ತೆರಿಗೆಯ ಬಗ್ಗೆ ಮಾಹಿತಿಯನ್ನು ಸ್ಪಷ್ಟಪಡಿಸಲು ಶ್ರೀಕೃಷ್ಣ ಮತ್ತು ಅರ್ಜುನ ಇಂತಹ ಹೆಸರುಗಳ ಉಪಯೋಗ !
ಹಿಂದೂಗಳೇ, ಇಂತಹ ಲೇಖನಗಳನ್ನು ಓದಿ ಬದಿಗಿಡಬೇಡಿ, ಹಿಂದೂ ದೇವತೆಗಳ ಅವಮಾನ ಮಾಡುವ ದೈನಿಕ ‘ಲೋಕಮತ್ ಟೈಮ್ಸ್’ ಅನ್ನು ಕಾನೂನು ಮಾರ್ಗವಾಗಿ ವಿರೋಧಿಸಿ !
ಸಂಭಾಜಿನಗರ – ಆಂಗ್ಲ ದೈನಿಕ ‘ಲೋಕಮತ ಟೈಮ್ಸ್’ ಸಂಭಾಜಿನಗರ ಆವೃತ್ತಿಯಲ್ಲಿ ‘ತೆರಿಗೆ ನೀತಿ’ ಈ ವಾರದ ಅಂಕಣದಲ್ಲಿ ತೆರಿಗೆ ಕುರಿತು ಮಾಹಿತಿ ನೀಡಲಾಗುತ್ತದೆ. ಅದರಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡುವಾಗ ಶ್ರೀಕೃಷ್ಣ ಮತ್ತು ಅರ್ಜುನ ಮುಂತಾದ ಹೆಸರುಗಳನ್ನು ಬಳಸಿ ಹಿಂದೂ ದೇವತೆಗಳ ವಿಡಂಬನೆ ಮಾಡಲಾಗಿದೆ. ಸಂಬಂಧಿತ ಲೇಖನವನ್ನು ನವೆಂಬರ್ ೨೨ ರಂದು ಪುಟ ೭ ರಲ್ಲಿ ಪ್ರಕಟಿಸಲಾಗಿದೆ. (ಪ್ರತಿ ಬಾರಿ ಹಿಂದೂ ದೇವತೆಗಳ ಹೆಸರನ್ನು ಏಕೆ ಬಳಸಲಾಗುತ್ತದೆ ? ಇದರ ಬಗ್ಗೆ ಹಿಂದೂಗಳು ಅಂತರ್ಮುಖವಾಗಿ ವಿಚಾರ ಮಾಡಬೇಕು ! – ಸಂಪಾದಕರು)
ಶ್ರೀಕೃಷ್ಣ ಮತ್ತು ಅರ್ಜುನ ಇವರ ಸಂಭಾಷಣೆ !
ಅರ್ಜುನ : ಕೃಷ್ಣ, ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕಾಯ್ದೆಯಡಿ, ಕೇಂದ್ರ ಸರಕಾರದ ವತಿಯಿಂದ ಕೊರೊನಾ ಪ್ರಕೋಪದಿಂದ ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಯಾವ ರಿಯಾಯಿತಿಗಳನ್ನು ನೀಡಿದೆ ?
ಶ್ರೀಕೃಷ್ಣ : ಅರ್ಜುನ, ಜಿಎಸ್‌ಟಿ ಅಡಿಯಲ್ಲಿ, ಕೇಂದ್ರ ಸರಕಾರವು ಮೇ ೧ ರ ಕೇಂದ್ರ ತೆರಿಗೆ ಅಧಿಸೂಚನೆಯ ಮೂಲಕ ವಿವಿಧ ಅನುಸರಣೆಯ ದಿನಾಂಕವನ್ನು ವಿಸ್ತರಿಸಿದೆ.
ಈ ಸಂಭಾಷಣೆಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಇವರನ್ನು ಏಕವಚನದಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ‘ತೆರಿಗೆ ನೀತಿ – ಗಣಪತಿಯ ಜಯಜಯಕಾರ; ಜಿಎಸ್‌ಟಿಯ ಹಾಹಾಕಾರ !’, ‘ತೆರಿಗೆ ನೀತಿ – ವಿಘ್ನಹರ್ತ, ಜಿಎಸ್‌ಟಿಯ ರಿಟರ್ನ್‌ನ ವಿಘ್ನ ನಿವಾರಿಸಿ’ ಎಂಬಂತಹ ಸ್ವರೂಪದ ಲೇಖನಗಳಲ್ಲಿ ಶ್ರೀ ಗಣೇಶನ ವಿಡಂಬನೆ ಮಾಡಲಾಗಿತ್ತು.
ಈ ಮೇಲಿನ ವಾರ್ತೆಯನ್ನು ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ಧಕ್ಕೆ ತರುವುದಾಗಿರದೆ, ಮಾಹಿತಿಗಾಗಿ ಪ್ರಕಟಿಸಲಾಗಿದೆ – ಸಂಪಾದಕರು |