ಗೋಹತ್ಯೆ ನಿಷೇಧ ಕಾನೂನು ಮತ್ತು ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ !

ಭಾಜಪದ ಸಂಸದ ಕಿರೋಡಿ ಲಾಲ್ ಮೀಣಾ ಇವರ ರಾಜ್ಯಸಭೆಯಲ್ಲಿ ಆಗ್ರಹ

ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸರಕಾರವೇ ಇಲ್ಲಿಯವರೆಗೆ ಗೋಹತ್ಯೆ ನಿಷೇಧ ಕಾನೂನು ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವುದು ಅಗತ್ಯವಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !

ನವ ದೆಹಲಿ : ಗೋಹತ್ಯೆ ತಡೆಗೆ ಕಾನೂನನ್ನು ಜಾರಿಗೊಳಿಸುವುದರ ಜೊತೆಗೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಭಾಜಪ ಸಂಸದ ಕಿರೋಡಿ ಲಾಲ್ ಮೀಣಾ ಇವರು ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ. ಮೀಣಾ ಇವರು, ಸನಾತನ ಧರ್ಮದಲ್ಲಿ ಗೋವನ್ನು ಪೂಜಿಸಲಾಗುತ್ತದೆ. ಗೋವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಮತ್ತು ತಾಯಿಯ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು.