ನ್ಯಾಯವಾದಿಗಳ ಸಮವಸ್ತ್ರದ ವಿರುದ್ಧ ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠದಲ್ಲಿ ಅರ್ಜಿ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠದಲ್ಲಿ ಇಲ್ಲಿನ ನ್ಯಾಯವಾದಿಗಳು ತಮ್ಮ ಅಮವಸ್ತ್ರದ ಬಗ್ಗೆ ದಾಖಲಿಸಿದ ಅರ್ಜಿಯ ಮೇಲೆ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ವು ಪ್ರತಿಜ್ಞಾಪತ್ರವನ್ನು ಮಂಡಿಸಿದೆ. ಇದರಲ್ಲಿ, ‘ಸಮವಸ್ತ್ರದ ಬಗ್ಗೆ ವಿಚಾರ ಮಾಡಲು ೫ ಸದಸ್ಯರ ಸಮಿತಿಯನ್ನು ಸ್ಥಾಪಿಸಲಾಗಿದೆ. ಅದು ಈ ವಿಷಯದಲ್ಲಿನ ವರದಿಯನ್ನು ಕೌನ್ಸಿಲ್‌ಗೆ ಒಪ್ಪಿಸಲಿದೆ’ ಎಂದು ಹೇಳಿದೆ.
Dress code for lawyers: Bar Council of India constitutes five-member committee https://t.co/6mPyyZbdn9
— HT Lucknow (@htlucknow) April 7, 2022
ನ್ಯಾಯವಾದಿಗಳ ಸಮವಸ್ತ್ರವು ಭಾರತೀಯ ವಾತಾವರಣಕ್ಕೆ ಅಯೋಗ್ಯ !
ಸ್ಥಳಿಯ ನ್ಯಾಯವಾದಿ ಅಶೋಕ ಪಾಂಡೆಯರವರು ಈ ಅರ್ಜಿಯನ್ನು ದಾಖಲಿಸಿದ್ದಾರೆ. ಅವರು ಇದರಲ್ಲಿ, ನ್ಯಾಯಾಲಯದಲ್ಲಿ ಹಾಜರಿರುವಾಗ ನ್ಯಾಯವಾದಿಗಳಿಗೆ ಕಪ್ಪು ಕೋಟು, ಗೌನು ಮತ್ತು ಬ್ಯಾಂಡ್ ಧರಿಸುವ ನಿಯಮವಿದೆ. ಬಾರ್ ಕೌನ್ಸಿಲ್ ನಿರ್ಮಿಸಿರುವ ಈ ನಿಯಮವು ‘ಅಡ್ವೋಕೇಟ್ ಆಕ್ಟ್’ನ್ನು ಉಲ್ಲಂಘಿಸುತ್ತದೆ. ಬಾರ್ ಕೌನ್ಸಿಲ್‌ಗೆ ಸಮವಸ್ತ್ರವನ್ನು ತಯಾರಿಸುವ ಅಧಿಕಾರ ನೀಡುವಾಗ ನ್ಯಾಯಾವಾದಿಗಳ ಸಮವಸ್ತ್ರವನ್ನು ಸಿದ್ಧಪಡಿಸುವಾಗ ಅದನ್ನು ವಾತಾವರಣದ ಅನುಸಾರ ಮಾಡುವ ಕಡೆಗೆ ಗಮನ ನೀಡಲು ಹೇಳಲಾಗಿತ್ತು. ಆದರೆ ಬಾರ್ ಕೌನ್ಸಿಲ್ ಸಂಪೂರ್ಣ ದೇಶದಲ್ಲಿ ೧೨ ತಿಂಗಳಿಗಾಗಿ ಒಂದೇ ಸಮವಸ್ತ್ರವನ್ನು ಸಿದ್ಧಪಡಿಸಿದೆ. ಭಾರತದಲ್ಲಿನ ಕೆಲವು ಕ್ಷೇತ್ರಗಳಲ್ಲಿ ೯ ತಿಂಗಳು, ಇನ್ನೂ ಕೆಲವು ಕಡೆಗಳಲ್ಲಿ ೧೨ ತಿಂಗಳೂ ಬೇಸಿಗೆ ಇರುತ್ತದೆ, ಎಂದು ಹೇಳಿದರು.
ನ್ಯಾಯವಾದಿಗಳು ಬಳಸುತ್ತಿರುವ ಬ್ಯಾಂಡ್ ಕ್ರೈಸ್ತರ ಧಾರ್ಮಿಕ ಚಿನ್ಹೆಯಾಗಿದೆ
ನ್ಯಾಯವಾದಿ ಅಶೋಕ ಪಾಂಡೇಯರವರು ಈ ಅರ್ಜಿಯಲ್ಲಿ, ನ್ಯಾಯವಾದಿಗಳು ಧರಿಸುವ ಬ್ಯಾಂಡ್‌ಗೆ ಕ್ರೈಸ್ತ ದೇಶಗಳಲ್ಲಿ ‘ಪ್ರೀಚಿಂಗ್ ಬೆಂಡ್’ ಎಂದು ಹೇಳಲಾಗುತ್ತದೆ. ಕ್ರೈಸ್ತ ಧರ್ಮಗುರುಗಳು ಧಾರ್ಮಿಕ ಪ್ರವಚನಗಳನ್ನು ನೀಡುವಾಗ ಈ ಬ್ಯಾಂಡ್ ಧರಿಸುತ್ತಿರುತ್ತಾರೆ. ಈ ಬ್ಯಾಂಡ್ ಕ್ರೈಸ್ತರ ಧಾರ್ಮಿಕ ಚಿನ್ಹೆಯಾಗಿದೆ. ಆದ್ದರಿಂದ ಅದನ್ನು ನ್ಯಾಯವಾದಿಗಳಿಗೆ ಹಾಕಲು ಹೇಳುವ ನಿಯಮವು ಕಾನೂನುಬದ್ಧವಲ್ಲ, ಎಂದು ಹೇಳಿದೆ.