ಮಹಾರಾಷ್ಟ್ರದ ರಾಯಗಡನ ಖ್ಯಾತ ವೈದ್ಯ ಮತ್ತು ಸನಾತನದ ೩೫ ನೇ ಸಂತರಾದ ಆಯುರ್ವೇದ ಪ್ರವೀಣ ಪೂ. ವೈದ್ಯ ವಿನಯ ಭಾವೆ (೬೯ ವರ್ಷ) ಇವರ ದೇಹತ್ಯಾಗ !

೨೦೧೩ ನೇ ಇಸವಿಯಲ್ಲಿ ‘ರಾಯಗಡ ಭೂಷಣ’ ಪ್ರಶಸ್ತಿಯಿಂದ ಅವರನ್ನು ಸನ್ಮಾನಿಸಲಾಗಿತ್ತು !

ಪೂ. ವೈದ್ಯ ವಿನಯ ಭಾವೆ

ರತ್ನಾಗಿರಿ – ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ವರಸಯಿ ಮೂಲದ ಖ್ಯಾತ ವೈದ್ಯ ಮತ್ತು ಸನಾತನದ ೩೫ ನೇ ಸಂತ ಆಯುರ್ವೇದ ಪ್ರವೀಣ ಪೂ. ವೈದ್ಯ ವಿನಯ ನೀಳಕಂಠ ಭಾವೆ (೬೯ ವರ್ಷಗಳು) ಇವರು ಜೂನ್ ೨೫ ರಂದು ರಾತ್ರಿ ೧೦ ಗಂಟೆಗೆ ರತ್ನಾಗಿರಿಯಲ್ಲಿ ದೇಹತ್ಯಾಗ ಮಾಡಿದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಪಾರ್ಥಿವದ ಮೇಲೆ ಜೂನ್ ೨೬ ರ ರಂದು ಬೆಳಗ್ಗೆ ಅಂತಿಮಸಂಸ್ಕಾರವನ್ನು ಮಾಡಲಾಯಿತು. ಪೂ. ವೈದ್ಯ ಭಾವೆಕಾಕಾ ಇವರು ಸದ್ಯ ರತ್ನಾಗಿರಿ ಜಿಲ್ಲೆಯ ಸಂಗಮೇಶ್ವರ ತಾಲೂಕಿನಲ್ಲಿರುವ ಮೋರ್ಡೆಯಲ್ಲಿರುತ್ತಿದ್ದರು. ಅವರಿಗೆ ಪತ್ನಿ ಶ್ರೀಮತಿ ವಿದ್ಯಾ ಭಾವೆ, ಮಗ ಶ್ರೀ. ವಿಕ್ರಮ ಭಾವೆ, ಸೊಸೆ ಸೌ. ವೈದೇಹಿ ವಿಕ್ರಮ ಭಾವೆ ಮತ್ತು ಮೊಮ್ಮಗಳು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಇಂದ್ರಶ್ರೀ ವಿಕ್ರಮ ಭಾವೆ, ಹೀಗೆ ಪರಿವಾರವಿದೆ. ಪೂ. ಭಾವೆಕಾಕಾ ಇವರ ಪರಿವಾರವು ಸನಾತನದ ಮಾರ್ಗದರ್ಶನದಲ್ಲಿ ಸಾಧನಾನಿರತವಾಗಿದೆ.

ಪೂ. ವೈದ್ಯ ವಿನಯ ಭಾವೆ ಇವರ ಪರಿಚಯ

‘ಪೂ. ವೈದ್ಯ ವಿನಯ ನೀಳಕಂಠ ಭಾವೆ ಇವರು ಮೂಲತಃ ರಾಯಗಡ ಜಿಲ್ಲೆಯಲ್ಲಿನ ಪೆಣ ತಾಲೂಕಿನಲ್ಲಿರುವ ವರಸಯಿ ಗ್ರಾಮದವರಾಗಿದ್ದಾರೆ. ವೈದ್ಯ ಪರಂಪರೆಯ ಅವರ ಮನೆತನದಲ್ಲಿ ಅವರದ್ದು ಐದನೇಯ ಪೀಳಿಗೆಯಾಗಿದೆ. ಅವರು ತಮ್ಮ ಮಾಲಕತ್ವದ ‘ಶ್ರೀ ಅನಂತಾನಂದ ಔಷಧಾಲಯ’ ಹೆಸರಿನ ಆಯುರ್ವೇದಿಕ ಔಷಧಿಗಳನ್ನು ತಯಾರಿಸುವ ಕಾಖಾನೆಯನ್ನು ಸ್ಥಾಪಿಸಿ ಶಾಸ್ತ್ರೋಕ್ತ ಮತ್ತು ಪರಿಣಾಮಕಾರಿ ಔಷಧಿಗಳ ತಯಾರಿಸಿ ಮಾಡುತ್ತಾ ಅನೇಕ ವರ್ಷಗಳ ಕಾಲ ಆಯುರ್ವೇದದ ಸೇವೆ ಯನ್ನು ಮಾಡಿದರು. ಇಡೀ ಮಹಾರಾಷ್ಟ್ರದ ವೈದ್ಯರಲ್ಲಿ ಅವರು ‘ವರಸಯೀಕರ ವೈದ್ಯ ಭಾವೆ’, ಎಂದು ಪ್ರಸಿದ್ಧರಾಗಿದ್ದರು. ರೋಗಿಗಳಿಗೆ ಚಿಕಿತ್ಸೆ ನೀಡುವುದು, ಹಾಗೆಯೇ ಔಷಧ ನಿರ್ಮಿತಿ ಈ ಎರಡೂ ಕ್ಷೇತ್ರಗಳಲ್ಲಿ ಅವರ ಅನುಭವವು ಅಪಾರವಾಗಿತ್ತು. ಅಧ್ಯಯನನಿಷ್ಠ, ಇತರರಿಗೆ ಸರ್ವತೋಮುಖ ಸಹಾಯ ಮಾಡುವುದು, ಸ್ನೇಹಪರ ಮತ್ತು ತ್ಯಾಗಿ ವೃತ್ತಿ ಇವು ಅವರ ಗುಣ ವೈಶಿಷ್ಟ್ಯಗಳಾಗಿದ್ದವು. ಪೂ. ಭಾವೆ ಇವರಿಗೆ ರಾಯಗಡ ಜಿಲ್ಲಾ ಪರಿಷದ್ ೨೦೧೩ ರಲ್ಲಿ ‘ರಾಯಗಡ ಭೂಷಣ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತ್ತು. ಕಳೆದ ಕೆಲವು ವರ್ಷಗಳಿಂದ ಅವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೆ ಆಯುರ್ವೇದಶಾಸ್ತ್ರದ ಸಂಶೋಧನೆಗಾಗಿ ಸಹಾಯ ಮಾಡುತ್ತಿದ್ದರು. ಪೂ. ಭಾವೆ ಇವರು ಮಹಾರಾಷ್ಟ್ರದ ದೇವದನಲ್ಲಿರುವ ಸನಾತನ ಆಶ್ರಮದಲ್ಲಿದ್ದು ಅಲ್ಲಿ ಸನಾತನದ ಸಂತರಾದ ಪರಾತ್ಪರ ಗುರು ಪಾಂಡೆ ಮಹಾರಾಜರ ಸೇವೆಯನ್ನೂ ಸಹ ಮಾಡಿದ್ದರು. ಅವರ ದೇಹತ್ಯಾಗದಿಂದ ಆಯುರ್ವೇದ ಕ್ಷೇತ್ರಕ್ಕೆ ದೊಡ್ಡ ಹಾನಿಯಾಗಿದೆ.’

ಅಧ್ಯಯನನಿಷ್ಠ ಮತ್ತು ತ್ಯಾಗಿ ವೃತ್ತಿ ಇರುವ ಸನಾತನದ ೩೫ ನೇ ಸಂತ ಪೂ. ವೈದ್ಯ ವಿನಯ ಭಾವೆ !

– (ಪರಾತ್ಪರ ಗುರು) ಡಾ. ಆಠವಲೆ

೧. ಸಾಧನೆಗೆ ಆರಂಭ

ಅ. ‘೧೯೮೬ ರಲ್ಲಿ ನಾನು ವೈದ್ಯ ಪ.ಪೂ. ಅಣ್ಣಾ ಕರಂದೀಕರ ಇವರ ಬಳಿಗೆ ಅಧ್ಯಾತ್ಮವನ್ನು ಕಲಿಯಲು ಹೋಗುತ್ತಿದ್ದೆನು. ಮತ್ತು ವೈದ್ಯ ಪೂ. ಭಾವೆ ಇವರು ವೈದ್ಯಕೀಯವನ್ನು ಕಲಿಯಲು ಹೋಗುತ್ತಿದ್ದರು. ಪ.ಪೂ. ಅಣ್ಣಾರವರ ಬಳಿ ನಮ್ಮ ಮೊದಲ ಭೇಟಿಯಾಯಿತು. ಮುಂದೆ ೧೯೮೭ ರಲ್ಲಿ ಪ.ಪೂ. ಅಣ್ಣಾ ಇವರು ನನ್ನನ್ನು ಪ.ಪೂ. ಭಕ್ತರಾಜ ಮಹಾರಾಜರ ಬಳಿಗೆ ಇಂದೂರಿಗೆ ಕರೆದುಕೊಂಡು ಹೋದರು. ಪೂ. ಭಾವೆ ಇವರು ಪ.ಪೂ. ಭಕ್ತರಾಜ ಮಹಾರಾಜರ ಬಳಿಗೆ ೧೯೮೮ ರಿಂದ ಅನ್ನ ಸಂತರ್ಪಣೆ ಮತ್ತು ಉತ್ಸವಗಳಿಗಾಗಿ ಬರುತ್ತಿದ್ದರು.

ಆ. ಯಾವಾಗ ನಾನು ೧೯೮೯ ರಲ್ಲಿ ಪನವೇಲ ಮತ್ತು ಪೆಣನಲ್ಲಿ ಸತ್ಸಂಗ ತೆಗೆದುಕೊಳ್ಳಲು ಆರಂಭಿಸಿದೆನೋ, ಆಗ ಪೂ. ಭಾವೆ ಇವರು ಸತ್ಸಂಗಕ್ಕೆ ನಿಯಮಿತವಾಗಿ ಬರುತ್ತಿದ್ದರು.

೨. ಕೆಲವು ಗುಣವೈಶಿಷ್ಟ್ಯಗಳು

೨ ಅ. ಸ್ನೇಹಪರ : ಮೂಲ ಪ್ರಕೃತಿಯು ಅಂತರ್ಮುಖ ವಾಗಿದ್ದರೂ, ‘ಸ್ನೇಹಪರ’ ಈ ಗುಣದಿಂದ ಪೂ. ಭಾವೆ ಇವರು ಎಲ್ಲರೊಂದಿಗೆ ಸಹಜವಾಗಿ ಮಾತನಾಡಬಲ್ಲವರಾಗಿದ್ದರು.

೨ ಆ. ಸಾಕ್ಷಿಭಾವ

೧. ಶಾರೀರಿಕ ಅನಾರೋಗ್ಯ ಅಷ್ಟೇ ಅಲ್ಲದೇ, ಹೃದ್ರೋಗಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ, ಇಂತಹ ಪ್ರಸಂಗಗಳಲ್ಲಿಯೂ ಅವರು ತೀರಾ ಸ್ಥಿರವಾಗಿದ್ದರು.

೨. ಕಠಿಣವಾದ ಕೌಟುಂಬಿಕ ಪ್ರಸಂಗಗಳ ಕಡೆಗೂ ಅವರು ಸಾಕ್ಷಿಭಾವದಿಂದ ನೋಡುತ್ತಿದ್ದರು.

೨ ಇ. ಅಧ್ಯಯನ ನಿಷ್ಠ : ಮುಂಬರುವ ಮೂರನೇಯ ಮಹಾಯುದ್ಧದ ಕಾಲದಲ್ಲಿ ಆಧುನಿಕ ವೈದ್ಯರು, ಔಷಧಿಗಳು ಇತ್ಯಾದಿ ಏನೂ ಲಭ್ಯವಿರಲಾರದು. ಈ ಕಾಲದಲ್ಲಿ ಉಪಾಯವನ್ನು ಹೇಗೆ ಮಾಡಬೇಕು ? ಈ ಕುರಿತು ಸನಾತನ ಸಂಸ್ಥೆಯು ನಾಮಜಪ, ನ್ಯಾಸ, ಮುದ್ರೆ, ಸ್ವಸಂಮ್ಮೋಹನ ಉಪಚಾರಶಾಸ್ತ್ರ (ಸದ್ಯ ಎರಡು ಗ್ರಂಥಗಳು ಲಭ್ಯವಿವೆ. ಮುಂದಿನ ಗ್ರಂಥವು ಲಭ್ಯ ವಾಗಲಿದೆ.) ಇತ್ಯಾದಿ ಅನೇಕ ವಿಷಯಗಳ ಕುರಿತಾದ ಗ್ರಂಥಗಳನ್ನು ಪ್ರಕಾಶನ ಮಾಡಲಿದೆ. ಪೂ. ಭಾವೆ ಇವರು ಸಂಕಲನ ಮಾಡಿದ ‘ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?’ ಮತ್ತು ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ’ ಇವೆರಡು ಗ್ರಂಥಗಳು ಪ್ರಕಾಶಿತಗೊಂಡಿವೆ ಮತ್ತು ಆಯುರ್ವೇದವನ್ನಾಧರಿಸಿದ ಮನೆಮದ್ದು ಚಿಕಿತ್ಸೆಗಳಿಗೆ ಸಂಬಂಧಿಸಿದ ಗ್ರಂಥಗಳಿಗಾಗಿ ಪೂ. ಭಾವೆ ಇವರು ಸಹಾಯ ಮಾಡಿದ್ದಾರೆ.’

೨ ಈ. ತ್ಯಾಗಿ ವೃತ್ತಿ : ಪೂ. ಭಾವೆ ಇವರ ತ್ಯಾಗಿ ವೃತ್ತಿಯ ಅನೇಕ ಉದಾಹರಣೆಗಳಿವೆ. ಸನಾತನ ಸಂಸ್ಥೆಗೆ ಸಂಬಂಧಿಸಿದ ಮೂರು ಉದಾಹರಣೆಗಳನ್ನು ಇಲ್ಲಿ ನೀಡುತ್ತಿದ್ದೇನೆ.

೧. ೧೯೯೦ ರಲ್ಲಿ ‘ಸನಾತನ ಸಂಸ್ಥೆ’ಯು ಅಧ್ಯಾತ್ಮ ವಿಶ್ವವಿದ್ಯಾಲಯ ವನ್ನು ಸ್ಥಾಪಿಸುವ ಕುರಿತು ವಿಚಾರವನ್ನು ಮಾಡುತ್ತಿತ್ತು. ಈ ಬಗ್ಗೆ ಪೂ. ಭಾವೆ ಇವರಿಗೆ ತಿಳಿದಾಗ ಅವರು ತಮ್ಮ ೧೨ ಎಕರೆ ಭೂಮಿಯನ್ನು ಅದಕ್ಕಾಗಿ ನೀಡಲು ಮುಂದಾದರು. ಮುಂದೆ ಅಣೆಕಟ್ಟಿನಿಂದ ಆ ಸಂಪೂರ್ಣ ಪರಿಸರವೇ ಜಲಾವೃತ್ತಗೊಳ್ಳಲಿದೆ, ಆ ಸ್ಥಳ ಉಪಯೋಗಿಸಲು ಆಗಲಿಲ್ಲ.

೨. ಅವರು ತಮ್ಮ ಆಯುರ್ವೇದದ ಉತ್ಪಾದನೆಗಳನ್ನು ತಯಾರಿಸುವ ವ್ಯವಸಾಯವನ್ನು ‘ಶ್ರೀ ಅನಂತಾನಂದ ಔಷಧಾಲಯ’ ಈ ಹೆಸರಿನಿಂದ ಮಾಡುತ್ತಿದ್ದರು. ಶ್ರೀ ಅನಂತಾನಂದ ಸಾಯೀಶ ಇವರು ಪ.ಪೂ. ಭಕ್ತರಾಜ ಮಹಾರಾಜರ ಗುರುಗಳಾಗಿದ್ದರು. ಸುಮಾರು ೨ ವರ್ಷಗಳ ಹಿಂದೆ ಅವರು ಆ ವ್ಯವಸಾಯವನ್ನೂ ಸನಾತನ ಸಂಸ್ಥೆಗೆ ನೀಡಲು ಮುಂದಾಗಿದ್ದರು.

೩. ೨೦೦೯ ರಲ್ಲಿ ‘ಸನಾತನ ಸಂಸ್ಥೆ’ಯ ಮೇಲೆ ನಿರ್ಬಂಧ ಹೇರಿದರೆ ಸಾಧಕರು ವಾಸ್ತವ್ಯಕ್ಕಾಗಿ ಎಲ್ಲಿಗೆ ಹೋಗಬೇಕು ?’ ಈ ಕುರಿತು ವಿಚಾರ ನಡೆದಿರುವಾಗ ಅವರು ಆ ಸಮಯದಲ್ಲಿ ತೆಗೆದುಕೊಂಡ ಒಂದು ಹೊಸ ಜಮೀನನ್ನು ಉಪಯೋಗಿಸಲು ಹೇಳಿದ್ದರು.

೨ ಉ. ಇತರರಿಗೆ ಸಹಾಯ ಮಾಡುವುದು : ಕೇವಲ ಆಯುರ್ವೇದ ಚಿಕಿತ್ಸೆಯಷ್ಟೇ ಅಲ್ಲ, ಆದರೆ ಇತರರಿಗೆ ಏನೆಲ್ಲ ಸಹಾಯ ಮಾಡಲು ಸಾಧ್ಯವೋ, ಅದನ್ನು ಪೂ. ಭಾವೆ ಇವರು ಮಾಡುತ್ತಿದ್ದರು. ವ್ಯಷ್ಟಿ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ತನು-ಮನ-ಧನ ಇವುಗಳ ತ್ಯಾಗ ಮಾಡಬೇಕಾಗುತ್ತದೆ. ಅದರೊಂದಿಗೆ ಸಾಧನೆಯ ತಳಮಳವೂ ಇರಬೇಕಾಗುತ್ತದೆ. ಈ ಗುಣ ಪೂ. ಭಾವೆ ಇವರಲ್ಲಿತ್ತು. ಆದುದರಿಂದಲೇ ಅವರ ಸಾಧನೆಯಲ್ಲಿ ಉನ್ನತಿಯಾಗಿ ಅವರು ಸಂತಪದವಿಯನ್ನು ತಲುಪಿದ್ದರು. ‘ಪೂ. ಭಾವೆ ಇವರ ಮುಂದಿನ ಪ್ರಗತಿಯು ಇದೇ ರೀತಿ ಶೀಘ್ರ ಗತಿಯಲ್ಲಾಗುವುದು’, ಎಂದು ನನಗೆ ಖಚಿತವಿದೆ.’ – (ಪರಾತ್ಪರ ಗುರು) ಡಾ. ಆಠವಲೆ