ಪಂಜಾಬನಲ್ಲಿ ರಾ.ಸ್ವ.ಸಂಘದ ಶಾಖೆ ಮತ್ತು ಹಿಂದೂ ನಾಯಕರ ಮೇಲೆ ಭಯೋತ್ಪಾದಕ ದಾಳಿಯಾಗುವ ಸಾಧ್ಯತೆ ! – ಗುಪ್ತಚರ ಇಲಾಖೆಯಿಂದ ಮಾಹಿತಿ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಇದು ಪಂಜಾಬ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಮತ್ತು ಹಿಂದೂ ನಾಯಕರ ಮೇಲೆ ಜಿಹಾದಿ ಭಯೋತ್ಪಾದಕ ದಾಳಿ ನಡೆಸುವ ಪಿತೂರಿ ನಡೆಸುತ್ತಿದೆ, ಎಂದು ಗುಪ್ತಚರ ಇಲಾಖೆಯು ಪಂಜಾಬ ಸರಕಾರಕ್ಕೆ ಮಾಹಿತಿ ನೀಡಿದೆ.

ದೈನಿಕ ‘ಲೋಕಮತ ಟೈಮ್ಸ್’ನಿಂದ ಶ್ರೀಕೃಷ್ಣ ಮತ್ತು ಅರ್ಜುನ ಇವರ ವಿಡಂಬನೆ !

ಆಂಗ್ಲ ದೈನಿಕ ‘ಲೋಕಮತ ಟೈಮ್ಸ್’ ಸಂಭಾಜಿನಗರ ಆವೃತ್ತಿಯಲ್ಲಿ ‘ತೆರಿಗೆ ನೀತಿ’ ಈ ವಾರದ ಅಂಕಣದಲ್ಲಿ ತೆರಿಗೆ ಕುರಿತು ಮಾಹಿತಿ ನೀಡಲಾಗುತ್ತದೆ. ಅದರಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡುವಾಗ ಶ್ರೀಕೃಷ್ಣ ಮತ್ತು ಅರ್ಜುನ ಮುಂತಾದ ಹೆಸರುಗಳನ್ನು ಬಳಸಿ ಹಿಂದೂ ದೇವತೆಗಳ ವಿಡಂಬನೆ ಮಾಡಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಕನ್ಯೆಯ ತೀವ್ರ ವಿರೋಧದ ನಂತರ ‘ಝೀ ನ್ಯೂಸ್’ ನ ರಾಷ್ಟ್ರೀಯ ಸಂಪಾದಕ ಸುಧೀರ್ ಚೌಧರಿ ಅವರನ್ನು ಕಾರ್ಯಕ್ರಮದಿಂದ ಕೈಬಿಡಲಾಯಿತು !

ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಕನ್ಯೆ ಹೆಂಡ ಬಿಂತ ಎ ಫೈಸಲ್ ಅಲ್ ಕಾಸಿಮ್ ಇವರು ವಿರೋಧ ವ್ಯಕ್ತಪಡಿಸಿದ ನಂತರ ‘ಝೀ ನ್ಯೂಸ್’ನ ಸಂಪಾದಕ ಶ್ರೀ. ಸುಧೀರ ಚೌಧರಿ ಇವರ ಹೆಸರನ್ನು ‘ಅಬು ಧಾಬಿ ಚಾರ್ಟರ್ಡ್ ಅಕೌಂಟೆಂಟ್ಸ್’ ಕಾರ್ಯಕ್ರಮದಲ್ಲಿ ವಕ್ತಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಮುಂಬಯಿ ಮೇಲಿನ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅಂದಿನ ಕಾಂಗ್ರೆಸ್ ಸರಕಾರದ ದೌರ್ಬಲ್ಯವಾಗಿತ್ತು !

೨೬ ನವೆಂಬರ್ ೨೦೦೮ ರಂದು ಮುಂಬಯಿ ಮೇಲಿನ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಅದು ನೇರ ಕ್ರಮ ಕೈಗೊಳ್ಳುವ ಸಮಯವಾಗಿತ್ತು.

ವಿಮಾ ಹಗರಣದ ಪ್ರಕರಣದಲ್ಲಿ ಉತ್ತರಪ್ರದೇಶದ ೨೮ ನ್ಯಾಯವಾದಿಗಳು ಅಮಾನತು

ನಕಲಿ ವಾಹನ ವಿಮೆ ದಾವೆಯನ್ನು ಸಲ್ಲಿಸಿದ ಪ್ರಕರಣದಲ್ಲಿ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ವು ಉತ್ತರಪ್ರದೇಶದ ೨೮ ನ್ಯಾಯವಾದಿಗಳನ್ನು ಅಮಾನತುಗೊಳಿಸಿದೆ. ಈ ಹಗರಣ ಬೆಳಕಿಗೆ ಬಂದ ನಂತರ ಅಲಾಹಾಬಾದ ಉಚ್ಚ ನ್ಯಾಯಾಲಯವು ವಿಶೇಷ ತನಿಖಾ ದಳಕ್ಕೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು.

ಚೀನಾಗೆ ದಕ್ಷಿಣಪೂರ್ವ ಏಷ್ಯಾ ಮೇಲೆ ಪ್ರಾಬಲ್ಯ ಬೇಡ ! (ವಂತೆ) – ಚೀನಾದ ರಾಷ್ಟ್ರಪತಿ ಶಿ ಜಿನ್‌ಪಿಂಗ

ದಕ್ಷಿಣಪೂರ್ವ ಏಷ್ಯಾ ಮೇಲೆ ಚೀನಾ ಪ್ರಾಬಲ್ಯವನ್ನು ಪಡೆಯುವುದಿಲ್ಲ ಹಾಗೂ ಚಿಕ್ಕ ನೆರೆಯ ದೇಶಗಳ ಮೇಲೆಯೂ ಪ್ರಾಬಲ್ಯ ಪಡೆಯುವುದಿಲ್ಲ,’ ಎಂದು ಚೀನಾದ ಅಧ್ಯಕ್ಷ ಶಿ ಜಿನಪಿಂಗ್ ಇವರು ಹೇಳಿದ್ದಾರೆ.

ಯುವಕರನ್ನು ಆತ್ಮಾಹುತಿ ಉಗ್ರರನ್ನಾಗಿಸಲು ಇಸ್ಲಾಮಿಕ್ ಸ್ಟೇಟ್ಸ್‌ನಿಂದ ‘ಟಿಕ್ ಟಾಕ್’ ಬಳಕೆ

ಕ್ರಿಸ್‌ಮಸ್ ಸಮಯದಲ್ಲಿ ಪಾಶ್ಚಾತ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಇಸ್ಲಾಮಿಕ್ ಸ್ಟೇಟ್ ತನ್ನ ಸಂಘಟನೆಯಲ್ಲಿ ಆತ್ಮಾಹುತಿ ಮುಸಲ್ಮಾನ ಯುವಕರನ್ನು ಭರ್ತಿ ಮಾಡಲು ‘ಟಿಕ್ ಟಾಕ್’ ಈ ‘ಆಪ್’ಅನ್ನು ಬಳಸಲು ಆರಂಭಿಸಿದೆ.

ಭಾರತೀಯ ರೈಲ್ವೆಯಿಂದ ’ರಾಮಾಯಣ ಎಕ್ಸಪ್ರೆಸ್’ನಲ್ಲಿ ವೇಟರ್.ನ ಸಮವಸ್ತ್ರದಲ್ಲಿ ಬದಲಾವಣೆ

ಭಾರತೀಯ ರೈಲ್ವೆಯು ‘ರಾಮಾಯಣ ಎಕ್ಸ್.ಪ್ರೆಸ್’ ರೈಲಿನಲ್ಲಿ ವೇಟರ್‌ಗಳನ್ನು ಸಾಧುಗಳಂತಹ ಸಮವಸ್ತ್ರವನ್ನು ಧರಿಸಲು ನೀಡಿತ್ತು. ಇದನ್ನು ಸಂತ ಸಮಾಜ, ಹಿಂದುತ್ವನಿಷ್ಠ ಮತ್ತು ಧರ್ಮಾಭಿಮಾನಿ ಹಿಂದೂಗಳು ಪ್ರಖರವಾಗಿ ವಿರೋಧಿಸಿದ ನಂತರ ಕೊನೆಗೆ ರೈಲ್ವೆಯು ಈ ಸಮವಸ್ತ್ರವನ್ನು ಬದಲಾಯಿಸಿದೆ.

ಮುಖ್ಯ ಅರ್ಚಕರು ‘ಹಲಾಲ್’ ಬೆಲ್ಲದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಬೇಕು ! – ಕೇರಳ ಉಚ್ಚ ನ್ಯಾಯಾಲಯದ ಆದೇಶ

ಶಬರಿಮಲೈ ದೇವಸ್ಥಾನದ ‘ಅರಾವಣಾ’ ಮತ್ತು ‘ಅಪ್ಪಪಂ’ ನೈವೇದ್ಯಗಳನ್ನು ತಯಾರಿಸಲು ‘ಹಲಾಲ್’ ಬೆಲ್ಲವನ್ನು ಬಳಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ದೇವಸ್ಥಾನದ ಪ್ರಧಾನ ಅರ್ಚಕರಿಗೆ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಆದೇಶಿಸಿದೆ.

ಭಾರತೀಯ ಕ್ರಿಕೆಟ್ ಆಟಗಾರರಿಗೆ ಹಲಾಲ್ ಮಾಂಸ ನೀಡುವ ನಿರ್ಧಾರಕ್ಕೆ ಟ್ವಿಟರ್ ಮೂಲಕ ಧರ್ಮಪ್ರೇಮಿಗಳಿಂದ ವಿರೋಧ

ಭಾರತ ಮತ್ತು ನ್ಯೂಜಿಲ್ಯಾಂಡ್ ಈ ದೇಶದ ಕ್ರಿಕೆಟ್ ತಂಡದಲ್ಲಿ ಸರಣಿ ಪಂದ್ಯದ ಆಯೋಜನೆ ಮಾಡಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಕಾಲಾವಧಿಯಲ್ಲಿ ಭಾರತೀಯ ಆಟಗಾರರಿಗೆ ಆಹಾರದ ಬಗ್ಗೆ ಪಟ್ಟಿ ತಯಾರಿಸಿದೆ. ಅದರಲ್ಲಿ ಗೋಮಾಂಸ ಮತ್ತು ಹಂದಿಯ ಮಾಂಸ ಕೈಬಿಡಲಾಗಿದೆ, ಆದರೆ ಬೇರೆ ಯಾವುದೇ ಮಾಂಸವು ‘ಹಲಾಲ್’ ಮಾಂಸ ಇರಲಿದೆ, ಎಂದಿದೆ.