ಮುಂಬಯಿ ಮೇಲಿನ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅಂದಿನ ಕಾಂಗ್ರೆಸ್ ಸರಕಾರದ ದೌರ್ಬಲ್ಯವಾಗಿತ್ತು !

ಕಾಂಗ್ರೆಸ್ ನಾಯಕ ಮನೀಶ ತಿವಾರಿ ಇವರ ಪುಸ್ತಕದಿಂದ ಕಾಂಗ್ರೆಸ್‌ಗೆ ಕಪಾಳಮೋಕ್ಷ !

ಇದನ್ನು ಹೇಳಲು ಕಾಂಗ್ರೆಸ್ ನಾಯಕ ಮನೀಶ ತಿವಾರಿಯವರು ಏಕಿಷ್ಟು ವರ್ಷ ಬೇಕಾಯಿತು ? ಅದೇ ಸಮಯದಲ್ಲಿ ಅವರು ಅದನ್ನೇಕೆ ಹೇಳಲಿಲ್ಲ ? ಈಗ ತಮ್ಮ ಪುಸ್ತಕ ಮಾರಾಟವಾಗಬೇಕೆಂದು ಅವರು ಹೇಳುತ್ತಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ !

ನವ ದೆಹಲಿ – ೨೬ ನವೆಂಬರ್ ೨೦೦೮ ರಂದು ಮುಂಬಯಿ ಮೇಲಿನ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಅದು ನೇರ ಕ್ರಮ ಕೈಗೊಳ್ಳುವ ಸಮಯವಾಗಿತ್ತು. ಪಾಕಿಸ್ತಾನದಂತಹ ದೇಶವು ಅಮಾಯಕ ಜನರ ನರಮೇಧ ನಡೆಸುತ್ತದೆ ಮತ್ತು ಅದಕ್ಕೆ ಯಾವುದೇ ಪಶ್ಚಾತ್ತಾಪ ಆಗುವುದಿಲ್ಲ. ಇದಾದ ನಂತರವೂ ನಾವು ಸಂಯಮದಿಂದ ವರ್ತಿಸಿದರೆ ಅದು ದೌರ್ಬಲ್ಯದ ಲಕ್ಷಣವಾಗಿದೆ, ಎಂದು ಕಾಂಗ್ರೆಸ್ ನಾಯಕ ಮನೀಶ ತಿವಾರಿ ಅವರು ತಮ್ಮ ನೂತನ ಪುಸ್ತಕದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಈ ದಾಳಿಯಲ್ಲಿ ೧೬೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ೩೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.