ಮುಜಫ್ಫರ್‌ನಗರದಲ್ಲಿ (ಉತ್ತರಪ್ರದೇಶ) ಯಾಕೂಬ್ ದುರ್ಗಾ ದೇವಿಯ ದೇವಸ್ಥಾನಕ್ಕೆ ನುಗ್ಗಿ ವಿಗ್ರಹವನ್ನು ಒಡೆದನು !

ಮತಾಂಧರು ಹಿಂದೂ ದೇವಾಲಯಗಳಿಗೆ ನುಗ್ಗಲು ಮತ್ತು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸುವ ದುಸ್ಸಾಹಸ ಮಾಡಿದ್ದಾರೆ. ಇಂತಹ ‘ಆಧುನಿಕ ಗಜನಿ’ಯ ಮೇಲೆ ತಕ್ಷಣದ ಕ್ರಮ ಅಗತ್ಯ !

ಮುಜಫ್ಫರ್‌ನಗರ – ಉತ್ತರಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ಯಾಕೂಬ್ ಎಂಬ ಮತಾಂಧನೊಬ್ಬ ದುರ್ಗಾ ದೇವಸ್ಥಾನಕ್ಕೆ ನುಗ್ಗಿ ವಿಗ್ರಹವನ್ನು ಒಡೆದು ಹಾಕಿದ್ದಾನೆ. ಯಾಕೂಬ್ ಇತ್ತೀಚೆಗೆ ಪಾಕಿಸ್ತಾನದಿಂದ ಹಿಂತಿರುಗಿದ್ದ. ಆರೋಪಿ ಯಾಕೂಬ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಆತ ‘ನಾನೊಬ್ಬ ಜಿಹಾದಿ’ ಎಂದು ಕೂಗುತ್ತಿದ್ದ. ಯಾಕೂಬ್‌ನಿಂದ ಸಿಕ್ಕಿದ ಮಾಹಿತಿ ಆಧರಿಸಿ ಮತ್ತೊಬ್ಬ ಆರೋಪಿ ಫಾರೂಕ್‌ನನ್ನು ಬಂಧಿಸಲಾಗಿದೆ.

(ಈ ಚಿತ್ರ ಹಾಕುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶವಾಗಿರದೆ ನಿಜ ಸ್ಥಿತಿ ತಿಳಿಸಿವುದಾಗಿದೆ)

೧. ಏಪ್ರಿಲ್ ೧೧, ೨೦೨೨ ರಂದು, ಬೆಳಿಗ್ಗೆ ೮.೩೦ ರ ಸುಮಾರಿಗೆ ಯಾಕೂಬ್ ಮುಜಫ್ಫರ್‌ನಗರ ಜಿಲ್ಲೆಯ ಬಾಘರಾದಲ್ಲಿರುವ ಶ್ರೀ ದುರ್ಗಾಮಾತೆಯ ದೇವಸ್ಥಾನದಲ್ಲಿ ನುಗ್ಗಿ ದುರ್ಗಾ ಮಾತೆಯ ವಿಗ್ರಹವನ್ನು ಭಗ್ನಗೊಳಿಸಿದ.

೨. ದೇವಸ್ಥಾನದಲ್ಲಿದ್ದ ಅರ್ಚಕ ಆತನನ್ನು ತಡೆಯಲು ಮುಂದಾದಾಗ ಅರ್ಚಕನ ಜತೆ ಅನುಚಿತವಾಗಿ ವರ್ತಿಸಿದ್ದಾನೆ. ಸದ್ದು ಕೇಳಿ ಸುತ್ತಮುತ್ತ ಜನ ಜಮಾಯಿಸಿದರು. ಅವರು ಜಾಕೋಬ್‌ನನ್ನು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದರು.

೩. ಭಜರಂಗ ದಳದ ಸ್ಥಳಿಯ ನಾಯಕ ಅಂಕುರ ರಾಣಾ ಇವರು ‘ಆಪ್ ಇಂಡಿಯಾ’ಗೆ, ‘ಆರೋಪಿಗಳ ವಿರುದ್ಧ ‘ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ’ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಡಳಿತಕ್ಕೆ ಹೇಳಿಕೆ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.