ಪೊಲೀಸರು ಮತಾಂಧರ ವಿರುದ್ಧ ಕಠಿಣ ಕಾರ್ಯಾಚರಣೆ ಮಾಡದೆಯಿರುವುದುರಿಂದ ನಾಗರಿಕರು ಕಾಯದೆಯನ್ನು ಕೈತೆಗೆದುಕೊಳ್ಳುತ್ತಿದ್ದಾರೆ, ಈ ಬಗ್ಗೆ ವಿಚಾರ ಮಾಡಬೇಕಾಗಿರುವುದು ಅಗತ್ಯ !
ಆಗ್ರಾ (ಉತ್ತರಪ್ರದೇಶ) – ಇಲ್ಲಿನ ರುನಕತಾ ಭಾಗದಲ್ಲಿ ಲವ್ಹ ಜಿಹಾದ ಪ್ರಕರಣದಲ್ಲಿ ಆರೋಪಿ ಸಾಜಿದ ಎಂಬುವವನನ್ನು ಬಂಧಿಸಲಿಲ್ಲ ಎಂಬುದಕ್ಕಾಗಿ ಉದ್ರೇಕಗೊಂಡ ನಾಗರಿಕರು ಅವನ ೨ ಮನೆಗಳನ್ನು ಸುಟ್ಟರು. ಈ ಪ್ರಕರಣದಲ್ಲಿ ಪೊಲೀಸರು ೮ ಜನರನ್ನು ಬಂಧಿಸಿದ್ದಾರೆ ಹಾಗೂ ಈ ಘಟನೆಯ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಓರ್ವ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಯಿತು.
#Agra #Love #Jihad: लव जिहाद के आरोपी युवक के घर को भीड़ ने लगाई आग, पुलिस ने शुरू की कार्रवाईhttps://t.co/J0VUoNUpXI
— Zee Uttar Pradesh Uttarakhand (@ZEEUPUK) April 15, 2022
ಆರೋಪಿ ಸಾಜಿದ ಒಂದು ವ್ಯಾಯಾಮಶಾಲೆಯ ಸಂಚಾಲಕನಾಗಿದ್ದಾನೆ. ಅವನು ಓರ್ವ ಹಿಂದು ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅವಳನ್ನು ಓಡಿಸಿಕೊಂಡು ಹೋಗಿದ್ದನು. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರು ನೀಡಿದ್ದರೂ ಕೂಡ ಪೊಲೀಸರು ಅವನನ್ನು ಬಂಧಿಸಲಿಲ್ಲವೆಂದು ಉದ್ರೇಕಗೊಂಡ ಜನರು ಅವನ ಮನೆಯನ್ನು ಸುಟ್ಟರು. ಕಾಣೆಯಾಗಿದ್ದ ಯುವತಿಯನ್ನು ಪೊಲೀಸರು ದೆಹಲಿಯಲ್ಲಿ ವಶಕ್ಕೆ ಪಡೆದಿದ್ದಾರೆ.