ಜಮ್ಮು-ಕಾಶ್ಮೀರದಲ್ಲಿನ 5 ಜಿಲ್ಲೆಗಳ 7 ಸ್ಥಳಗಳಲ್ಲಿ ಕಾಶ್ಮೀರಿ ಹಿಂದೂಗಳಿಗೋಸ್ಕರ 2 ಸಾವಿರ 744 ಮನೆಗಳನ್ನು ನಿರ್ಮಿಸುವೆವು !

ಕಾಶ್ಮೀರಿ ಹಿಂದೂಗಳಿಗೋಸ್ಕರ ಮನೆ ಕಟ್ಟಿದರೂ, ‘ಅದನ್ನು ರಕ್ಷಿಸುವವರು ಯಾರು?’ ಎಂಬುದು ಮೂಲ ಪ್ರಶ್ನೆ. ಇಂದು ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ, ಇದು ವಸ್ತುಸ್ಥಿತಿಯಾಗಿದೆ !

ಭಾರತದಲ್ಲಿನ ಏಕೈಕ ಮುಸಲ್ಮಾನ ಪ್ರಾಬಲ್ಯವಿರುವ ರಾಜ್ಯವನ್ನು ಭಾಜಪವು ವಿಭಜಿಸಿತು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರ ಆರೋಪ

ಮುಸಲ್ಮಾನ ಪ್ರಾಬಲ್ಯ ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಹೇಗಿದೆ ಎಂಬುದನ್ನು ಇಡೀ ಪ್ರಪಂಚವೇ ನೋಡಿದೆ ಮತ್ತು ಬಹುಸಂಖ್ಯಾತ ಹಿಂದೂ ದೇಶದ ಮುಸಲ್ಮಾನರು ಹೇಗಿದ್ದಾರೆ ಇದನ್ನು ಸಹ ಪ್ರಪಂಚ ನೋಡಿದೆ ಇದನ್ನು ಮೆಹಬೂಬಾ ಮಫ್ತಿಯವರು ಯಾವಾಗಲೂ ನೆನಪಿನಲ್ಲಿ ಇಡಬೇಕು.

ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜ್ ತೀರ್ಥ ಶ್ರೀಪಾದಂಗಳರವರ ದೇಹತ್ಯಾಗ

ಗೋಕರ್ಣ ಪರ್ತಗಾಳಿ ಶ್ರೀಗಳು ೧೯೬೭ ರಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು ಅವರು ಪೂರ್ವಾಶ್ರಮದಲ್ಲಿ ಕುಂದಾಪುರ ಸಮೀಪದ ಗಂಗೊಳ್ಳಿಯವರಾಗಿದ್ದರು. ೨೦೧೬ ರಲ್ಲಿ ಶ್ರೀಗಳ ಸುವರ್ಣ ಚಾತುರ್ಮಾಸ್ಯ ಆಚರಣೆ ನಡೆದಿತ್ತು.

ದ್ವಾರಕಾ (ಗುಜರಾತ) ಇಲ್ಲಿರುವ ದ್ವಾರಕಾಧೀಶ ಮಂದಿರಕ್ಕೆ ಸಿಡಿಲಿನ ಆಘಾತ; ಆದರೆ ಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ!

‘ಮಂದಿರದ ಒಂದು ಭಾಗದ ಮೇಲೆ ಸಿಡಿಲು ಬಡಿಯುವ ಪ್ರಸಂಗ ಇದೇ ಮೊದಲ ಬಾರಿಯಾಗಿದೆ. ದ್ವಾರಕಾಧೀಶರೆಂದರೆ ಸ್ವತಃ ಶ್ರೀಕೃಷ್ಣನು ಎಲ್ಲಿ ನೆಲೆಸಿದ್ದಾನೆಯೋ, ಅಲ್ಲಿಯ ಜನರ ಮೇಲೆ ಯಾವುದೇ ಸಂಕಟ ಬರುವುದಿಲ್ಲ.

ನನ್ ಅಭಯಾ ಇವರ ಹತ್ಯೆಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಪಾದ್ರಿ ಮತ್ತು ನನ್‌ಗೆ ಪೆರೋಲ್ !

ರಾಜ್ಯದ ನನ್ ಅಭಯಾ ಹತ್ಯೆಯ ಆರೋಪಿಗಳಿಗೆ ‘ಪೆರೋಲ್’(ಒಂದು ನಿರ್ದಿಷ್ಟ ಅವಧಿಗೆ ಕೈದಿಗೆ ಷರತ್ತುಬದ್ಧ ಬಿಡುಗಡೆ) ಮೇಲೆ ಬಿಡುಗಡೆ ಮಾಡಿದ ಬಗ್ಗೆ ಕೇರಳದ ಉಚ್ಚ ನ್ಯಾಯಾಲಯವು ರಾಜ್ಯದ ಕಮ್ಯುನಿಸ್ಟ ಸರಕಾರದ ಬಳಿ ಸ್ಪಷ್ಟೀಕರಣವನ್ನು ಕೇಳಿದೆ.

ಆರೋಪಿ ಅಲ್ಬರ್ಟ್ ಫರ್ನಾಂಡಿಸ್‍ನನ್ನು ಪೊಲೀಸರು ಬಂಧಿಸಿದ ನಂತರ ದೇವಸ್ಥಾನಕ್ಕೆ ಹೋಗಿ ಕ್ಷಮಾಯಾಚನೆ !

ಬಜ್ಪೆಯ ನಿವಾಸಿಯಾಗಿರುವ ಅಲ್ಬರ್ಟ್ ಫರ್ನಾಂಡಿಸ್ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಆತ ದಿನೇಶ ಎಂಬ ಹಿಂದೂವಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನಿಂದಿಸುವ ಧ್ವನಿ ಸಂದೇಶವನ್ನು ಕಳುಹಿಸಿದ್ದನು. ಆ ಸಂದೇಶವನ್ನು ಕೇಳಿ ಹಿಂದೂ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು.

ವಾಪಿ (ಗುಜರಾತ್)ನಲ್ಲಿ ಮತಾಂತರಗೊಂಡ ೨೧ ಕ್ರೈಸ್ತ ಕುಟುಂಬಗಳಿಂದ ಪುನಃ ಹಿಂದೂ ಧರ್ಮಕ್ಕೆ ಪ್ರವೇಶ !

ಇಲ್ಲಿನ ಧರ್ಮಪುರ ಮತ್ತು ಕಪರಾಡಾದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ೨೧ ಕುಟುಂಬಗಳು ಮತ್ತೆ ಹಿಂದೂ ಧರ್ಮಕ್ಕೆ ಮರಳಿದೆ. ವಿಶ್ವ ಹಿಂದೂ ಪರಿಷತ್ತಿನ ಪ್ರಯತ್ನದಿಂದ ಅವರನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರಲಾಯಿತು. ಆಮಿಷದಿಂದಾಗಿ ಈ ಕುಟುಂಬಗಳು ಮತಾಂತರಗೊಂಡಿದ್ದವು.

ಸತತವಾಗಿ ಗೊಂದಲಗಳಿಂದ ಸದನದ ಕಾರ್ಯಕಲಾಪಗಳಾಗಲು ಬಿಡದ ಜನತಾದ್ರೋಹಿ ಜನಪ್ರತಿನಿಧಿಗಳ ಸದಸ್ಯತ್ವವನ್ನು ಸರಕಾರವು ಶಾಶ್ವತವಾಗಿ ರದ್ದುಪಡಿಸಬೇಕು, ಎಂಬುದು ಜನರ ಬೇಡಿಕೆಯಾಗಿದೆ !

‘ಪೆಗಾಸಸ್’ ಎಂಬ ಸಂಗಣಕದ ವ್ಯವಸ್ಥೆಯನ್ನು ಬಳಸಿಕೊಂಡು ಗಣ್ಯ ವ್ಯಕ್ತಿಗಳ ದೂರವಾಣಿಯನ್ನು ‘ಟ್ಯಾಪ್’ ಮಾಡಿದ ಬಗ್ಗೆ ಲೋಕಸಭೆಯಲ್ಲಿ ಜುಲೈ ೨೮ ರಂದು ಪ್ರತಿಪಕ್ಷಗಳು ಗೊಂದಲ ನಡೆಸಿದವು. ಈ ಸಮಯದಲ್ಲಿ ವಿರೋಧಕರು ಕಾಗದಪತ್ರಗಳನ್ನು ಎಸೆದರು ಮತ್ತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಶ್ಲೀಲತೆಯನ್ನು ಬಹಿರಂಗವಾಗಿ ಪ್ರಸಾರ ಮಾಡುವ ‘ಒ.ಟಿ.ಟಿ.’ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ! – ಮುಕೇಶ ಖನ್ನಾ, ಹಿರಿಯ ನಟ

ಕೇವಲ ರಾಜ ಕುಂದ್ರಾ ಅವರು ಅಶ್ಲೀಲ ಚಲನಚಿತ್ರ ನಿರ್ಮಿಸುವ ಪ್ರಕರಣ ಬೆಳಕಿಗೆ ಬಂದಿದೆ, ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳದೇ ತನಿಖಾ ಸಂಸ್ಥೆಗಳು ಅಶ್ಲೀಲತೆಯನ್ನು ಬಹಿರಂಗವಾಗಿ ಪ್ರಸಾರ ಮಾಡುವ ‘ಒ.ಟಿ.ಟಿ.’ ಮಾಧ್ಯಮಗಳ ವಿರುದ್ಧ ಮತ್ತು ಅಂತಹ ಉದ್ಯೋಗಗಳನ್ನು ತೆರೆಮರೆಯಲ್ಲಿ ಮಾಡುವ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಉತ್ತರಪ್ರದೇಶದಲ್ಲಿ ಸಂಘದ ಸ್ವಯಂಸೇವಕರ ಮಗನ ಶವ ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಪತ್ತೆ

ಇಲ್ಲಿ ಸ್ವಯಂಸೇವಕರೊಬ್ಬರ ಮಗನ ಶವವು ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಸಿಕ್ಕಿದೆ. ಅಕ್ಷಯ (ವಯಸ್ಸು ೨೨ ವರ್ಷ) ಎಂದು ಅವನ ಹೆಸರಾಗಿದೆ. ಗ್ರಾಮಸ್ಥರು ಈ ಘಟನೆಗೆ ಪೊಲೀಸರೇ ಹೊಣೆ ಎಂದು ನಿರ್ಧರಿಸಿ ‘ಪೊಲೀಸರ ಭಯದಿಂದ ಅಕ್ಷಯನು ಈ ರೀತಿಯ ಕೃತ್ಯ ಮಾಡಿದ್ದಾನೆ, ಎಂದು ಆರೋಪಿಸಿದ್ದಾರೆ.