‘ಅಲ್ಲಾನ ಮನೆಯೆಂದರೆ ಸ್ವರ್ಗದಲ್ಲಿ ಬಹಳ ಅಪ್ಸರೆಯರು (ಹೂರ್) ಸಿಗುವರು !’(ಅಂತೆ) – ‘ಐ.ಐ.ಟಿ’ಯಿಂದ ‘ಕೆಮಿಕಲ್ ಇಂಜನಿಯರಿಂಗ್’ ಶಿಕ್ಷಣ ಪಡೆದ ಮುರ್ತಜಾ
ಭಾರತದಲ್ಲಿ ೨ನೇ ಸ್ಥಾನದಲ್ಲಿರುವ ಇಂಜಿನಿಯರಿಂಗ್ ವಿಶ್ವವಿದ್ಯಾಲಯದಿಂದ ಶಿಕ್ಷಣವನ್ನು ಪಡೆದಿರುವ ಮತಾಂಧನ ಈ ಕೃತ್ಯದಿಂದ ‘ಮತಾಂಧರು ಎಷ್ಟೇ ಉಚ್ಚಶಿಕ್ಷಣವನ್ನು ಪಡೆದಿದ್ದರೂ, ಅವರಲ್ಲಿರುವ ಜಿಹಾದಿ ಮಾನಸಿಕತೆ ಹೋಗುವುದಿಲ್ಲ ಮತ್ತು ಅವರಿಗೆ ಧರ್ಮವೇ ಮಹತ್ವದ್ದಾಗಿರುತ್ತದೆ’, ಎನ್ನುವುದು ಸಿದ್ಧವಾಗುತ್ತದೆ. ಸಚ್ಚರ ಆಯೋಗದ ಶಿಫಾರಸ್ಸನ್ನು ಶೀಘ್ರವಾಗಿ ಕಾರ್ಯಗತಗೊಳಿಸುವ ಮತ್ತು ಮುಸಲ್ಮಾನರನ್ನು ಓಲೈಸುವ ರೂಢಿಯಿರುವ ಕಾಂಗ್ರೆಸ್, ಪ್ರಗತಿ(ಅಧೋ)ಪರರು ಮುಂತಾದವರ ಗುಂಪು ಈಗೇಕೆ ಸುಮ್ಮನಿದೆ ?
ಲಕ್ಷ್ಮಣಪುರಿ (ಉತ್ತರಪ್ರದೇಶ) – ಗೋರಖಪೂರ ಗೋರಖನಾಥ ದೇವಸ್ಥಾನದ ಮೇಲೆ ದಾಳಿ ಮಾಡಿದ ಮುರ್ತಜಾನನನ್ನು ಬಿಗಿಯಾಗಿ ವಿಚಾರಣೆ ನಡೆಸಲಾಗುತ್ತಿದೆ. ಆತ ಇಸ್ಲಾಮಿಕ್ ಸ್ಟೇಟ್, ಹಾಗೆಯೇ ವಿದೇಶದ ಅನೇಕ ಮುಸ್ಲಿಂ ಸಂಸ್ಥೆಗಳ ಸಂಪರ್ಕದಲ್ಲಿದ್ದನು, ಎನ್ನುವ ಮಾಹಿತಿ ಬಹಿರಂಗವಾಗಿದೆ.
Gorakhnath temple attack: Accused sent money to ISIS terrorists; wanted to flee to Canadahttps://t.co/1NMdrSAJKD
— Republic (@republic) April 7, 2022
‘ಅಲ್ಲಾನ ಮನೆಯೆಂದರೆ ಸ್ವರ್ಗದಲ್ಲಿ ಬಹಳಷ್ಟು ಅಪ್ಸರೆಯರು (ಹೂರ್) ಸಿಗುವರು. ಅಲ್ಲಿ ಪತ್ನಿಯರ ಕೆಲಸವಿಲ್ಲ. ದೇವರ ಮನೆಗೆ ಹೋದರೆ, ಎಲ್ಲವನ್ನೂ ಇಲ್ಲಿಯೇ ಬಿಡಬೇಕಾಗುವುದು’, ಎಂದು ಆತ ವಿಚಾರಣೆಯ ಸಮಯದಲ್ಲಿ ಪೊಲಿಸರಿಗೆ ತಿಳಿಸಿದ್ದಾನೆ. ಐ.ಐ.ಟಿ. ಮುಂಬಯಿಯಂತಹ ವಿಶ್ವವಿಖ್ಯಾತ ವಿಶ್ವವಿದ್ಯಾಲಯದಿಂದ ‘ಕೆಮಿಕಲ್ ಇಂಜನಿಯರಿಂಗ್’ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆದ ಮುರ್ತಜಾ ವಿದೇಶಿ ಕಂಪನಿಯ ಕೆಲಸವನ್ನು ಬಿಟ್ಟು ಗೋರಖಪೂರಕ್ಕೆ ಬಂದಿದ್ದನು. ತದನಂತರ ಅವನು ಕುಟುಂಬ ಮತ್ತು ಸಮಾಜದೊಂದಿಗೆ ಯಾವುದೇ ಸಂಬಂಧ ಬರಬಾರದು ಎಂದು ತನ್ನನ್ನು ಕೋಣೆಯಲ್ಲಿ ಕೂಡಿಹಾಕಿಕೊಂಡನು. ಈ ಬಗ್ಗೆ ಆತ, ‘ಅಲ್ಲಾನ ಮನೆಯಲ್ಲಿ ಕೇವಲ ಅಲ್ಲಾನದ್ದೇ ಕೇಳಿರಿ ಮತ್ತು ಅಲ್ಲಾನ ಮಾರ್ಗದಲ್ಲಿಯೇ ನಡೆಯಿರಿ, ತದನಂತರ ಖಂಡಿತವಾಗಿಯೂ ಸ್ವರ್ಗ ಸಿಗುವುದು!’ ಎಂದು ಹೇಳಿದ.
ಎನ್.ಐ.ಎ.ಯಿಂದ ವಿಚಾರಣೆ !
ಮುರ್ತಜಾಲಾನನ್ನು ಕಾಪಾಡಲು ಆತನ ತಂದೆ ಜನಪ್ರಿಯ ಡಾ. ಕೆ.ಎ. ಅಬ್ಬಾಸಿಯು ಆತ ‘ಮನೋರೋಗಿ’ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ; ಆದರೆ ಉಗ್ರ ನಿಗ್ರಹ ದಳಕ್ಕೆ ಆತ ಅತ್ಯಂತ ‘ಕಪಟಿ’ ಇರುವ ಬಗ್ಗೆ ಸಂದೇಹವಿದೆ. ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.)ಯು ಇನ್ನು ಮುರ್ತಜಾನ ವಿಚಾರಣೆ ಮಾಡಲಿದೆ.
ಇಸ್ಲಾಮಿ ಸಂಸ್ಥೆಗಳಿಗೆ ಹಣ ಪೂರೈಸುತ್ತಿದ್ದ ಮುರ್ತಜಾ !ಮುರ್ತಜಾನ ಬ್ಯಾಂಕ ವ್ಯವಹಾರಗಳ ವಿವರ ಬಹಿರಂಗಗೊಂಡಿದೆ. ಕಳೆದ ವರ್ಷ ಜೂನ ತಿಂಗಳಲ್ಲಿ ಮುರ್ತಜಾನು ಕ್ರೆಡಿಟ್ ಕಾರ್ಡ ಸಹಾಯದಿಂದ ನಡೆಸಿರುವ ಕೆಲವು ಸಂದೇಹಾಸ್ಪದ ವ್ಯವಹಾರವು ರಕ್ಷಣಾ ಇಲಾಖೆಯ ಕೈ ಸೇರಿದೆ. ಇದರಿಂದ ಮುರ್ತಜಾ ‘ಪೇ ಪಾಲ’ನ ಮಾಧ್ಯಮದಿಂದ ವಿದೇಶದ ಅನೇಕ ಮುಸ್ಲಿಂ ಸಂಸ್ಥೆಗಳಿಗೆ ಹಣವನ್ನು ಕಳುಹಿಸುತ್ತಿರುವುದು ಸ್ಪಷ್ಟವಾಗಿದೆ. ಅವನು ಕಳೆದ ೪-೫ ತಿಂಗಳುಗಳಲ್ಲಿ ಶಮೀಉಲ್ಲಾಹ ಹೆಸರಿನ ವ್ಯಕ್ತಿಯ ಖಾತೆಗೂ ಅನೇಕ ಬಾರಿ ಸಾವಿರಾರು ರೂಪಾಯಿಗಳನ್ನು ಜಮೆ ಮಾಡಿದ್ದಾನೆ. ಇಷ್ಟೇ ಅಲ್ಲ, ಅವನು ಸಿರಿಯಾದಲ್ಲಿರುವ ಒಬ್ಬ ವ್ಯಕ್ತಿಯ ಸಂಪರ್ಕದಲ್ಲಿ ಇರುವುದು ಸ್ಪಷ್ಟವಾಗಿದೆ. ‘ಅವನು ಅನೇಕ ಬಾರಿ ಜಿಹಾದಿ ಕೃತ್ಯವನ್ನು ನಡೆಸಲು ಪ್ರತಿಜ್ಞೆಯನ್ನು ಕೂಡ ಮಾಡಿದ್ದಾನೆ’. |