಿದರೆ, ಆಗ ಪೋಲೀಸ ಮತ್ತು ಆಡಳಿತವರ್ಗದವರು ಬಾಲ ಮುದುಡಿಕೊಳ್ಳುತ್ತಾರೆ !

ಗುಜರಾತನಲ್ಲಿ ಭಾಜಪದ ಸರಕಾರ ಇರುವಾಗ ಇಂತಹವರ ಮೇಲೆ ಕ್ರಮ ಜರುಗಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ದೇಶದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ರಸ್ತೆ, ಮೈದಾನ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಸಚಿವಾಲಯ ಮುಂತಾದ ಸ್ಥಳಗಳಲ್ಲಿ ಜನರಿಗೆ ಅಡಚಣೆ ಮಾಡಿ ಯಾವುದೇ ಪೂರ್ವಾನುಮತಿ ಪಡೆಯದೆ ನಮಾಜ್ ಪಠಣ ಮಾಡುತ್ತಾರೆ, ಅವರ ಮೇಲೆ ಯಾವುದೇ ಕ್ರಮ ಜರುಗಿಸಲಿಲ್ಲ, ಇದನ್ನು ‘ಜಾತ್ಯತೀತ’ ಭಾರತದಲ್ಲಿ ಹೇಗೆ ನಡೆಯುತ್ತದೆ, ಇದರ ಉತ್ತರ ಜಾತ್ಯತೀತರು ಏಕೆ ನೀಡುವುದಿಲ್ಲ ?

ಭರೂಚ (ಗುಜರಾತ) – ಇಲ್ಲಿ ಒಂದು ಉದ್ಯಾನವನದಲ್ಲಿ ಬುರಖಾ ತೊಟ್ಟಿರುವ ಮುಸಲ್ಮಾನ ಮಹಿಳೆಯರು ನಮಾಜ ಪಠಣ ಮಾಡುತ್ತಿರುವಾಗ, ಹಾಗೂ ಇನ್ನೊಂದು ವಿಡಿಯೋದಲ್ಲಿ ಮುಸಲ್ಮಾನ ಪುರುಷರು ಮಕ್ಕಳ ಜಾರುಬಂಡಿಯ ಮೇಲ್ಭಾಗದಲ್ಲಿ ನಿಂತು ‘ಅಜಾನ್’ (ನಮಾಜ್ ಪಠಣ ಮಾಡಲು ಕರೆಯುವುದು) ನೀಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ‘ಚಿಕ್ಕ ಮಕ್ಕಳು ಅಕ್ಕ-ಪಕ್ಕ ಆಟವಾಡುವಾಗ ಮಹಿಳೆ ಉದ್ಯಾನವನದಲ್ಲಿ ಕೆಳಗೆ ಜಮಖಾನ ಹಾಸಿ ನಮಾಜ್ ಪಠಣ ಮಾಡುತ್ತಿದ್ದಾಳೆ’, ಹೀಗೆ ವಿಡಿಯೋದಲ್ಲಿ ಕಾಣುತ್ತಿದೆ. ಉದ್ಯಾನವನದಲ್ಲಿ ಇನ್ನೂ ಕೆಲವು ಮಹಿಳೆಯರು ವ್ಯಾಯಾಮ ಮಾಡುತ್ತಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಕರ್ಣಾವತಿಯ ವಸ್ತ್ರಪೂರ ಕೆರೆಯ ಉದ್ಯಾನವನದಲ್ಲಿ ಕೆಲವು ಮುಸಲ್ಮಾನ ಮಹಿಳೆಯರು ನಮಾಜ ಪಠಣ ಮಾಡುತ್ತಿರುವಂತೆ ಕಾಣುತ್ತಿದೆ.

ಭರೂಚದ ನಮಾಜ ಪಠಣದ ಬಗ್ಗೆ ಒಬ್ಬ ವ್ಯಕ್ತಿಯು, ಕೆಲವು ವಾರಗಳಿಂದ ಕೆಲವು ಮುಸಲ್ಮಾನ ಮಹಿಳೆಯರು ಇಲ್ಲೇ ನಮಾಜ ಪಠಣ ಮಾಡುತ್ತಿದ್ದಾರೆ. ಮಹಿಳೆಯರು ಇಲ್ಲಿ ಬಂದು ನಮಾಜ ಪಠಣ ಮಾಡುತ್ತಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಂಡರೆ ‘ನಮ್ಮ ಮೇಲೆ ಅನ್ಯಾಯವಾಗುತ್ತಿದೆ’ ಎಂದು ಕೂಗಾಡುತ್ತಾರೆ ಎಂದು ಹೇಳಿದರು.