ಚೀನಾಗೆ ದಕ್ಷಿಣಪೂರ್ವ ಏಷ್ಯಾ ಮೇಲೆ ಪ್ರಾಬಲ್ಯ ಬೇಡ ! (ವಂತೆ) – ಚೀನಾದ ರಾಷ್ಟ್ರಪತಿ ಶಿ ಜಿನ್‌ಪಿಂಗ

ಚೀನಾದ ರಾಷ್ಟ್ರಪತಿಯ ಈ ಮಾತನ್ನು ಚಿಕ್ಕ ಮಕ್ಕಳಾದರೂ ನಂಬುವರೇ ?

ಬೀಜಿಂಗ್ (ಚೀನಾ) – ದಕ್ಷಿಣಪೂರ್ವ ಏಷ್ಯಾ ಮೇಲೆ ಚೀನಾ ಪ್ರಾಬಲ್ಯವನ್ನು ಪಡೆಯುವುದಿಲ್ಲ ಹಾಗೂ ಚಿಕ್ಕ ನೆರೆಯ ದೇಶಗಳ ಮೇಲೆಯೂ ಪ್ರಾಬಲ್ಯ ಪಡೆಯುವುದಿಲ್ಲ,’ ಎಂದು ಚೀನಾದ ಅಧ್ಯಕ್ಷ ಶಿ ಜಿನಪಿಂಗ್ ಇವರು ಹೇಳಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಯುತ್ತಿರುವ ಘರ್ಷಣೆಯ ಹಿನ್ನೆಲೆಯಲ್ಲಿ ಅವರು ಸ್ಪಷ್ಟೀಕರಣ ನೀಡಿದ್ದಾರೆ. ‘ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಶಿಯನ್ ನೇಶನ್ಸ್’ನ (‘ಆಸಿಯಾನ್’ನ) ೧೦ ಸದಸ್ಯರ ಸಹಿತ ನಡೆದ ಆನ್‌ಲೈನ್ ಪರಿಷದ್‌ನಲ್ಲಿ ಜಿನ್‌ಪಿಂಗ್ ಮಾತನಾಡುತ್ತಿದ್ದರು. ಚೀನಾದ ಗಡಿ ರಕ್ಷಕರ ನೌಕೆಯು ದಕ್ಷಿಣ ಚೀನಾ ಸಮುದ್ರದ ದಡದಲ್ಲಿ ಸೈನಿಕರಿಗೆ ಪೂರೈಸುವ ಫಿಲಿಪೈನ್ಸ್‌ನ ೨ ನೌಕೆ ತಡೆದಿದ್ದರು ಹಾಗೂ ಈ ನೌಕೆಯ ಮೇಲೆ ತೋಪು ಸಿಡಿಸಿತ್ತು. ಫಿಲಿಪೈನ್ಸ್‌ನ ಅಧ್ಯಕ್ಷ ರಾಡ್ರಿಗೋ ದುತೆರ್ತೆ ಇವರು ಈ ಪರಿಷದ್‌ನಲ್ಲಿ ಈ ಘಟನೆಯ ಉಲ್ಲೇಖಿಸಿದ್ದಾರೆ.

ಜಿನ್‌ಪಿಂಗ್ ತಮ್ಮ ಮಾತನ್ನು ಮುಂದುವರೆಸುತ್ತಾ, ‘ಚೀನಾದ ಅಧಿಕಾರಶಾಹಿ ಮತ್ತು ಅಧಿಕಾರದ ರಾಜಕೀಯವನ್ನು ಬಲವಾಗಿ ವಿರೋಧಿಸುತ್ತದೆ ಹಾಗೂ ನಾವು ನೆರೆಯ ದೇಶದವರ ಜೊತೆಗೆ ಸ್ನೇಹ ಸಂಬಂಧ ಇರಿಸಲು ಬಯಸುತ್ತೇವೆ. ನಾವು ಈ ಪ್ರದೇಶದಲ್ಲಿ ಜಂಟಿಯಾಗಿ ಶಾಶ್ವತವಾಗಿ ಶಾಂತಿಯನ್ನು ಕಾಪಾಡಲು ಬಯಸುತ್ತೇವೆ’ ಎಂದು ಹೇಳಿದರು.