೩೧ ಜುಲೈ ತನಕ ಎಲ್ಲಾ ರಾಜ್ಯಗಳಲ್ಲಿ ‘ವನ್ ನೇಶನ್, ವನ್ ರೇಶನ್ ಕಾರ್ಡ್’ ಯೋಜನೆಯನ್ನು ಜಾರಿಗೆ ತನ್ನಿ ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ದೇಶದ ಎಲ್ಲ ರಾಜ್ಯಗಳಲ್ಲಿ ಜುಲೈ ೩೧ ರ ಒಳಗೆ ‘ವನ್ ನೇಶನ್, ವನ್ ರೇಶನ್ ಕಾರ್ಡ್’ ಯೋಜನೆಯನ್ನು ಜಾರಿಗೆ ತರುವಂತೆ ಆದೇಶ ನೀಡಿದೆ. ನ್ಯಾಯಾಲಯವು ಈ ಆಯೋಜನೆಯನ್ನು ರೂಪಿಸುವ ಬಗ್ಗೆ ಕೆಲವು ಸೂಚನೆಗಳನ್ನೂ ನೀಡಿದೆ.

೧. ನ್ಯಾಯಾಲಯವು, ದೇಶದ ಎಲ್ಲ ರಾಜ್ಯಗಳಲ್ಲಿ ಶೀಘ್ರವಾಗಿ ‘ವನ್ ನೇಶನ್, ವನ್ ರೇಶನ್ ಕಾರ್ಡ್’ ಯೋಜನೆಯನ್ನು ಜಾರಿಗೆ ತರುವುದು ತುಂಬಾ ಅಗತ್ಯವಿದೆ. ಇದರಿಂದ ವಲಸೆ ಕಾರ್ಮಿಕರು ದೇಶದ ಮೂಲೆ ಮೂಲೆಯಲ್ಲಿ ಇದರ ಲಾಭವನ್ನು ಪಡೆಯಬಹುದು’ ಎಂದು ವಿಚಾರ ಮಂಡಿಸಿತು.

೨. ವಲಸೆ ಕಾರ್ಮಿಕರಿಗೆ ದವಸಧಾನ್ಯಗಳನ್ನು ಪೂರೈಸುವಂತೆ ಮತ್ತು ಅವರಿಗಾಗಿ ‘ಕಮ್ಯುನಿಟಿ ಕಿಚನ್’(ಅನ್ನ ಛತ್ರ) ಈ ಮುಂದಿನ ಕಾಲದಲ್ಲಿಯೂ ಮುಂದುವರೆಸುವಂತೆ ಆದೇಶವನ್ನೂ ನೀಡಲಾಗಿದ.