ಯುವಕರನ್ನು ಆತ್ಮಾಹುತಿ ಉಗ್ರರನ್ನಾಗಿಸಲು ಇಸ್ಲಾಮಿಕ್ ಸ್ಟೇಟ್ಸ್‌ನಿಂದ ‘ಟಿಕ್ ಟಾಕ್’ ಬಳಕೆ

‘ಟಿಕ್ ಟಾಕ್’ ಇದು ಚೀನಾದ ‘ಆಪ್’ ಆಗಿರುವುದರಿಂದ ಚೀನಾ ಅದನ್ನು ನಿಷೇಧಿಸುವುದಿಲ್ಲ; ಏಕೆಂದರೆ ಇಸ್ಲಾಮಿಕ್ ಸ್ಟೇಟ್‌ನ ಪ್ರಭಾವ ಚೀನಾದಲ್ಲಿ ಇಲ್ಲ, ಬದಲಾಗಿ ಚೀನಾದ ಶತ್ರು ದೇಶಗಳಲ್ಲಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವ ದೆಹಲಿ – ಕ್ರಿಸ್‌ಮಸ್ ಸಮಯದಲ್ಲಿ ಪಾಶ್ಚಾತ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಇಸ್ಲಾಮಿಕ್ ಸ್ಟೇಟ್ ತನ್ನ ಸಂಘಟನೆಯಲ್ಲಿ ಆತ್ಮಾಹುತಿ ಮುಸಲ್ಮಾನ ಯುವಕರನ್ನು ಭರ್ತಿ ಮಾಡಲು ‘ಟಿಕ್ ಟಾಕ್’ ಈ ‘ಆಪ್’ಅನ್ನು ಬಳಸಲು ಆರಂಭಿಸಿದೆ. ಇದರಲ್ಲಿ ಸಣ್ಣ ವಿಡಿಯೋ ಪ್ರಸಾರ ಮಾಡಿ ಆ ಮೂಲಕ ಕರೆ ನೀಡಲಾಗುತ್ತಿದೆ. ಇದಕ್ಕಾಗಿ ಇಸ್ಲಾಮಿಕ್ ಸ್ಟೇಟ್.ನ ‘ಟಿಕ್ ಟಾಕ್’ನಲ್ಲಿ ಅನೇಕ ಖಾತೆಗಳನ್ನು ತೆರೆದಿದ್ದಾರೆ.

೧. ಒಂದು ದಿನಪತ್ರಿಕೆಯಲ್ಲಿನ ವಾರ್ತೆಯ ಪ್ರಕಾರ ಈ ವೀಡಿಯೋಗಳ ಪೈಕಿ ಒಂದು ವಿಡಿಯೋದಲ್ಲಿ, “ಕ್ರಿಸ್‌ಮಸ್ ಆಚರಣೆ ಮಾಡುವವರು ಅಲ್ಲಾನ ಮೇಲೆ ವಿಶ್ವಾಸವಿಡುವುದಿಲ್ಲ ಮತ್ತು ಅವರು ಇಸ್ಲಾಮಿನ ಅಪಹಾಸ್ಯ ಮಾಡುತ್ತಾರೆ. ಹೇ ಅಲ್ಲಾನ ಸೈನಿಕರೇ, ಈ ಧರ್ಮದ್ವೇಷಿ ಜನರ ರಕ್ತವನ್ನು ಚೆಲ್ಲಲು ತಮ್ಮನ್ನು ಸಿದ್ಧಪಡಿಸಿಕೊಳ್ಳಿರಿ.”

೨. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳ ಒಂದು ಖಾತೆಯಲ್ಲಿ ಪ್ರಸಾರ ಮಾಡಲಾಗಿತ್ತು, ಅದನ್ನು ಇಸ್ಲಾಮಿಕ್ ಸ್ಟೇಟ್.ನ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಈ ಖಾತೆ ಕಳೆದ ೧೮ ತಿಂಗಳಿಂದ ಸಕ್ರಿಯವಾಗಿದ್ದು ಅನೇಕರು ಅದನ್ನು ಸಾವಿರಾರು ಸಲ ನೋಡಿದ್ದಾರೆ.