ವಾರಣಾಸಿಯಲ್ಲಿ ಆಜಾನ್ ಸಮಯದಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸಾ ಪ್ರಸಾರ

ದೇಶದಾದ್ಯಂತ ಹೀಗೆ ನಡೆಯಬೇಕು, ಆಗ ಮಾತ್ರ ಅನುಚಿತ ಪ್ರಕಾರಗಳು ಹದ್ದುಬಸ್ತಿನಲ್ಲಿರುತ್ತವೆ !

ಕೆಲವು ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದ್ದರೂ, ಸರಕಾರ, ಆಡಳಿತ ಮತ್ತು ಪೊಲೀಸರು ಮಸೀದಿಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಭೋಂಗಾಗಳ ವಿರುದ್ಧ ಕ್ರಮ ಕೈಗೊಳ್ಳದೆ ನುಣುಚಿಕೊಳ್ಳುತ್ತಿದ್ದಾರೆ. ಆದ್ದರಿಂದ, ಈಗ ಹಿಂದೂಗಳು ಅದನ್ನು ಕಾನೂನುಬದ್ಧ ರೀತಿಯಲ್ಲಿ ವಿರೋಧಿಸುತ್ತಿದ್ದರೆ, ಅದು ಹೇಗೆ ತಪ್ಪಾಗುತ್ತದೆ ?

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿಯ ‘ಶ್ರೀಕಾಶಿ ವಿಶ್ವನಾಥ್ ಜ್ಞಾನವಾಪಿ ಮುಕ್ತಿ ಆಂದೋಲನ’ ಸಂಘಟನೆಯು ಧ್ವನಿವರ್ಧಕದಿಂದ ಹನುಮಾನ್ ಚಾಲೀಸಾವನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ. ಮಸೀದಿಯಿಂದ ಆಜಾನ್ ಆರಂಭವಾದ ಕೂಡಲೇ ಹನುಮಾನ್ ಚಾಲೀಸಾ ಪಠಿಸಲಾಗುತ್ತಿದೆ. ಮನೆಗಳ ಮೇಲ್ಛಾವಣಿಯ ಮೇಲೂ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

ವಾರಣಾಸಿಯ ಸಾಕೇತ್ ನಗರ ಪ್ರದೇಶದಲ್ಲಿ ಆಂದೋಲನದ ಅಧ್ಯಕ್ಷ ಸುಧೀರ್ ಸಿಂಗ್ ಅವರು ತಮ್ಮ ಮನೆಯಿಂದಲೇ ಈ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಅವರು, ಅಜಾನ್ ಆರಂಭವಾದಾಗ ಅದೇ ರೀತಿಯಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಪಠಿಸಲಾಗುವುದು. ಈ ಮೂಲಕ ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಿಲ್ಲ. ಕಾಶಿಯಲ್ಲಿ ಬೆಳಿಗ್ಗೆ ದೇವಸ್ಥಾನದಲ್ಲಿ ವೇದ ಪಾರಾಯಣಗಳು ಮತ್ತು ಪೂಜೆ ಅರ್ಚನೆ, ಹನುಮಾನ್ ಚಾಲೀಸಾವನ್ನು ಪಠಿಸಲಾಗುತ್ತಿತ್ತು; ಆದರೆ ಒತ್ತಡದಿಂದಾಗಿ ಈಗ ಅದೆಲ್ಲವೂ ಮುಚ್ಚಿಹೋಗಿದೆ. ಶಬ್ದ ಮಾಲಿನ್ಯದ ಕಾರಣವನ್ನು ನೀಡುತ್ತಾ ದೇವಾಲಯದ ಮೇಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಲಾಯಿತು; ಆದರೆ ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ಇನ್ನೂ ತೆಗೆದಿಲ್ಲ. ಅಜಾನ್ ೪.೩೦ ರಿಂದ ಪ್ರಾರಂಭವಾಗುತ್ತದೆ. ಆಜಾನ್‌ನ ಧ್ವನಿ ಬಂದ ಕೂಡಲೇ ನಾವು ದೇವಸ್ಥಾನದಿಂದ ಧ್ವನಿವರ್ಧಕದಲ್ಲಿ ವೇದ ಮಂತ್ರ, ಹನುಮಾನ್ ಚಾಲೀಸವನ್ನೂ ಪ್ರಸಾರ ಮಾಡುತ್ತಿದ್ದೇವೆ. ಅಜಾನ್ ಧ್ವನಿಗೆ ನಾವು ಎಷ್ಟು ಬಾರಿ ಆಕ್ಷೇಪಿಸಿದ್ದೇವೆ ? ನಮಗೆ ತೊಂದರೆಯಾಗದಂತೆ ಧ್ವನಿವರ್ಧಕದ ಸದ್ದು ಕಡಿಮೆ ಮಾಡಬೇಕು ಎಂದು ಹಲವು ಬಾರಿ ದೂರು ನೀಡಲಾಗಿತ್ತು. (ದೂರು ನೀಡಿದ ನಂತರವೂ ಆಡಳಿತ ನಿಷ್ಕ್ರಿಯವಾಗಿದ್ದರೆ, ಜನರು ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸಲು ಪ್ರಾರಂಭಿಸಿದರೆ, ಅದು ಹೇಗೆ ತಪ್ಪಾಗುತ್ತದೆ ? – ಸಂಪಾದಕರು)