ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶೌರ್ಯಜಾಗೃತಿ ವ್ಯಾಖ್ಯಾನ ಸಂಪನ್ನ !

ಉತ್ತರಕನ್ನಡ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಶೌರ್ಯ ಜಾಗೃತಿ ವ್ಯಾಖ್ಯಾನದ ಆಯೋಜನೆ ಮಾಡಲಾಗಿತ್ತು. ಮುಂಬರುವ ಅಪತ್ಕಾಲದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಇದರ ಕುರಿತು ವ್ಯಾಖ್ಯಾನದ ಅಯೋಜನೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ. ಶರತಕುಮಾರ ಇವರು ಸಮಾಜದಲ್ಲಿ ಇಂದು ನೈಸರ್ಗಿಕ ಆಪತ್ತುಗಳಾದ ಕೊರೊನಾ ಮಹಾಮಾರಿ, ಚಂಡಮಾರುತ, ಸುನಾಮಿ, ಭೂಕಂಪ, ನೆರೆ, ಅತಿವೃಷ್ಟಿಯಿಂದ ಸಮಾಜದ ಮೇಲೆ ತೀವ್ರವಾದ ಪರಿಣಾಮಗಳಾಗಿದೆ. ಇಂತಹ ಭೀಕರ ಸ್ಥಿತಿಯಲ್ಲಿ ಮನಸ್ಸಿನ ಸ್ಥಿತಿಯನ್ನು ಸ್ಥಿರ ಇಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಬೇಕಿದೆ’ ಎಂದು ಮಾರ್ಗದರ್ಶನದಲ್ಲಿ ಹೇಳಿದರು.