ದೆಹಲಿಯ ‘ಅಕ್ಬರ್ ರಸ್ತೆ’ಗೆ ಜನರಲ್ ಬಿಪಿನ್ ರಾವತ್ ಇವರ ಹೆಸರು ಇಡಿ ! – ಭಾಜಪದಿಂದ ದೆಹಲಿ ಪುರಸಭೆಯಲ್ಲಿ ಆಗ್ರಹ

ಅಕ್ಬರ್ ದಾಳಿಕೋರನಾಗಿದ್ದಾಗ, ಇಲ್ಲಿಯವರೆಗೆ ಅವನ ಹೆಸರು ರಸ್ತೆಗೆ ಇರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !

ಹೆಸರು ಬದಲಾವಣೆಗೆ ಈ ರೀತಿಯ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ನಗರಸಭೆಗೆ ತಿಳಿಯುವುದಿಲ್ಲವೇ ?

ನವ ದೆಹಲಿ : ಇಲ್ಲಿಯ ‘ಅಕ್ಬರ್ ರಸ್ತೆ’ಗೆ ದಿವಂಗತ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ – ಮೂರು ಸೇನೆಗಳ ಮುಖ್ಯಸ್ಥ) ಜನರಲ್ ಬಿಪಿನ್ ರಾವತ್ ಇವರ ಹೆಸರನ್ನು ಇಡುವಂತೆ ಒತ್ತಾಯಿಸಿ ದೆಹಲಿಯ ಭಾಜಪದಿಂದ ನವ ದೆಹಲಿ ಪುರಸಭೆಗೆ ಪತ್ರ ಬರೆದಿದೆ. ‘ಅಕ್ಬರ್ ನಮ್ಮ ಮೇಲೆ ದಾಳಿ ಮಾಡಿದ ರಾಜನಾಗಿದ್ದ. ಆತನ ಬದಲು ಜನರಲ್ ರಾವತ್ ಇವರ ಹೆಸರಿಡುವುದು ಸೂಕ್ತವಾಗಿದೆ’, ಎಂದು ಪತ್ರದಲ್ಲಿ ತಿಳಿಸಿದ್ದಾರೆ.

೧. ನವ ದೆಹಲಿ ಪುರಸಭೆಯ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಇವರು, ‘ಈ ಬೇಡಿಕೆಗೆ ನಮ್ಮ ಬೆಂಬಲವಿದೆ; ಆದರೆ, ಈ ನಿರ್ಧಾರವು ಸಂಪೂರ್ಣವಾಗಿ ನವದೆಹಲಿ ಪುರಸಭೆಗೆ ಬಿಟ್ಟದ್ದು. ಪುರಸಭೆಯು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ವಿಚಾರ ಮಾಡುತ್ತದೆ ಎಂದು ಹೇಳಿದರು.

೨. ಈ ರಸ್ತೆಗೆ ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಹಿಂದೆಯೇ ಇತ್ತು. ಕೇಂದ್ರ ಸಚಿವ ವಿ.ಕೆ. ಸಿಂಗ್ ಇವರು ‘ಅಕ್ಬರ್ ರಸ್ತೆ’ಯ ಹೆಸರನ್ನು ‘ಮಹಾರಾಣಾ ಪ್ರತಾಪ್ ರಸ್ತೆ’ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದ್ದರು. ಈ ಹಿಂದೆ ಈ ರಸ್ತೆಯ ಹೆಸರಿನ ಫಲಕವನ್ನು ಹಾಳು ಮಾಡಿ ಅಲ್ಲಿ ‘ಸಾಮ್ರಾಟ್ ಹೇಮು ವಿಕ್ರಮಾದಿತ್ಯ ಮಾರ್ಗ’ ಎಂಬ ಫಲಕವೂ ಹಾಕಲಾಗಿತ್ತು. ಇದರ ಹೊಣೆಯನ್ನು ಹಿಂದೂ ಸೇನೆ ಹೊತ್ತುಕೊಂಡಿತ್ತು.