ಭಾರತೀಯ ರೈಲ್ವೆಯಿಂದ ’ರಾಮಾಯಣ ಎಕ್ಸಪ್ರೆಸ್’ನಲ್ಲಿ ವೇಟರ್.ನ ಸಮವಸ್ತ್ರದಲ್ಲಿ ಬದಲಾವಣೆ

ಸಂತ ಸಮಾಜ, ಹಿಂದುತ್ವನಿಷ್ಠ ಮತ್ತು ಧರ್ಮಾಭಿಮಾನಿ ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ !

ನವ ದೆಹಲಿ – ಭಾರತೀಯ ರೈಲ್ವೆಯು ‘ರಾಮಾಯಣ ಎಕ್ಸ್.ಪ್ರೆಸ್’ ರೈಲಿನಲ್ಲಿ ವೇಟರ್‌ಗಳನ್ನು ಸಾಧುಗಳಂತಹ ಸಮವಸ್ತ್ರವನ್ನು ಧರಿಸಲು ನೀಡಿತ್ತು. ಇದನ್ನು ಸಂತ ಸಮಾಜ, ಹಿಂದುತ್ವನಿಷ್ಠ ಮತ್ತು ಧರ್ಮಾಭಿಮಾನಿ ಹಿಂದೂಗಳು ಪ್ರಖರವಾಗಿ ವಿರೋಧಿಸಿದ ನಂತರ ಕೊನೆಗೆ ರೈಲ್ವೆಯು ಈ ಸಮವಸ್ತ್ರವನ್ನು ಬದಲಾಯಿಸಿದೆ. ರೈಲ್ವೆಯು ‘ರಾಮಾಯಣ ಎಕ್ಸ್.ಪ್ರೆಸ್’ನಲ್ಲಿರುವ ಕೆಲಸಗಾರರ ಸಮವಸ್ತ್ರವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಈಗ ಈ ಕೆಲಸಗಾರರು ವ್ಯಾವಹಾರಿಕ ಬಟ್ಟೆಗಳಲ್ಲಿ ಕಂಡು ಬರಲಿದ್ದಾರೆ. ಜನರಿಗೆ ಆದಂತಹ ತೊಂದರೆಗಾಗಿ ನಾವು ಖೇದ ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದೆ.

’ರೈಲ್ವೆಯು ಕೆಲಸಗಾರರ ಸಮವಸ್ತ್ರವನ್ನು ಬದಲಾಯಿಸದಿದ್ದರೆ ಡಿಸೆಂಬರ್ ೧೨ ರಂದು ‘ರಾಮಾಯಣ ಎಕ್ಸ್.ಪ್ರೆಸ್’ ರೈಲನ್ನು ದೆಹಲಿಯಲ್ಲಿ ತಡೆಯಲಾಗುವುದು’ ಎಂದು ಸಂತ ಸಮಾಜವು ಎಚ್ಚರಿಕೆಯನ್ನು ನೀಡಿತ್ತು. ಸನಾತನದ ಖೇಡ (ರತ್ನಾಗಿರಿ) ಅಲ್ಲಿನ ಸಾಧಕರಾದ ಡಾ. ಅಶೋಕ ಶಿಂದೆಯವರೂ ಐ.ಆರ್.ಸಿ.ಟಿ.ಸಿ. ಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪತ್ರಕ್ಕೆ ‘ಸಮವಸ್ತ್ರವನ್ನು ಬದಲಾಯಿಸಲಾಗುವುದು’ ಎಂದು ರೇಲ್ವೆಯ ಓರ್ವ ಹಿರಿಯ ಅಧಿಕಾರಿಯಿಂದ ಉತ್ತರ ನೀಡಲಾಯಿತು.