ಪಂಜಾಬನಲ್ಲಿ ರಾ.ಸ್ವ.ಸಂಘದ ಶಾಖೆ ಮತ್ತು ಹಿಂದೂ ನಾಯಕರ ಮೇಲೆ ಭಯೋತ್ಪಾದಕ ದಾಳಿಯಾಗುವ ಸಾಧ್ಯತೆ ! – ಗುಪ್ತಚರ ಇಲಾಖೆಯಿಂದ ಮಾಹಿತಿ

ಜಿಹಾದಿ ಭಯೋತ್ಪಾದಕರು ಹಿಂದೂ ಸಂಘಟನೆ ಮತ್ತು ಅವರ ನಾಯಕರನ್ನು ಗುರಿ ಪಡಿಸುತ್ತಾರೆ, ಆದರೂ ಸಹ ಜಾತ್ಯಾತೀತರೂ ಮತ್ತು ಪ್ರಗತಿ(ಅಧೋಗತಿ)ಪರರು ‘ಭಯೋತ್ಪಾದಕರಿಗೆ ಧರ್ಮ ಇರುವದಿಲ್ಲ’ ಎನ್ನುತ್ತಾರೆ !

ಜಾಲಂಧರ (ಪಂಜಾಬ) – ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಇದು ಪಂಜಾಬ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಮತ್ತು ಹಿಂದೂ ನಾಯಕರ ಮೇಲೆ ಜಿಹಾದಿ ಭಯೋತ್ಪಾದಕ ದಾಳಿ ನಡೆಸುವ ಪಿತೂರಿ ನಡೆಸುತ್ತಿದೆ, ಎಂದು ಗುಪ್ತಚರ ಇಲಾಖೆಯು ಪಂಜಾಬ ಸರಕಾರಕ್ಕೆ ಮಾಹಿತಿ ನೀಡಿದೆ. ಇದರ ನಂತರ ರಾಜ್ಯದಲ್ಲಿ ಜಾಗರೂಕತೆಯ ಎಚ್ಚರಿಕೆ ನೀಡಲಾಗಿದೆ. ಉಪಮುಖ್ಯಮಂತ್ರಿ ಸುಖಜಿಂದರ ಸಿಂಹ ರಂಧವಾ ಇವರು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಗಸ್ತು ಹೆಚ್ಚಿಸಲು ಆದೇಶ ನೀಡಿದ್ದಾರೆ. ಹೆಚ್ಚುಕಡಿಮೆ ಮೂರನೇ ಒಂದು ಭಾಗದಷ್ಟು ಅಧಿಕಾರಿಗಳು ರಾತ್ರಿಯ ಸಮಯದಲ್ಲಿ ಗಸ್ತು ಮಾಡುವಂತೆ ಆದೇಶ ನೀಡಿದ್ದಾರೆ.

ನವೆಂಬರ ೨೧ ರಂದು ರಾತ್ರಿ ರಾಜ್ಯದಲ್ಲಿ ಪಠಾನಕೋಟ ಇಲ್ಲಿಯ ಸೈನ್ಯ ನೆಲೆಯ ಪ್ರವೇಶದ್ವಾರ ಹತ್ತಿರ ಉಗ್ರರು ಗ್ರೆನೆಡ್ ಎಸೆದು ದಾಳಿ ನಡೆಸಿದ್ದರು. ಇದರಲ್ಲಿ ಯಾವುದೇ ಜೀವಹಾನಿ ಆಗಿರಲಿಲ್ಲ. ರಾಜ್ಯದಲ್ಲಿ ಪಾಕಿಸ್ತಾನದ ಹತ್ತಿರದ ಗಡಿಪ್ರದೇಶದಲ್ಲಿ ಆಗಸ್ಟ್ ೧೫ ರಿಂದ ಇಲ್ಲಿಯವರೆಗೆ ೨೫ ಕ್ಕಿಂತಲೂ ಹೆಚ್ಚಿನ ಡ್ರೋನಗಳು ನುಸುಳಿದ್ದವು. ಈ ಮೂಲಕ ಶಸ್ತ್ರಾಸ್ತ್ರ, ಹೆರಾಯಿನ್ ಮತ್ತು ‘ಟಿಫಿನ್ ಬಾಂಬ’ ಕಳುಹಿಸಲಾಗಿತ್ತು. ಈವರೆಗೆ ೧೧ ‘ಟಿಫಿನ್ ಬಾಂಬ’ಗಳನ್ನು ವಶಪಡಿಸಿಕೊಳ್ಳಲಾಗಿದೆ.