ಮದರ ತೆರೆಸಾರವರು ಸ್ಥಾಪಿಸಿರುವ ‘ಮಿಶನರೀಸ್ ಆಫ್ ಚಾರಿಟಿ ಸಂಸ್ಥೆಯ ವಿರುದ್ಧ ಮತಾಂತರದ ಅಪರಾಧ ದಾಖಲು !

ಬಾಲಸುಧಾರಣಾ ವಸತಿಗೃಹದಲ್ಲಿರುವ ಹೆಣ್ಣುಮಕ್ಕಳ ಮತಾಂತರಕ್ಕೆ ಪ್ರಯತ್ನಿಸಲಾಗುತ್ತಿದೆ ಎಂಬ ಕಳಂಕ!

ಸಂಸ್ಥೆಯಿಂದ ಆರೋಪದ ನಿರಾಕರಣೆ!

ಕ್ರೈಸ್ತ ಮಿಶಿನರಿ ಮತ್ತು ಕ್ರೈಸ್ತ ಸಂಸ್ಥೆಗಳ ಮೇಲೆ ಕಳೆದ ಅನೇಕ ದಶಕಗಳಿಂದ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ ಆದರೆ ಇಲ್ಲಿಯವರೆಗೂ ಈ ವಿಷಯದಲ್ಲಿ ಹಿಂದೂಗಳಿಗೆ ನ್ಯಾಯ ದೊರೆತಿಲ್ಲ. ಮಿಶನರಿಗಳಿಗೆ ಶಿಕ್ಷೆಯೂ ಆಗಿಲ್ಲ. ಗುಜರಾತಿನಲ್ಲಿ ಭಾಜಪ ಸರಕಾರವಿರುವುದರಿಂದ ಇಲ್ಲಿಯ ಹಿಂದೂಗಳಿಗೆ ನ್ಯಾಯ ದೊರಕಬಹುದು ಎಂದು ಹಿಂದೂಗಳ ಅಪೇಕ್ಷೆಯಾಗಿದೆ.

ವಡೋದರಾ(ಗುಜರಾತ) – ಮದರ ತೆರೆಸಾ ಇವರು ಸ್ಥಾಪಿಸಿರುವ ‘ಮಿಶನರೀಸ್ ಆಫ್ ಚಾರಿಟಿ ಈ ಕ್ರೈಸ್ತ ಸಂಸ್ಥೆಯ ವಿರುದ್ಧ ಮತಾಂತರದ ಆರೋಪ ಹೊರಿಸಿ ಅಪರಾಧವನ್ನು ದಾಖಲಿಸಲಾಗಿದೆ. ಈ ಸಂಸ್ಥೆ ನಡೆಸುತ್ತಿರುವ ಬಾಲಸುಧಾರಣಾ ಗೃಹದ ಹೆಣ್ಣುಮಕ್ಕಳನ್ನು ಕ್ರೈಸ್ತ ಪಂಥಕ್ಕೆ ಮತಾಂತರಿಸುವ ಪ್ರಯತ್ನಗಳು ನಡೆಯುತ್ತಿದೆಯೆಂದು ದೂರಿನಲ್ಲಿ ಹೇಳಲಾಗಿದೆ. ಆದರೆ ಸಂಸ್ಥೆಯು ಈ ಆರೋಪವನ್ನು ನಿರಾಕರಿಸಿದೆ. ಜಿಲ್ಲೆಯ ಸಾಮಾಜಿಕ ಸುರಕ್ಷಾ ಅಧಿಕಾರಿ ಮಯಂಕ ತ್ರಿವೇದಿಯವರ ಆರೋಪದ ಮೇರೆಗೆ ಮಕರಪುರಾ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

೧. ಮಯಂಕ ತ್ರಿವೇದಿಯವರು ಮಕರಪುರಾ ಪ್ರದೇಶದ ‘ಮಿಶನರೀಸ ಆಫ್ ಚಾರಿಟಿ ನಡೆಸುತ್ತಿರುವ ಬಾಲ ಸುಧಾರಣಾ ಗೃಹಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ತ್ರಿವೇದಿಯವರು ಹೇಳಿದರು, ಈ ಭೇಟಿಯಲ್ಲಿ ನನಗೆ ಬಾಲ ಸುಧಾರಣಾ ಗೃಹದಲ್ಲಿ ಕಂಡು ಬಂದಿರುವುದೇನೆಂದರೆ, ಅಲ್ಲಿಯ ಹೆಣ್ಣು ಮಕ್ಕಳನ್ನು ಕ್ರೈಸ್ತ ಪಂಥದೆಡೆಗೆ ಒಯ್ಯುವ ಉದ್ದೇಶದಿಂದ ಕ್ರೈಸ್ತ ಧಾರ್ಮಿಕ ಗ್ರಂಥಗಳನ್ನು ಓದುವ ಮತ್ತು ಕ್ರೈಸ್ತ ಪ್ರಾರ್ಥನೆಗಳಲ್ಲಿ ಭಾಗವಹಿಸಲು ಒತ್ತಡ ಹೇರಲಾಗುತ್ತಿತ್ತು. ಈ ಸಂಸ್ಥೆ ೧೦ ಫೆಬ್ರುವರಿ ೨೦೨೧ ರಿಂದ ೧ ಡಿಸೆಂಬರ ೨೦೨೧ ರ ಕಾಲಾವಧಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಲು ಉದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಿದೆ. ಹೆಣ್ಣುಮಕ್ಕಳಿಗೆ ಅವರ ಕುತ್ತಿಗೆಯಲ್ಲಿ ‘ಕ್ರಾಸ್ ಹಾಕಿಸಿ ಕ್ರೈಸ್ತ ಪಂಥವನ್ನು ಸ್ವೀಕರಿಸಲು ಪ್ರವೃತ್ತಗೊಳಿಸಲಾಗುತ್ತಿದೆ. ಹೆಣ್ಣುಮಕ್ಕಳು ಉಪಯೋಗಿಸುತ್ತಿದ್ದ ಮೇಜಿನ ಮೇಲೆ ಬಾಯಬಲ್ ಇಟ್ಟು ಅವರನ್ನು ಬಾಯಬಲ್ ಓದುವಂತೆ ಒತ್ತಾಯಿಸುವ ಪ್ರಯತ್ನಗಳಾಗುತ್ತಿವೆ.

೨. ‘ಮಿಶನರೀಸ್ ಆಫ್ ಚಾರಿಟಿಯ ವಕ್ತಾರರು ಮಾತನಾಡುತ್ತಾ, ನಾವು ಯಾವುದೇ ಧಾರ್ಮಿಕ ಪರಿವರ್ತನೆಯ ಕಾರ್ಯದಲ್ಲಿ ಭಾಗವಹಿಸಿಲ್ಲ. ನಮ್ಮ ಬಾಲ ಸುಧಾರಣಾ ಗೃಹದಲ್ಲಿ ೨೪ ಹೆಣ್ಣುಮಕ್ಕಳಿದ್ದಾರೆ. ಈ ಹೆಣ್ಣುಮಕ್ಕಳು ನಮ್ಮೊಂದಿಗೆ ವಾಸಿಸುತ್ತಾರೆ ಮತ್ತು ಅವರು ಅಧ್ಯಯನ ಮಾಡುತ್ತಿದ್ದಾರೆ. ನಾವು ಯಾರನ್ನೂ ಮತಾಂತರ ಮಾಡಿಲ್ಲ ಅಥವಾ ಯಾರನ್ನೂ ಕ್ರೈಸ್ತ ಪಂಥದಲ್ಲಿ ವಿವಾಹವಾಗುವಂತೆ ಒತ್ತಾಯಿಸಿಲ್ಲ, ಎಂದು ಹೇಳಿದ್ದಾರೆ.