ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ’ ಶಿಬಿರ

ಧಾರವಾಡ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ‘ಆನ್‌ಲೈನ್ ಮೂಲಕ ಧರ್ಮಪ್ರೇಮಿಗಳಿಗೆ ಮತ್ತು ಹಿಂದುತ್ವನಿಷ್ಠರಿಗೆ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಕು. ಶಿಲ್ಪಾ ಗೌಡರ ಶಿಬಿರದ ಸೂತ್ರ ಸಂಚಲನೆಯನ್ನು ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ. ವೆಂಕಟರಮಣ ನಾಯ್ಕ್, ಸನಾತನ ಸಂಸ್ಥೆಯ ಸೌ. ರೇವತಿ ಹರಗಿ ಹಾಗೂ ಸೌ. ರಮಾ ಪ್ರಭು ಇವರು ಮಾರ್ಗದರ್ಶನ ಮಾಡಿದರು.

ಸೌ. ರೇವತಿ ಹರಗಿಯವರು ಮಾತನಾಡುತ್ತಾ, ‘ಸ್ವಭಾವದೋಷ ನಿರ್ಮೂಲನೆಯಿಂದ ಕಠಿಣ ಪರಿಸ್ಥಿತಿ ಯನ್ನು ಸಹಜವಾಗಿ ಎದುರಿಸಲು ಆಗುತ್ತದೆ ಎಂದು ತಿಳಿಸಿದರು. ಈ ಸಮಯದಲ್ಲಿ ಸೌ. ರಮಾ ಪ್ರಭು ಇವರು ಸ್ವಭಾವದೋಷ ನಿರ್ಮೂಲನೆಯ ಕೋಷ್ಟಕವನ್ನು ಹೇಗೆ ಬರೆಯಬೇಕು? ಎಂಬುದರ ಬಗ್ಗೆ ತಿಳಿಸಿಕೊಟ್ಟರು.

ಅಭಿಪ್ರಾಯ

ಇದರಲ್ಲಿ ಪಾಲ್ಗೊಂಡಿದ್ದ ಹಲವರು ಸ್ವಭಾವದೋಷ ನಿರ್ಮೂಲನೆಯ ಕೋಷ್ಟಕವನ್ನು ಬರೆಯುವ ಬಗ್ಗೆ ಮಾಹಿತಿ ಸಿಕ್ಕಿತು. ನಾವು ಇಂದಿನಿಂದ ಆರಂಭಿಸುತ್ತೇವೆ ಎಂದರು.