ಇಂದೂರ (ಮಧ್ಯಪ್ರದೇಶ) ಇಲ್ಲಿಯ ಗರಬಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 4 ಮುಸಲ್ಮಾನ ಯುವಕರ ಬಂಧನ ಮತ್ತು ಬಿಡುಗಡೆ

ಹಿಂದುಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರ್ತಿಪೂಜೆಯನ್ನು ನಿರಾಕರಿಸುವವರಿಗೆ ಉಪಸ್ಥಿತರಿರಲು ಏನು ಅಧಿಕಾರ ? ಅವರಿಗೆ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಭಾಗಿ ಆಗುವುದಿದ್ದರೆ, ಕೇವಲ ಪುರುಷರೇಕೆ ? ಮುಸಲ್ಮಾನ ಯುವತಿಯರು ಏಕೆ ಉಪಸ್ಥಿತರಿರುವುದಿಲ್ಲ ? ಇಂತಹ ಪ್ರಶ್ನೆಗಳು ಹಿಂದೂಗಳ ಮನಸ್ಸಿನಲ್ಲಿ ಬರುತ್ತದೆ !

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ಗಾಂಧಿನಗರದಲ್ಲಿರುವ ಒಂದು ಖಾಸಗಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಗರಬಾದ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದ ಅದನಾನ ಶಾಹ, ಮಹಮ್ಮದ್ ಉಮರ್, ಅಬ್ದುಲ್ ಕಾದಿರ್ ಮತ್ತು ಸೈಯದ್ ಸಾಕಿಬ ಈ 4 ಮುಸಲ್ಮಾನ ಯುವಕರನ್ನು ಕಲಂ 151 ರ ಅಡಿಯಲ್ಲಿ ಬಂಧಿಸಲಾಗಿದೆ. ಬಜರಂಗದಳವು ಈ ಬಗ್ಗೆ ಪೊಲೀಸರಲ್ಲಿ ದೂರು ನೀಡಿತ್ತು. ಈ ನಾಲ್ವರಿಂದ ಪ್ರತಿಯೊಬ್ಬರಿಗೆ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿ ನಂತರ ಬಿಡುಗಡೆ ಮಾಡಲಾಯಿತು.

 ಈ ವಿಷಯವಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಶಾಂತ ಚೌಬೇ ಇವರು, ಕಾರ್ಯಕ್ರಮದಲ್ಲಿ ಈ ಯುವಕರು ಇತರ ಯುವಕರ ಜೊತೆಗೆ ವಾಗ್ವಾದ ನಡೆಸಿದ್ದರು; ಆದ್ದರಿಂದ ಕೇವಲ ತಡೆಗಟ್ಟುವ ಉಪಾಯವೆಂದು ಅವರನ್ನು ಬಂಧಿಸಲಾಗಿತ್ತು .