ಭಾಜಪ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹೋಳಿ, ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡುವೆವು ! – ಭಾಜಪದ ನಾಯಕ ರಾಜನಾಥ ಸಿಂಹ ಇವರಿಂದ ಘೋಷಣೆ

ಭಾಜಪದಿಂದ ಇಂತಹ ಆಮಿಷ ಒಡ್ಡುವುದು ಅಪೇಕ್ಷಿತವಿಲ್ಲ; ಏಕೆಂದರೆ ಚುನಾವಣೆ ವೇಳೆಗೆ ಇಂತಹ ಆಮಿಷ ತೋರಿಸುವುದು ಜನರಿಗೆ ಕೊಡುವ ಲಂಚವೇ ಆಗಿದೆ, ಇದು ಭಾಜಪದ ನಾಯಕರಿಗೆ ತಿಳಿಯುತ್ತದೆಯೇ ? ತದ್ವಿರುದ್ದ, ಪಕ್ಷವು ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನು ಮಾಡುತ್ತದೆ ಎಂಬುದನ್ನು ಜನರಿಗೆ ತಿಳಿಸಿ ಹೇಳಬೇಕು

ಸಹಾರಣಪುರ (ಉತ್ತರಪ್ರದೇಶ ) ಇಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಇವರ ಕಾರ್ಯಾಲಯದಿಂದ ನಕಲಿ ನೋಟು ವಶ

ನಕೂಡ ವಿಧಾನ ಸಭಾ ಚುನಾವಣಾ ಕ್ಷೇತ್ರದ ಪ್ರಚಾರಕ್ಕಾಗಿ ತಯಾರಿಸಲಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಇವರ ಕಾರ್ಯಾಲಯದ ಹತ್ತಿರ ಪೊಲೀಸರು ಋಷಿಪಾಲ ಮತ್ತು ಲಲಿತ ಎಂಬ 2 ಯುವಕರನ್ನು ನಕಲಿ ನೋಟು ಸಹಿತ ಬಂಧಿಸಲಾಗಿದೆ.

ಹಿಜಾಬ್‌ನ ವಿರೋಧದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ತಾಜ್ ಮಹಲ್‌ನಲ್ಲಿ ಹನುಮಾನ ಚಾಲಿಸಾ ಪಠಣೆ !

ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರು ಹಿಜಾಬ್‌ನ ವಿರೋಧದಲ್ಲಿ ಇಲ್ಲಿಯ ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುವ ಪ್ರಯತ್ನ ಮಾಡಿದರು. ಪೊಲೀಸರು ಎಲ್ಲಾ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಹರಿಪರ್ವತ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಅಖಿಲೇಶ್ ಯಾದವ್ ವಿರುದ್ಧ ಚುನಾವಣೆಗೆ ಸ್ಪರ್ದಿಸುತ್ತಿರುವ ಕೇಂದ್ರ ಸಚಿವ ಬಘೇಲ್ ಅವರ ಬೆಂಗಾವಲು ವಾಹನದ ಮೇಲೆ ೧೦೦ ಜನರಿಂದ ದಾಳಿ

ಕರಹಾಲ್ ಚುನಾವಣಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅದ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ಸ್ಪರ್ದಿಸುತ್ತಿರುವ ಭಾಜಪದ ಅಭ್ಯರ್ಥಿ ಮತ್ತು ಕೇಂದ್ರಿಯ ರಾಜ್ಯ ಸಚಿವ ಎಸ್.ಪಿ.ಸಿಂಘ ಬಘೇಲ್ ಅವರ ಬೆಂಗಾವಲು ಪಡೆ ಮೇಲೆ ಫೆಬ್ರುವರಿ ೧೫ ರ ರಾತ್ರಿಯಂದು ದಾಳಿ ನಡೆಸಲಾಯಿತು.

ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕರಿಂದ ದೇವತೆಗಳ ಅಪಮಾನ !

ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕ ಡಾ. ಅಮರೇಶ ಕುಮಾರ ಇವರು ಪ್ರಕಾಶಿಸಿರುವ ದಿನದರ್ಶಿಕೆಯಲ್ಲಿ ಭಗವಾನ ಶ್ರೀರಾಮ ಮತ್ತು ಸೀತಾಮಾತೆ ಇವರ ಚಿತ್ರದ ಮೇಲೆ ತನ್ನ ಹಾಗೂ ತನ್ನ ಪತ್ನಿಯ ಮುಖದ ಚಿತ್ರವನ್ನು ಹಚ್ಚಿದ್ದಾರೆ.

ಮಥುರಾದ ಶ್ರೀ ಬಾಂಕೆ ಬಿಹಾರಿ ಮಂದಿರದಲ್ಲಿನ ಜನಸಂದಣಿಯಿಂದ ಉಸಿರುಗಟ್ಟಿ ವೃದ್ಧ ಭಕ್ತನ ಸಾವು

ಶ್ರೀ ಬಾಂಕೆ ಬಿಹಾರಿ ಮಂದಿರದಲ್ಲಿ ಫೆಬ್ರವರಿ 12 ರಂದು ಏಕಾದಶಿಯ ದಿನ ಲಕ್ಷ್ಮಣ ಎಂಬ 65 ವಯಸ್ಸಿನ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆದರೆ ಮಂದಿರ ವ್ಯವಸ್ಥಾಪನೆಯ ಅವರು ಮಾತ್ರ `ಪ್ರಸ್ತುತ ನಮ್ಮ ಹತ್ತಿರ ಯಾವುದೇ ಭಕ್ತನ ಸಾವಿನ ಮಾಹಿತಿ ಇಲ್ಲ’, ಎಂದು ಹೇಳಿದ್ದಾರೆ.

ಅಯೋಧ್ಯೆಯ ಶ್ರೀರಾಮಮಂದಿರದ ಮಾರ್ಗದಲ್ಲಿರುವ ವೃತ್ತಕ್ಕೆ ಲತಾಮಂಗೇಶ್ಕರ್ ಇವರ ಹೆಸರು ನೀಡುವೆವು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಘೋಷಣೆ

ಲತಾ ಮಂಗೇಶ್ಕರ್ ಇವರು ರಾಮ ಭಕ್ತರಾಗಿದ್ದರು. ಆದ್ದರಿಂದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮಮಂದಿರ ನಿರ್ಮಾಣವಾಗುವಾಗ ಲತಾಜಿಯ ಸ್ಮರಣೆ ಆಗಬೇಕೆಂದು ನಮಗೆ ಅನಿಸುತ್ತದೆ. ಅದಕ್ಕಾಗಿ ಶ್ರೀ ರಾಮ ಮಂದಿರಕ್ಕೆ ಹೋಗುವ ಮುಖ್ಯ ಮಾರ್ಗದಲ್ಲಿರುವ ಒಂದು ವೃತ್ತಕ್ಕೆ ಭಾರತ ರತ್ನ ಲತಾ ಮಂಗೇಶ್ಕರ್ ಇವರ ಹೆಸರು ನೀಡಲಾಗುವುದು. ಇದು ನಮ್ಮ ಸರಕಾರದ ಸಂಕಲ್ಪವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಯ ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದರು.

ಹುಡುಗಿಯರ ಸ್ವಾಭಿಮಾನಕ್ಕೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ ! – ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನುಮ

ಈ ರೀತಿ ಬೆದರಿಕೆ ಹಾಕಿ ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಕೂಡಲೆ ಬಂಧಿಸಿ ಜೈಲಿಗಟ್ಟುವುದು ಅವಶ್ಯಕವಾಗಿದೆ !

‘ಲೇಡಿ ಡಾನ್’ ಹೆಸರಿನ ಟ್ವಿಟರ್ ಖಾತೆಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಭಾಜಪದ ನಾಯಕರನ್ನು ಬಾಂಬ್ ಮೂಲಕ ಹತ್ಯೆ ನಡೆಸುವ ಬೆದರಿಕೆ

‘ಲೇಡಿ ಡಾನ್’ ಹೆಸರಿನ ತೆರೆದಿರುವ ಟ್ರೀಟರ್ ಖಾತೆಯಿಂದ, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹಿತ ಭಾಜಪದ ನಾಯಕರ ಎಲ್ಲಾ ವಾಹನಗಳಲ್ಲಿ ಆರ್.ಡಿ.ಎಕ್ಸ್.ಅನ್ನು ಉಪಯೋಗಿಸಿ ಸ್ಪೋಟಿಸಲಾಗುವುದು.

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದಿಕ ಗಣಿತದ ಒಂದು ವರ್ಷದ ಡಿಪ್ಲೋಮಾ ಪಠ್ಯಕ್ರಮ ಪ್ರಾರಂಭ

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಈಗ ವೈದಿಕ ಗಣಿತದ ಡಿಪ್ಲೋಮಾ ಅಭ್ಯಾಸ ಕ್ರಮಕ್ಕೆ ಪ್ರಾರಂಭ ಮಾಡಲಾಗಿದೆ. ಈ ಅಭ್ಯಾಸಕ್ರಮ ಆನ್‍ಲೈನ್‍ನಲ್ಲಿಯೂ ಕಲಿಯಬಹುದು. ಇದು ಒಂದು ವರ್ಷದ ಅಭ್ಯಾಸ ಕ್ರಮ ಇರಲಿದೆ.