ಇಂದು ಚಿತ್ರಕೂಟ (ಉತ್ತರಪ್ರದೇಶ)ದಲ್ಲಿ ‘ಹಿಂದೂ ಏಕತಾ ಮಹಾಕುಂಭ’ದ ಆಯೋಜನೆ

ಚಿತ್ರಕೂಟ (ಉತ್ತರಪ್ರದೇಶ) – ಇಂದು ಡಿಸೆಂಬರ ೧೫ ರಂದು ‘ಹಿಂದೂ ಏಕತಾ ಮಹಾಕುಂಭ’ದ ಆಯೋಜನೆ ಮಾಡಲಾಗಿದೆ. ಇದರಲ್ಲಿ ೫ ಲಕ್ಷ ಭಕ್ತರು ಸಹಭಾಗಿಯಾಗುವ ಸಾಧ್ಯತೆಯಿದೆ. ಇದರಲ್ಲಿ ಯೋಗ ಋಷಿ ರಾಮದೇವ ಬಾಬಾ, ಶ್ರೀ ಶ್ರೀ ರವಿಶಂಕರ,, ರಾಮಾನುಜಾಚಾರ್ಯ ಚಿನ್ನಾ ಜೀಯರ ಸ್ವಾಮಿ, ಪೇಜಾವರ ಮಠದ ಪ್ರಮುಖ ಶ್ರೀ ವಿಶ್ವಪ್ರಸನ್ನ ತೀರ್ಥ, ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಸರಸಂಘಚಾಲಕ ಡಾ. ಮೋಹನ ಭಾಗವತ ಉಪಸ್ಥಿತರಿರುವರು, ಎಂದು ಆಯೋಜಕರಾದ ತುಳಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಇವರು ಹೇಳಿದರು. ೨೦ ಎಕರೆ ಭೂಮಿಯಲ್ಲಿ ಈ ಮಹಾಕುಂಭದ ಆಯೋಜನೆ ಮಾಡಲಾಗಿದೆ. ಈ ಮಹಾಕುಂಭದ ಮೂಲಕ ಹಿಂದೂ ಧರ್ಮದ ಎಲ್ಲಾ ಧರ್ಮಗುರು ಮತ್ತು ಪಂಥದವರನ್ನು ಸಂಘಟಿತ ಮಾಡಲಾಗುವುದು. ಜಗದ್ಗುರು ರಾಮಭದ್ರಾಚಾರ್ಯರು ಮಾತನಾಡಿ, ಈ ಸಂಪೂರ್ಣ ಕಾರ್ಯಕ್ರಮದಲ್ಲಿ ಕೊರೋನಾ ಸಂಬಂಧಪಟ್ಟ ನಿಯಮಗಳ ಪೂರ್ಣರೂಪದಲ್ಲಿ ಪಾಲನೆ ಮಾಡಲಾಗುವುದು ಎಂದು ಹೇಳಿದರು.